• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ರೈತರೊಬ್ಬರಿಗೆ ಸತ್ತೋದ್ರೆ ಒಳ್ಳೆಯದು ಎಂದು ಹೇಳಿದ ಸಚಿವ ಉಮೇಶ್ ಕತ್ತಿ; ಸಿಎಂ ಬಿಎಸ್​ವೈ ವಿಷಾದ!

ರೈತರೊಬ್ಬರಿಗೆ ಸತ್ತೋದ್ರೆ ಒಳ್ಳೆಯದು ಎಂದು ಹೇಳಿದ ಸಚಿವ ಉಮೇಶ್ ಕತ್ತಿ; ಸಿಎಂ ಬಿಎಸ್​ವೈ ವಿಷಾದ!

ಉಮೇಶ್ ಕತ್ತಿ

ಉಮೇಶ್ ಕತ್ತಿ

ಸಚಿವ ಉಮೇಶ್ ಕತ್ತಿ ಮಾತನಾಡಿರುವ ಆಡಿಯೋ ಇದೀಗ ಫುಲ್ ವೈರಲ್ ಆಗಿದ್ದು, ಸಚಿವರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿಷಯ ವಿವಾದಾತ್ಮಕ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿಗಳೇ ಮಧ್ಯೆಪ್ರವೇಶಿಸಿ ಘಟನೆಗೆ ವಿಷಾದ ವ್ಯಕ್ತಪಡಿಸಿರುವುದಲ್ಲದೇ, ಉತ್ತರ ಕರ್ನಾಟಕ ಭಾಗಕ್ಕೆ ಗೋಧಿ ಬೇಡವಾದರೆ 5 ಕೆ.ಜಿ. ಅಕ್ಕಿ ನೀಡುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಮುಂದೆ ಓದಿ ...
  • Share this:

    ಬೆಂಗಳೂರು: ಆಹಾರ ಮತ್ತು ನಾಗರೀಕ ಖಾತೆ ಸಚಿವರಾದ ಉಮೇಶ್ ಕತ್ತಿ ಅವರಿಗೆ ರೈತನೊಬ್ಬ 5 ಕೆ.ಜೆ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವ ವಿಚಾರವಾಗಿ ಕರೆ ಮಾಡಿ, ನಾವು ಸಾಯಬೇಕಾ ಬದುಕಬೇಕಾ ಎಂದು ಕೇಳಿದಾಗ ಸಾಯಿ ಅಂತ ಹೇಳಿರುವುದು ಭಾರೀ ವಿವಾದ ಸೃಷ್ಟಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಇರುವ ಸಚಿವರು ಹೀಗೆ ಮಾತನಾಡಿರುವುದಕ್ಕೆ ವಿಪಕ್ಷಗಳು ಸಚಿವ ಉಮೇಶ್ ಕತ್ತಿ ವಿರುದ್ಧ ಹರಿಹಾಯ್ದಿವೆ. ಈ ವಿಚಾರವಾಗಿ ಸ್ವತಃ ಮುಖ್ಯಮಂತ್ರಿಗಳೇ ವಿಷಾದ ವ್ಯಕ್ತಪಡಿಸಿದ್ದಾರೆ.


    ಉಮೇಶ್ ಕತ್ತಿ ಆಹಾರ ಮತ್ತು ನಾಗರೀಕ ಖಾತೆ ಸಚಿವರು ರೈತನೊಬ್ಬ 5 ಕೆ.ಜೆ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವುದು ಸಾಯಬೇಕಾ ಬದುಕಬೇಕಾ ಎಂದು ಕೇಳಿದಾಗ ಸಾಯಿ ಅಂತ ಹೇಳಿರುವುದು ಒಬ್ಬ ಸಚಿವನಾಗಿ ಸರಿಯಲ್ಲ . ಆ ಭಾಗದಲ್ಲಿರುವ ಜನರಿಗೆ ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿಯನ್ನು ಕೊಡಲು ವ್ಯವಸ್ಥೆ ಮಾಡಲಾಗುವುದು . ಉಮೇಶ್ ಕತ್ತಿ ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.


    ಫೋನ್ ಸಂಭಾಷಣೆಯ ಮಾತುಕತೆ


    ರೈತ: ಎರಡು ಕೆ.ಜಿ. ಅಕ್ಕಿ ಮಾಡಿದ್ದಿರಾ ಅದು ಸಾಲುತ್ತಾ ಸಾರ್.


    ಕತ್ತಿ: ಮೂರು ಕೆ.ಜಿ. ರಾಗಿ ಮಾಡಿದ್ದಿವಿ


    ರೈತ: ನಮ್ಮ ಉತ್ತರ ಕರ್ನಾಟಕ ಭಾಗದವರಿಗೆ ಎಲ್ಲಿ ರಾಗಿ ಕೊಡ್ತಾ ಇದೀರಾ?


    ಕತ್ತಿ: ಉತ್ತರ ಕರ್ನಾಟಕದಲ್ಲಿ ಜೋಳ ಮತ್ತು ಅಕ್ಕಿ ಮಾಡಿದ್ದಿವಿ.


    ರೈತ: ಅದೇ ಸಾರ್ ಸಾಲುತ್ತಾ ಸಾರ್. ಅದು, ಲಾಕ್​ಡೌನ್​ನಲ್ಲಿ ಕೆಲಸ ಇಲ್ಲ.


    ಕತ್ತಿ; ಲಾಕ್​ಡೌನ್​ ಟೈಮಲ್ಲಿ ಕೇಂದ್ರ ಸರ್ಕಾರ ಪ್ರತಿ ತಿಂಗಳು ಮೇ, ಜೂನ್​ನಲ್ಲಿ 5 ಕೆ.ಜಿ. ಅಕ್ಕಿ ಕೊಡ್ತಾ ಇದೆ.


    ರೈತ: ಯಾವಾಗ ಕೊಡ್ತಾ ಇದೀರಾ?


    ಕತ್ತಿ: ಬರೋ ತಿಂಗಳಲ್ಲಿ


    ರೈತ: ಅಲ್ಲಿಯವರೆಗೂ ಉಪವಾಸ ಇರೋದಾ ಸಾರ್. ಇಲ್ಲಾ ಸತ್ತೋಗೊದಾ?


    ಕತ್ತಿ: ಸತ್ತೋದ್ರೆ ಒಳ್ಳೆಯದು. ಅದಕ್ಕಿಂದ ಅಕ್ಕಿ ಮಾರೋದು ಅಲ್ಲೇ ಬಂದ್​ ಮಾಡಿಬಿಡಿ. ಇಡಿ ನಮಗೆ ಫೋನ್ ಮಾಡಬೇಡಿ.


    ಇದನ್ನು ಓದಿ: ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರಕ್ಕೆ ಹಲವು ಸಲಹೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ


    ಸಚಿವ ಉಮೇಶ್ ಕತ್ತಿ ಮಾತನಾಡಿರುವ ಆಡಿಯೋ ಇದೀಗ ಫುಲ್ ವೈರಲ್ ಆಗಿದ್ದು, ಸಚಿವರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿಷಯ ವಿವಾದಾತ್ಮಕ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿಗಳೇ ಮಧ್ಯೆಪ್ರವೇಶಿಸಿ ಘಟನೆಗೆ ವಿಷಾದ ವ್ಯಕ್ತಪಡಿಸಿರುವುದಲ್ಲದೇ, ಉತ್ತರ ಕರ್ನಾಟಕ ಭಾಗಕ್ಕೆ ಗೋಧಿ ಬೇಡವಾದರೆ 5 ಕೆ.ಜಿ. ಅಕ್ಕಿ ನೀಡುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

    Published by:HR Ramesh
    First published: