HOME » NEWS » State » CM BSY HAS APPROVED PURCHASE OF 1 CRORE DOSES OF COVID VACCINE SESR

Covid Vaccine: ಕೇಂದ್ರದಿಂದ 1 ಕೋಟಿ ಲಸಿಕೆ ಖರೀದಿಗೆ ಸಿಎಂ ಬಿಎಸ್​ವೈ ಅನುಮೋದನೆ

ರಾಜ್ಯ ಸರ್ಕಾರ 400 ಕೋಟಿ ವೆಚ್ಚದಲ್ಲಿ 1 ಕೋಟಿ ಕೋವಿಶೀಲ್ಡ್​ ಲಸಿಕೆ ಖರಿದೀಸಲು ನಿರ್ಧರಿಸಿದೆ. 18 ರಿಂದ 44 ವರ್ಷದೊಳಗಿನ ವ್ಯಕ್ತಿಗಳಿಗೆ ಬಳಸುವ ಲಸಿಕೆಗೆ ಮನವಿ ಮಾಡಲಾಗಿದೆ.

news18-kannada
Updated:April 22, 2021, 8:56 PM IST
Covid Vaccine: ಕೇಂದ್ರದಿಂದ 1 ಕೋಟಿ ಲಸಿಕೆ ಖರೀದಿಗೆ ಸಿಎಂ ಬಿಎಸ್​ವೈ ಅನುಮೋದನೆ
ವ್ಯಾಕ್ಸಿನ್
  • Share this:
ಕೇಂದ್ರ ಸರ್ಕಾರ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್​ ಲಸಿಕೆ ಪಡೆಯುವಂತೆ ತಿಳಿಸಿದೆ. ಇದೇ ಬೆನ್ನಲ್ಲೇ ಲಸಿಕೆಗಾಗಿ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಬೇಡಿಕೆ ಇಡುತ್ತಿದ್ದು, ಖರೀದಿಗೆ ಮುಂದಾಗಿವೆ. ಈಗ ಕರ್ನಾಟಕ ಸರ್ಕಾರ ಕೂಡ ಲಸಿಕೆ ಖರೀದೆಗೆ ಅನುಮೋದನೆ ನೀಡಿದೆ. ಕೋವಿಡ್​ ನಿಯಂತ್ರಣ ಕುರಿತು ಸಿಎಂ ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರ 400 ಕೋಟಿ ವೆಚ್ಚದಲ್ಲಿ 1 ಕೋಟಿ ಕೋವಿಶೀಲ್ಡ್​ ಲಸಿಕೆ ಖರಿದೀಸಲು ನಿರ್ಧರಿಸಿದೆ. 18 ರಿಂದ 44 ವರ್ಷದೊಳಗಿನ ವ್ಯಕ್ತಿಗಳಿಗೆ ಬಳಸುವ ಲಸಿಕೆಗೆ ಮನವಿ ಮಾಡಲಾಗಿದೆ. ಈ ಮೂಲಕ ರಾಜ್ಯದ ಜನತೆಗೆ ಲಸಿಕೆ ವಿತರಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಮೇ. 1ರಿಂದ ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಯಲ್ಲಿಯೂ ಲಸಿಕೆ ವಿತರಣೆ ಕಾರ್ಯ ನಡೆಯಲಿದೆ. ಈಗಾಗಲೇ ಲಸಿಕೆ ಪಡೆಯಲು ಹೆಸರು ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಕೋವಿನ್​ ವೆಬ್​ಸೈಟ್​ನಲ್ಲಿ ಹೆಸರು ದಾಖಲಿಸದವರು ನೇರವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸರದಿ ಪ್ರಕಾರ ಲಸಿಕೆ ಪಡೆಯಲು ಕೂಡ ಅವಕಾಶ ನೀಡಲಾಗಿದೆ.

ಈಗಾಗಲೇ ರಾಜ್ಯದಲ್ಲಿ ಪ್ರತಿನಿತ್ಯ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಕಾರ್ಯ ನಡೆಯುತ್ತಿದೆ. ಪ್ರತಿನಿತ್ಯ ರಾಜ್ಯದಲ್ಲಿ ಮೂರು ಲಕ್ಷ ಕೊರೋನಾ ಲಸಿಕೆ ಗುರಿ ನೀಡಲಾಗಿದೆ, ಜಿಲ್ಲೆಗಳ ಲಸಿಕೆ ಬೇಡಿಕೆಗೆ ಅನುಗುಣವಾಗಿ ವಿತರಣೆ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಜಾಗೃತಿ ಕೂಡ ಮೂಡಿಸಲಾಗಿದೆ.

ಜನವರಿಯಲ್ಲಿ ಮೊದಲ ಹಂತದಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಣೆ ನಡೆಸಲಾಗಿತ್ತು. ಇದಾದ ಬಳಿಕ ಸರ್ಕಾರ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮತ್ತು 45 ಮೇಲ್ಪಟ್ಟ ಅನಾರೋಗ್ಯ ಪೀಡಿತರಿಗೆ ಲಸಿಕೆ ವಿತರಣೆ ನಡೆಸಿತು. ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಲಸಿಕೆ ನೀಡಲಾಗಿತ್ತು. ಇದೀಗ ದೇಶದ ಎಲ್ಲಾ ವಯಸ್ಕ ನಾಗರಿಕರು ಈ ಲಸಿಕೆ ಪಡೆಯಲು ಅವಕಾಶ ನೀಡಲಾಗಿದೆ. ದೇಶದಲ್ಲಿ ಸೋಂಕು ಹೆಚ್ಚಳದಿಂದ ಸರ್ಕಾರ ದೇಶದಲ್ಲಿ ದೊಡ್ಡ ಮಟ್ಟದ ಲಸಿಕೆ ವಿತರಣೆಗೆ ಚಾಲನೆ ನೀಡಿದೆ

ಲಸಿಕೆಯನ್ನು ಪಡೆಯುವ ಮೂಲಕ ಕೊರೋನಾ ವಿರುದ್ಧ ದೇಶ ಸೋಲುವುದನ್ನು ನಾವು ತಪ್ಪಿಸಬಹುದು. ಮೂರನೇ ಹಂತದ ಲಸಿಕೆ ವಿತರಣೆಯಲ್ಲಿ ದೇಶದ ಎಲ್ಲಾ ವಯಸ್ಕರು ಕೂಡ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ . ಕಡಿಮೆ ಸಮಯದ ಅವಧಿಯಲ್ಲಿ ಗರಿಷ್ಠ ಸಂಖ್ಯೆ ಜನರು ಲಸಿಕೆ ಪಡೆಯಲಿ ಸಮರ್ಥರಾಗಿದ್ದಾರೆ ಎಂಬುದನ್ನು ಖಚಿತ ಪಡಿಸಲಿಕೊಳ್ಳಲು ಸರ್ಕಾರ ಒಂದು ವರ್ಷದಿಂದ ಶ್ರಮಿಸುತ್ತಿದೆ. ಭಾರತವೂ ದಾಖಲೆಯ ವೇಗದಲ್ಲಿ ಲಸಿಕೆ ನೀಡುತ್ತಿದೆ. ಇದನ್ನು ಇನ್ನೂ ಹೆಚ್ಚಿನ ವೇಗದಲ್ಲಿ ಮುಂದುವರೆಸಬೇಕು ಎಂದು ಪ್ರಧಾನಿಗಳು ತಿಳಿಸಿದ್ದರು.
Published by: Seema R
First published: April 22, 2021, 8:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories