ಚುನಾವಣೆಯಲ್ಲಿ ಒಳೇಟು ಕೆಲಸ ಮಾಡಿದೆ, ಸಿಎಂ ಮಗ ಕ್ಷೇತ್ರದಲ್ಲಿ ನಿಂತು ಹಣ ಹಂಚಿದ್ದಾರೆ; ಎಚ್.ಡಿ.ರೇವಣ್ಣ ಆರೋಪ

ಈ ಚುನಾವಣೆಯಲ್ಲಿ ಒಳೇಟು ಕೆಲಸ ಮಾಡಿದೆ.  ಕುಮಾರಸ್ವಾಮಿ ಮಗಗನನ್ನು ಸೋಲಿಸಿದ ರೀತಿಯಲ್ಲೇ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸೋಲುವ ಭೀತಿಯಿಂದ ಬಿಜೆಪಿಗೆ ಮತ ಹಾಕಿಸಿದೆ. ಪೊಲೀಸ್ ಇಲಾಖೆಯಿಂದಲೇ ಈ ಕ್ಷೇತ್ರದಲ್ಲಿ ಹಣದ ಬಟಾವಡೆ ಆಗಿದೆ. ಸಿ.ಎಂ. ಪುತ್ರ ವಿಜಯೇಂದ್ರ ಈ ಕ್ಷೇತ್ರದಲ್ಲಿ ಕುಳಿತು ಹಣ ಹಂಚಿಸಿದ್ದಾರೆ ಎಂದು ರೇವಣ್ಣ ಗಂಭೀರ ಆರೋಪ ಮಾಡಿದರು.

HR Ramesh | news18-kannada
Updated:December 14, 2019, 2:35 PM IST
ಚುನಾವಣೆಯಲ್ಲಿ ಒಳೇಟು ಕೆಲಸ ಮಾಡಿದೆ, ಸಿಎಂ ಮಗ ಕ್ಷೇತ್ರದಲ್ಲಿ ನಿಂತು ಹಣ ಹಂಚಿದ್ದಾರೆ; ಎಚ್.ಡಿ.ರೇವಣ್ಣ ಆರೋಪ
ಹೆಚ್.ಡಿ. ರೇವಣ್ಣ
  • Share this:
ಮಂಡ್ಯ: ಹಾಸನದಲ್ಲಿ ನಮ್ಮ ಕುಟುಂಬವನ್ನು ತೆಗೆಯಲು ಕಾಂಗ್ರೆಸ್ ನವರು ಅದೆಷ್ಟೋ ಪ್ರಯತ್ನ ಮಾಡಿದ್ರು. ಆದರೆ, ಇವತ್ತು ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲೇ ಇಲ್ಲ ಎಂದು ಎಚ್​.ಡಿ.ರೇವಣ್ಣ ಹೇಳಿದರು.

ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಆತ್ಮಾವಲೋಕನ ಸಭೆಯಲ್ಲಿ ಕಾರ್ಯಕರ್ತರಿಗೆ ಆತ್ಮ ವಿಶ್ವಾಸ ತುಂಬಲು  ರೇವಣ್ಣ ಅವರು ತಮ್ಮ ಕುಟುಂಬದ ಉದಾಹರಣೆ ನೀಡಿದರು. ನಮ್ಮ ನಿರ್ಧಾರದಿಂದ ಈ ಕ್ಷೇತ್ರದ ಚುನಾವಣೆ ಸೋತಿದ್ದೇವೆ. ಇದಕ್ಕೆ ಸ್ಥಳೀಯ ಯಾವುದೇ ಮುಖಂಡನನ್ನು ದೂಷಣೆ ಮಾಡದು ಬೇಡ. ಇವತ್ತಿನ ಚುನಾವಣೆ ಫಲಿತಾಂಶದಿಂದ ಯಾರು ಗಾಬರಿಯಾಗಬೇಡಿ. ಈ ಚುನಾವಣೆಯಲ್ಲಿ ಒಳೇಟು ಕೆಲಸ ಮಾಡಿದೆ.  ಕುಮಾರಸ್ವಾಮಿ ಮಗಗನನ್ನು ಸೋಲಿಸಿದ ರೀತಿಯಲ್ಲೇ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸೋಲುವ ಭೀತಿಯಿಂದ ಬಿಜೆಪಿಗೆ ಮತ ಹಾಕಿಸಿದೆ. ಪೊಲೀಸ್ ಇಲಾಖೆಯಿಂದಲೇ ಈ ಕ್ಷೇತ್ರದಲ್ಲಿ ಹಣದ ಬಟಾವಡೆ ಆಗಿದೆ. ಸಿ.ಎಂ. ಪುತ್ರ ವಿಜಯೇಂದ್ರ ಈ ಕ್ಷೇತ್ರದಲ್ಲಿ ಕುಳಿತು ಹಣ ಹಂಚಿಸಿದ್ದಾರೆ ಎಂದು ರೇವಣ್ಣ ಗಂಭೀರ ಆರೋಪ ಮಾಡಿದರು.

ಇದನ್ನು ಓದಿ: ನಾನು ಮತ್ತು ಸಿದ್ಧರಾಮಯ್ಯ ಇಂಡಿಯಾ-ಪಾಕಿಸ್ತಾನದಂತೆ ಶತ್ರುಗಳಲ್ಲ- ರಾಜಕೀಯ ಬೇರೆ, ಸಂಬಂಧವೇ ಬೇರೆ; ಹೆಚ್. ವಿಶ್ವನಾಥ್

First published:December 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ