ರೌಡಿಗಳು, ಕ್ರಿಮಿನಲ್​ಗಳನ್ನು ಮಟ್ಟಹಾಕಿ, ಬಾಂಗ್ಲಾ ಉಗ್ರರ ಬಗ್ಗೆ ನಿಗಾ ವಹಿಸಿ; ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸೂಚನೆ

ಬೆಂಗಳೂರಲ್ಲಿ ಜನರು‌ ನೆಮ್ಮದಿಯಿಂದ ಬದುಕಬೇಕು. ಬೆಂಗಳೂರು ನಗರದಲ್ಲಿ ರಾತ್ರಿ ವೇಳೆ ಪೊಲೀಸರ ಗಸ್ತು ಹೆಚ್ಚಳ ಮಾಡಿ. ಹೆಚ್ಚಾಗಿರುವ ಅಪರಾಧ ಪ್ರಕರಣಗಳನ್ನು ತಡೆಯಲು ಅಗತ್ಯ ಕ್ರಮ ವಹಿಸಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಸಭೆಯಲ್ಲಿ  ಹಿರಿಯ ಪೊಲೀಸರಿಗೆ ಸಿಎಂ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದರು.

HR Ramesh | news18-kannada
Updated:October 19, 2019, 10:23 PM IST
ರೌಡಿಗಳು, ಕ್ರಿಮಿನಲ್​ಗಳನ್ನು ಮಟ್ಟಹಾಕಿ, ಬಾಂಗ್ಲಾ ಉಗ್ರರ ಬಗ್ಗೆ ನಿಗಾ ವಹಿಸಿ; ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸೂಚನೆ
ಬಿಎಸ್​ ಯಡಿಯೂರಪ್ಪ
HR Ramesh | news18-kannada
Updated: October 19, 2019, 10:23 PM IST
ಬೆಂಗಳೂರು: ರೌಡಿಗಳು, ಕ್ರಿಮಿನಲ್​ಗಳನ್ನು ಮಟ್ಟಹಾಕಿ, ಬಾಂಗ್ಲಾ ಭಯೋತ್ಪಾದಕರ ಬಗ್ಗೆ ನಿಗಾ ವಹಿಸಿ ಎಂದಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ ನಿಡಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಸೂಚನೆ ನೀಡಿದ ಸಿಎಂ ಬಿಎಸ್​ವೈ, ರಾಜ್ಯದಲ್ಲಿ ದಿನೇ ದಿನೇ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ರೌಡಿಗಳ ಅಟ್ಟಹಾಸ, ಕೊಲೆ, ಕಳ್ಳತ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಅಲ್ಲದೇ ಕ್ರಿಮಿನಲ್ ಚಟುವಟಿಕೆಗಳು ಕೂಡ ಹೆಚ್ಚಾಗಿವೆ. ಇವುಗಳನ್ನು ತಡೆಯಲು ಸೂಕ್ತ ಕ್ರಮ ವಹಿಸಿ ಎಂದು ಹೇಳಿದರು.

ಬಾಂಗ್ಲಾದೇಶ ಭಯೋತ್ಪಾದಕರ ಬಗ್ಗೆ ವಿಶೇಷ ನಿಗಾ ವಹಿಸಿ. ಬಾಂಗ್ಲಾ ಭಯೋತ್ಪಾದಕರ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ವರದಿ ನೀಡಿದೆ. ಬಾಂಗ್ಲಾ ವಲಸೆಗಾರರನ್ನು ಸ್ಥಳಾಂತರ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಿ. ದೀಪಾವಳಿ ‌ಹಬ್ಬ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿ. ಹಬ್ಬದ ವೇಳೆ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಹದ್ದಿನ ಕಣ್ಣಿಡಿ. ಮುಂಬಯಿ, ಚೆನ್ನೈ ಮಾದರಿಯಲ್ಲಿ ಬೆಂಗಳೂರಿನಲ್ಲೂ ಭಯೋತ್ಪಾದಕರ ನಿಗ್ರಹ ದಳ ಮತ್ತು ಠಾಣೆಯನ್ನು ತೆರೆಯುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ‌ ತಿಂಗಳು ಇದು ಕಾರ್ಯ ಆರಂಭಿಸಲಿದೆ ಎಂದರು.

ಇದನ್ನು ಓದಿ: ರಾಜೀವ್​​ ಗಾಂಧಿಗೆ ಭಾರತ ರತ್ನ ಕೊಟ್ಟ ಕಾಂಗ್ರೆಸ್​ಗೆ ಸಾವರ್ಕರ್​​ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ: ಸಂಸದ ಪ್ರಹ್ಲಾದ್​ ಜೋಶಿ

ಬೆಂಗಳೂರಲ್ಲಿ ಜನರು‌ ನೆಮ್ಮದಿಯಿಂದ ಬದುಕಬೇಕು. ಬೆಂಗಳೂರು ನಗರದಲ್ಲಿ ರಾತ್ರಿ ವೇಳೆ ಪೊಲೀಸರ ಗಸ್ತು ಹೆಚ್ಚಳ ಮಾಡಿ. ಹೆಚ್ಚಾಗಿರುವ ಅಪರಾಧ ಪ್ರಕರಣಗಳನ್ನು ತಡೆಯಲು ಅಗತ್ಯ ಕ್ರಮ ವಹಿಸಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ಎಂದು ಸಭೆಯಲ್ಲಿ  ಹಿರಿಯ ಪೊಲೀಸರಿಗೆ ಸಿಎಂ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದರು.

First published:October 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...