ಸಿಎಂಗೆ ಸ್ವಾತಂತ್ರ್ಯ ಇಲ್ದಿದ್ರೆ ಒಳ್ಳೆ ಆಡಳಿತ ಸಾಧ್ಯವಿಲ್ಲ: ಮಾಜಿ ಸಚಿವ ಎಸ್.ಆರ್. ಪಾಟೀಲ್

ಬಿಜೆಪಿಯಲ್ಲಿ ಆಂತರಿಕವಾಗಿ ಬಹಳಷ್ಟು ಭಿನ್ನಾಭಿಪ್ರಾಯ, ಮುಸುಕಿನ ಗುದ್ದಾಟ ಇದೆ. 15 ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಸ್ಪರ್ಧೆ ಮಾಡಿದರೆ ಕಾಂಗ್ರೆಸ್​ನವರು 12 ಸ್ಥಾನ ಗೆಲ್ಲಲಿದ್ದಾರೆ. ಉಪಚುನಾವಣೆಯ ಬಳಿಕ ಬಿಜೆಪಿ ಸರ್ಕಾರಕ್ಕೆ ಗಂಡಾಂತರ ಕಾದಿದೆ ಎಂದು ಎಸ್.ಆರ್. ಪಾಟೀಲ್ ಎಚ್ಚರಿಕೆ ನೀಡಿದ್ಧಾರೆ.

news18-kannada
Updated:September 30, 2019, 12:47 PM IST
ಸಿಎಂಗೆ ಸ್ವಾತಂತ್ರ್ಯ ಇಲ್ದಿದ್ರೆ ಒಳ್ಳೆ ಆಡಳಿತ ಸಾಧ್ಯವಿಲ್ಲ: ಮಾಜಿ ಸಚಿವ ಎಸ್.ಆರ್. ಪಾಟೀಲ್
ಎಸ್.ಆರ್. ಪಾಟೀಲ್
  • Share this:
ಬಾಗಲಕೋಟೆ(ಸೆ. 30): ಮುಖ್ಯಮಂತ್ರಿಗಳ ತಂತಿ ಮೇಲಿನ ನಡಿಗೆ ಹೇಳಿಕೆಗೆ ಪಕ್ಷಾತೀತವಾಗಿ ಸಹಾನುಭೂತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಂತಿ ನಡಿಗೆಯಲ್ಲಿ ತಾನು ಯಡಿಯೂರಪ್ಪ ಪರ ನಿಲ್ಲುತ್ತೇವೆ ಎಂದಿದ್ಧಾರೆ. ಈಗ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ್ ಅವರು ಯಡಿಯೂರಪ್ಪ ಪರವಾಗಿ ಸಹಾನುಭೂತಿ ತೋರಿದ್ದಾರೆ. ಮುಖ್ಯಮಂತ್ರಿಯಾದವರಿಗೆ ಕಾರ್ಯನಿರ್ವಹಿಸಲು ಸ್ವಾತಂತ್ರ್ಯ ಇರಬೇಕು. ಇಲ್ಲದಿದ್ದರೆ ಒಳ್ಳೆಯ ಆಡಳಿತ ಕೊಡಲು ಸಾಧ್ಯವಾಗುವುದಿಲ್ಲ ಎಂದು ಎಸ್.ಆರ್. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಯಡಿಯೂರಪ್ಪ ಅವರಿಗೆ ವರಿಷ್ಠರು ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿಲ್ಲ. ಅವರ ಕೆಲಸಗಳಿಗೆ ಅಡೆತಡೆ ಮಾಡುತ್ತಿರಬೇಕು. ಅದಕ್ಕೆ ಅವರು ನೋವಿನಿಂದ ಹಾಗೆ ಮಾತನಾಡಿರಬಹುದು. ಬಿಜೆಪಿ ರಾಜ್ಯಾಧ್ಯಕ್ಷ  ಹಾಗೂ ಯಡಿಯೂರಪ್ಪ ಮಧ್ಯೆ ಮುಸುಕಿನ ಕಾಳಗವಿದೆ. ರಾಜ್ಯಾಧ್ಯಕ್ಷರಿಗೆ ಹೈಕಮಾಂಡ್​ನ ಬೆಂಬಲವಿದೆ. ಅವರ ಮೂಲಕ ಯಡಿಯೂರಪ್ಪಗೆ ಮೂಗುದಾರ ಹಾಕುವ ಕೆಲಸ ನಡೆಯುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕರೂ ಆಗಿರುವ ಶಿವನಗೌಡ ರುದ್ರಗೌಡ ಪಾಟೀಲ ಹೇಳಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪನವರೇ ನಿಮ್ಮನ್ನು ಕಂಡರೆ ಅಯ್ಯೋ ಅನ್ಸುತ್ತೆ, ಏಕೆ ತಂತಿಯ ಮೇಲೆ ನಡೆಯುತ್ತಿದ್ದೀರಿ?; ಸಿದ್ದರಾಮಯ್ಯ ಲೇವಡಿ

ಅನರ್ಹರ ದಾರಿ ಬೇರೆ, ನಮ್ಮ ದಾರಿ ಬೇರೆ ಎಂದು ಬಿಜೆಪಿ ನಾಯಕ ಉಮೇಶ್ ಕತ್ತಿ ನೀಡಿದ ಹೇಳಿಕೆ ಪ್ರತಿಕ್ರಿಯಿಸಿದ ಎಸ್.ಆರ್. ಪಾಟೀಲ್, ಬಿಜೆಪಿಯಲ್ಲಿ ಆಂತರಿಕವಾಗಿ ಬಹಳಷ್ಟು ಭಿನ್ನಾಭಿಪ್ರಾಯ, ಮುಸುಕಿನ ಗುದ್ದಾಟ ಇದೆ. 15 ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಸ್ಪರ್ಧೆ ಮಾಡಿದರೆ ಕಾಂಗ್ರೆಸ್​ನವರು 12 ಸ್ಥಾನ ಗೆಲ್ಲಲಿದ್ದಾರೆ. ಉಪಚುನಾವಣೆಯ ಬಳಿಕ ಬಿಜೆಪಿ ಸರ್ಕಾರಕ್ಕೆ ಗಂಡಾಂತರ ಕಾದಿದೆ ಎಂದು ಎಚ್ಚರಿಕೆ ನೀಡಿದ್ಧಾರೆ.

“ಅನರ್ಹರನ್ನು ಜನರು ಕ್ಷಮಿಸುವುದಿಲ್ಲ”

ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತೊರೆದು ಹೋದ ಅನರ್ಹ ಶಾಸಕರಿಗೆ ಒಳ್ಳೆಯದಾಗುವುದಿಲ್ಲ ಎಂದು ಎಸ್.ಆರ್. ಪಾಟೀಲ್ ಶಪಿಸಿದ್ದಾರೆ. ಅನರ್ಹ ಶಾಶಕರು ಒಂದು ಪಕ್ಷದ ಚಿಹ್ನೆಯ ಮೇಲೆ ಆಯ್ಕೆಯಾದ ಬಳಿಕ ಮತ್ತೊಂದು ಪಕ್ಷದ ಸಿದ್ಧಾಂತ ಅಪ್ಪಿ ಹೋಗಿದ್ದಾರೆ. ಇವರನ್ನು ಮಾತೃಪಕ್ಷವಷ್ಟೇ ಅಲ್ಲ, ಅವರ ಕ್ಷೇತ್ರದ ಜನರೂ ಕ್ಷಮಿಸುವುದಿಲ್ಲ. ಅವರ ಜನರ ಅವಕೃಪೆಗೊಳಗಾಗಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿದೆ. ಅವರಿಂಗಂತೂ ಒಳ್ಳೆಯದಾಗುವುದಿಲ್ಲ ಎಂದು ಮಾಜಿ ಸಚಿವರೂ ಆಗಿರುವ ಎಸ್.ಆರ್. ಪಾಟೀಲ್ ತಿಳಿಸಿದ್ದಾರೆ.

(ವರದಿ: ರಾಚಪ್ಪ ಬನ್ನಿದಿನ್ನಿ)ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: September 30, 2019, 12:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading