ಪ್ಲೀಸ್ ಕೂಲ್ ಆಗಿರಿ ಬ್ರದರ್, ನೀವು ಕೂಲಾಗಿದ್ರೆ ಸರ್ಕಾರ... ಎಂದು ಡಿಕೆಶಿಗೆ ಎಚ್​ಡಿಕೆ ಹೇಳಿದ್ಯಾಕೆ?

news18
Updated:September 6, 2018, 12:44 PM IST
ಪ್ಲೀಸ್ ಕೂಲ್ ಆಗಿರಿ ಬ್ರದರ್, ನೀವು ಕೂಲಾಗಿದ್ರೆ ಸರ್ಕಾರ... ಎಂದು ಡಿಕೆಶಿಗೆ ಎಚ್​ಡಿಕೆ ಹೇಳಿದ್ಯಾಕೆ?
  • News18
  • Last Updated: September 6, 2018, 12:44 PM IST
  • Share this:
ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.6): ದಿನದಿಂದ ದಿನಕ್ಕೆ ಒಂದೊಂದು ರೂಪ ಪಡೆದು ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಭಿನ್ನಮತ ವಿಷಯದಲ್ಲಿ ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯಪ್ರವೇಶಿಸಿದ್ದಾರೆ.

ಇಬ್ಬರ ನಡುವಿನ ಜಗಳ ತಣ್ಣಗಾಗಿಸಲು ಸಚಿವ ಡಿ.ಕೆ.ಶಿವಕುಮಾರ್ ಈ ವಿಷಯದಲ್ಲಿ ತಲೆಹಾಕಿದ್ದರು. ಆದರೆ, ಯಾವುದು ಬಗೆಹರಿಯುವ ಲಕ್ಷಣಗಳು ಕಾಣಲಿಲ್ಲ. ಬದಲಾಗಿ ಅದು, ಡಿಕೆಶಿ ಮತ್ತು ಜಾರಕಿಹೊಳಿ ಬ್ರದರ್ಸ್ ನಡುವಿನ ಕಲಹಕ್ಕೆ ಮುನ್ಸೂಚನೆಯಂತೆ ಕಂಡುಬಂತು. ಇದೀಗ ಈ ವಿಚಾರವಾಗಿ ಮುಖ್ಯಮಂತ್ರಿಗಳೇ ಮಧ್ಯಪ್ರವೇಶಿಸಿ, ಸಮಸ್ಯೆ ತಿಳಿಗೊಳಿಸಲು ಮುಂದಾಗಿದ್ದಾರೆ.

"ನನ್ನ ಮಾತು ಕೇಳಿ, ಎಲ್ಲವೂ ಸರಿಹೋಗುತ್ತೆ, ಪ್ಲೀಸ್ ಕೂಲ್ ಆಗಿರಿ ಬ್ರದರ್. ನೀವು ಕೂಲಾಗಿದ್ರೆ ಸರ್ಕಾರ. ನೀವು ನನ್ನ ಮಾತು ಕೇಳಿ, ಎಲ್ಲ ಸರಿ ಹೋಗುತ್ತೆ. ಬೆಳಗಾವಿ ವಿಚಾರವನ್ನು ಹೆಚ್ಚು ಎಳೆದಾಡಬೇಡಲು ಹೋಗಬೇಡಿ, ಸ್ವಲ್ಪ ತಾಳ್ಮೆಯಿಂದ ಇರಿ. ಯಾರು ಏನೇ ಹೇಳಿಕೆ ಕೊಟ್ಟರೂ ಕೂಲಾಗಿ ಇರಿ, ಎಲ್ಲಾ ಸರಿ ಹೋಗುತ್ತೆ. ಸಮ್ಮಿಶ್ರ ಸರ್ಕಾರ ಕೆಡವಲು ಹಲವರು ಪಿತೂರಿ ನಡೆಸ್ತಿದ್ದಾರೆ, ಅದಕ್ಕೆ ನಿಮ್ಮನ್ನು ಹೊಣೆ ಮಾಡ್ತಾರೆ. ಹಾಗಾಗಿ ನೀವು ಈ ವಿಚಾರದಲ್ಲಿ ಸ್ವಲ್ಪ ಸಮಾಧಾನದಿಂದ ಇದ್ದರೆ ಸರ್ಕಾರ ಸೇಫ್ ಆಗಿರುತ್ತೆ. ಯಾರೂ ಏನೇ ಪಿತೂರಿ ಮಾಡಿದ್ರೂ ನೀವು ಮಧ್ಯೆ ಹೋಗಿ ಕೆಟ್ಟವರಾಗಬೇಡಿ,"  ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವ ಡಿಕೆಶಿಗೆ ಸಲಹೆ ನೀಡಿದ್ದಾರೆ. ಎಚ್‌ಡಿಕೆ ಸಲಹೆ ಒಪ್ಪಿಕೊಂಡ ಶಿವಕುಮಾರ್​ ಸೈಲೆಂಟ್ ಆಗಿದ್ದಾರೆ.

ಸರ್ಕಾರದ ಮೇಲೆ ಕಾರ್ಮೋಡ ಕವಿದಿಲ್ಲ: ದಿನೇಶ್

ಜಾರಕಿಹೊಳಿ ಬ್ರದರ್ಸ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರವಾಗಿ ದೆಹಲಿಯಲ್ಲಿ ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು "ಇದರಿಂದ ಸರ್ಕಾರದ ಭವಿಷ್ಯದ ಮೇಲೆ ಕಾರ್ಮೊಡಕ ಕವಿದಿಲ್ಲ. ಕೆಲವು ವಿಚಾರಗಳನ್ನು ಚರ್ಚಿಸಿ ಸಮಸ್ಯೆ ಬಗೆಹರಿಸಿದ್ದೇವೆ. ನಿನ್ನೆ ಡಿ.ಕೆ‌.‌ ಶಿವಕುಮಾರ್ ಕೂಡ ಕ್ಲಿಯರ್ ಮಾಡಿದ್ದಾರೆ. ಇಬ್ಬರ ನಡುವೆ ಕೆಲವು ವ್ಯತ್ಯಾಸಗಳಿಂದ ಹೀಗೆ ಆಗಿದೆ. ದೊಡ್ಡ ಪಕ್ಷದಲ್ಲಿ ಇಂತಹ ಸಮಸ್ಯೆಗಳು ಬರುವುದು ಸಹಜ. ಸಮಸ್ಯೆ ಬಗೆಹರಿಸುವ ಶಕ್ತಿ ನಮ್ಮ ಪಕ್ಷದಲ್ಲಿದೆ. ರಮೇಶ್ ಜಾರಕಿಹೊಳಿ ಪಕ್ಷಕ್ಕೆ ತೊಂದರೆ ಕೊಡುವ ಕೆಲಸ ಮಾಡಲ್ಲ. ಸರಕಾರಕ್ಕೆ ಮುಜುಗರವಾಗುವ ಹೇಳಿಕೆ‌ ನೀಡದಂತೆ ಸೂಚಿಸಿದ್ದೇವೆ," ಎಂದು ತಿಳಿಸಿದರು.
First published: September 6, 2018, 12:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading