ಪ್ರವಾಹ ಸಂತ್ರಸ್ತರ ರಕ್ಷಣೆಗೆ ಸಂಜೆಯೊಳಗೆ ಆಗಮಿಸಲಿದೆ ಕೇಂದ್ರದಿಂದ ವಿಶೇಷ ತಂಡ; ಸಿಎಂ ಯಡಿಯೂರಪ್ಪ

North Karanataka Flood: ಬೆಳಗಾವಿ ಜಿಲ್ಲೆಯಲ್ಲಿ 106 ಗ್ರಾಮಗಳು ಜಲಾವೃತಗೊಂಡಿದ್ದು, ಜನ-ಜಾನುವಾರುಗಳ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಲಿದೆ. ಇಂದು ಹೆಚ್ಚುವರಿ ಸೇನೆಯ ತುಕಡಿಗಳನ್ನು ನಿಯೋಜಿಸಲಾಗುವುದು ಎಂದು  ಅವರು ತಿಳಿಸಿದ್ದಾರೆ.

Seema.R | news18-kannada
Updated:August 8, 2019, 11:20 AM IST
ಪ್ರವಾಹ ಸಂತ್ರಸ್ತರ ರಕ್ಷಣೆಗೆ ಸಂಜೆಯೊಳಗೆ ಆಗಮಿಸಲಿದೆ ಕೇಂದ್ರದಿಂದ ವಿಶೇಷ ತಂಡ; ಸಿಎಂ ಯಡಿಯೂರಪ್ಪ
ನೆರೆ ಸಂತ್ರಸ್ತರ ಭೇಟಿ ಮಾಡಿದ ಸಿಎಂ ಬಿಎಸ್​ವೈ
  • Share this:
ಬೆಳಗಾವಿ (ಆ.08): ಉತ್ತರ ಕರ್ನಾಟಕದ ಜೀವನದಿಗಳಾದ ಕೃಷ್ಣೆ, ಮಲಪ್ರಭಾ, ಘಟಪ್ರಭಾಗಳು ರೌದ್ರನರ್ತನಕ್ಕೆ ಜನರು ಕಂಗಾಲಾಗಿದ್ದಾರೆ.  ಉಕ್ಕಿಹರಿಯುತ್ತಿರುವ ನದಿಗಳು ಜನರ ಜೀವನವನ್ನೆ ಬಲಿ ಪಡೆದಿದ್ದು, ರಕ್ಷಣೆಗಾಗಿ ಜನರು ಎದುರು ನೋಡುತ್ತಿದ್ದಾರೆ. ಪ್ರವಾಹ ಸಂತ್ರಸ್ತರ ರಕ್ಷಣೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದ್ದು ಸಂಜೆಯೊಳಗೆ ವಿಶೇಷ ರಕ್ಷಣಾ ತಂಡಗಳು ಬೆಳಗಾವಿಗೆ ಆಗಮಿಸಲಿದೆ.

ದಿನೇ ದಿನೇ ಪರಿಸ್ಥಿತಿ ವಿಕೋಪಕ್ಕೆ ತುತ್ತಾಗುತ್ತಿದ್ದು, ಜನ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕಿದೆ. ಈಗಾಗಲೇ ರಾಷ್ಟ್ರೀಯ ವಿಪತ್ತು  ನಿರ್ವಹಣಾ ತಂಡ , ರಾಜ್ಯ ವಿಪತ್ತು ನಿರ್ವಹಣಾ ತಂಡ, ಸ್ಥಳೀಯ ಪೊಲೀಸರು ಸೇರಿದಂತೆ ಅಗ್ನಿಶಾಮಕದಳ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಇನ್ನು ಗ್ರಾಮಗಳು ನಡುಗಡ್ಡೆಗಳಾಗಿರುವುದರಿಂದ ಸಂತ್ರಸ್ತರ ರಕ್ಷಣೆಗೆ ಚಾಪ್ಪರ್​ ಗಾಗಿ ಸಿಎಂ ಬಿಎಸ್​ವೈ ಮನವಿ ಮಾಡಿದ್ದಾರೆ.

ಪ್ರವಾಹ ಸಂತ್ರಸ್ತರ ರಕ್ಷಣೆಗೆ ಈಗಾಗಲೇ ಚಾಪ್ಪರ್​ಗಾಗಿ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್​ ಸಿಂಗ್​ಗೆ ಮನವಿ ಮಾಡಿದ್ದು, ಕೇಂದ್ರ ಕೂಡ ಇದಕ್ಕೆ ಸ್ಪಂದಿಸಿದೆ. ಸಂಜೆಯೊಳಗಾಗಿ ವಿಶೇಷ ರಕ್ಷಣಾ ತಂಡ ಬೆಳಗಾವಿಗೆ ಆಗಮಿಸಲಿದ್ದು, ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಿಎಂ ಟ್ವೀಟ್​ನಲ್ಲಿ ತಿಳಿಸಿದ್ದಾರೆ


ಜಿಲ್ಲೆಯಲ್ಲಿ 106 ಗ್ರಾಮಗಳು ಜಲಾವೃತಗೊಂಡಿದ್ದು, ಜನ-ಜಾನುವಾರುಗಳ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಲಿದೆ. ಇಂದು ಹೆಚ್ಚುವರಿ ಸೇನೆಯ ತುಕಡಿಗಳನ್ನು ನಿಯೋಜಿಸಲಾಗುವುದು ಎಂದು  ಅವರು ತಿಳಿಸಿದ್ದಾರೆ.

ಉಕ್ಕಿ ಹರಿಯುತ್ತಿರುವ ನದಿಗಳಿಂದಾಗಿ ಊರು, ಗ್ರಾಮಗಳು ನಡುಗಡ್ಡೆಗಳಾಗಿದ್ದು, ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಮಹಾರಾಷ್ಟ್ರ ಮಳೆ ತಗ್ಗದ ಹಿನ್ನೆಲೆಯಲ್ಲಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಗಂಜಿ ಕೇಂದ್ರದ ಆಶ್ರಯ ಪಡೆದಿರುವ ಜನರು ಮಳೆಯಿಂದಾಗಿ ತತ್ತರಿಸಿದ್ದಾರೆ.

ಇದನ್ನು ಓದಿ: ಮಲೆನಾಡಲ್ಲೂ ವರುಣನ ರುದ್ರನರ್ತನ ; ಉ.ಕದಲ್ಲಿ ಮುಂದುವರೆದ ಭಾರೀ ನೆರೆ

ಬಾಗಲಕೋಟೆ, ಬೆಳಗಾವಿ, ರಾಯಚೂರಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಗೆ ಸಿಎಂ ಬಿಎಸ್​ ಯಡಿಯೂರಪ್ಪ ಮುಂದಾಗಿದ್ದಾರೆ. ನಿನ್ನೆ ಸಂಜೆಯೇ ಬೆಳಗಾವಿಗೆ ಭೇಟಿ ನೀಡಿರುವ ಅವರು, ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ.

ಪಿ.ಎಸ್.ಐ ಕುಟುಂಬಕ್ಕೆ 50 ಲಕ್ಷ ಪರಿಹಾರಇನ್ನು ಎರಡು ದಿನಗಳ ಹಿಂದೆ ಬೆಳಗಾವಿಯಲ್ಲಿ ಭಾರೀ ಮಳೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್​ಐ ಈರಣ್ಣ ಲಟ್ಟಿ ಸಾವನ್ನಪ್ಪಿದ್ದರು. ರಾಷ್ಟ್ರೀಯ ಹೆದ್ದಾರಿ ಬಂದ್​ ಆಗಿದ್ದು, ಟ್ರಾಫಿಕ್​ ನಿಯಂತ್ರಿಸುತ್ತಿದ್ದ ಅವರಿಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಅವರ ಕುಟುಂಬಕ್ಕೂ ಸಿಎಂ 50 ಲಕ್ಷ ಪರಿಹಾರ ಘೋಷಿಸಿದ್ದಾರೆ, ಅಲ್ಲದೇ ಅವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.

First published: August 8, 2019, 11:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading