ಕುರುಬ ಸಮುದಾಯದ ಆಕ್ರೋಶಕ್ಕೆ ಬೆದರಿದ ಸಿಎಂ; ಕನಕದಾಸರ ಹೆಸರಿಡಲು ಅಭ್ಯಂತರವಿಲ್ಲ ಎಂದ ಬಿಎಸ್​ವೈ

ಕುರುಬ ಸಮುದಾಯದ ಸ್ವಾಮೀಜಿ ವಿರುದ್ಧ  ಅವಹೇಳನಕಾರಿ ಹೇಳಿಕೆ ನೀಡಿದ ಸಚಿವ ಮಾಧುಸ್ವಾಮಿ  ರಾಜೀನಾಮೆಗೆ ಒತ್ತಾಯಿಸಿ ನಾಳೆ ಹುಳಿಯಾರು ಪಟ್ಟಣ ಬಂದ್​ಗೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವಾದ ದೊಡ್ಡವಾಗಿ ಬೆಳೆಯುವುದು ಬೇಡ ಎಂಬ ಕಾರಣಕ್ಕೆ ಸಿಎಂ ಬಿಎಸ್​ವೈ ಅವರು ಇಂದು ಬೆಳಗ್ಗೆ ಕ್ಷಮೆ ಕೋರಿದ್ದರು. ಇದೀಗ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

HR Ramesh | news18-kannada
Updated:November 20, 2019, 8:55 PM IST
ಕುರುಬ ಸಮುದಾಯದ ಆಕ್ರೋಶಕ್ಕೆ ಬೆದರಿದ ಸಿಎಂ; ಕನಕದಾಸರ ಹೆಸರಿಡಲು ಅಭ್ಯಂತರವಿಲ್ಲ ಎಂದ ಬಿಎಸ್​ವೈ
ಬಿ.ಎಸ್​. ಯಡಿಯೂರಪ್ಪ.
  • Share this:
ಬೆಂಗಳೂರು: ತುಮಕೂರಿನ ಚಿಕ್ಕನಾಯಕನಹಳ್ಳಿಯ ಹುಳಿಯಾರ್- ಹೊಸದುರ್ಗ ರಸ್ತೆ ವೃತ್ತಕ್ಕೆ ಕನಕದಾಸರ ಹೆಸರು ಇಡುವ ವಿಚಾರವಾಗಿ ಎದ್ದಿರುವ ವಿವಾದ ಸಂಬಂಧ ಸಿಎಂ ಯಡಿಯೂರಪ್ಪ ಅವರು ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ವೃತ್ತಕ್ಕೆ ಕನಕದಾಸರ ಹೆಸರು ನಾಮಕರಣ ಮಾಡುವ ಬಗ್ಗೆ ಎದ್ದಿರುವ ಗೊಂದಲ ಅನಾವಶ್ಯಕ. ವೃತ್ತಕ್ಕೆ ಕನಕದಾಸರ ಹೆಸರಿಡಲು ಯಾವ ಅಭ್ಯಂತರವೂ ಇಲ್ಲ, ವಿರೋಧವೂ ಇಲ್ಲ. ಮಂತ್ರಿ ಮಾಧುಸ್ವಾಮಿ ಕೂಡ ಯಾವುದೇ ವಿರೋಧ ಮಾಡಿಲ್ಲ ಎಂದು ಸಿಎಂ ಹೇಳಿದ್ದಾರೆ.

ಮಾಧುಸ್ವಾಮಿ ಹೇಳಿಕೆ ಬಗ್ಗೆ ಉಂಟಾದ ಗೊಂದಲದ ಬಗ್ಗೆ ಬೆಳಿಗ್ಗೆ ನಾನು ಕ್ಷಮೆ ಕೇಳಿದ್ದೇನೆ. ಈಗ ಕನಕಪೀಠದ ಈಶ್ವಾರನಂದಪುರಿ ಸ್ವಾಮೀಜಿ ಕೂಡ ಏಕವಚನದಲ್ಲಿ ನಿಂದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಮಯದಲ್ಲಿ ಯಾರು ಕೂಡ ಉದ್ವೇಗಕ್ಕೆ ಒಳಗಾಗದಿರಿ. ಉಪ ಚುನಾವಣೆ ಮುಗಿದ ನಂತರ ಸರ್ಕಾರ ದ ವತಿಯಿಂದ ವೃತ್ತ ನಿರ್ಮಿಸಿ,  ಆ ವೃತ್ತಕ್ಕೆ ಕನಕದಾಸರ ಹೆಸರು ನಾಮಕರಣ ಮಾಡುತ್ತೇನೆ. ಈ ಹಿಂದೆ ಕನಕ ಗುರು ಪೀಠ ಅಭಿವೃದ್ಧಿಗೆ ಶ್ರಮಿಸಿದ್ದು ನಮ್ಮ ಬಿಜೆಪಿ ಸರ್ಕಾರ. ನನ್ನ ಜೀವನದಲ್ಲಿ ಗುರುಗಳಿಗೆ, ಸಂತರುಗಳಿಗೆ, ದಾಸರಿಗೆ ಮತ್ತು ಶರಣರಿಗೆ ಅತ್ಯಂತ ಗೌರವದಿಂದ ಕಂಡಿದ್ದೇನೆ. ಹೀಗಾಗಿ ಕನಕ ವೃತ್ತದ ಬಗ್ಗೆ ಎದ್ದಿರುವ ವಿವಾದಕ್ಕೆ ತೆರೆ ಎಳೆಯಬೇಕು. ಎಲ್ಲರೂ ಶಾಂತಿ ಕಾಪಡಬೇಕು. ಯಾವುದೇ ಪ್ರತಿಭಟನೆ ಮತ್ತು ಬಂದ್ ಮಾಡದಂತೆ ಸಿಎಂ ಬಿಎಸ್​ವೈ ಮನವಿ ಮಾಡಿದ್ದಾರೆ.

ತುಮಕೂರಿನ ಚಿಕ್ಕನಾಯಕನಹಳ್ಳಿಯ ಹುಳಿಯಾರ್ ವೃತ್ತದಿಂದ ಕನಕದಾಸರ ಹೆಸರು ಕೈಬಿಟ್ಟಿರುವುದು ಈ ವಿವಾದಕ್ಕೆ ಮೂಲ ಕಾರಣ. 20 ವರ್ಷಗಳ ಹಿಂದೆ ಕನಕ ಯುವ ಸೇನೆಯ ಯುವಕರು ಹುಳಿಯಾರ್​ ಸರ್ಕಲ್‍ಗೆ ಕನಕದಾಸ ಸರ್ಕಲ್ ಎಂಬ ನಾಮಫಲಕ ಹಾಕಿದ್ದರು. ಕನಕದಾಸ ಸರ್ಕಲ್​ ಎಂದು ಮರುನಾಮಕರಣ ಮಾಡಲು ಗ್ರಾಮಪಂಚಾಯಿತಿ ಸಭೆಯಲ್ಲಿ ಒಪ್ಪಿಗೆ ಕೂಡ ಸಿಕ್ಕಿತ್ತು. ಇತ್ತೀಚೆಗೆ ಹೈವೇ ಕಾಮಗಾರಿ ಹಿನ್ನೆಲೆಯಲ್ಲಿ ಈ ಬೋರ್ಡ್​ಅನ್ನು ತೆಗೆಯಲಾಗಿತ್ತು. ಈ ಕಾಮಾಗಾರಿ ಪೂರ್ಣಗೊಂಡಿದ್ದು, ಸರ್ಕಲ್​ಗೆ ಮತ್ತೆ ಕನಕದಾಸರ ಹೆಸರನ್ನು ಹಾಕಲು ಮುಂದಾದಾಗ ಲಿಂಗಾಯತ ಸಮುದಾದಯದವರು ಡಾ. ಶಿವಕುಮಾರಸ್ವಾಮಿ ಹೆಸರಿಡಬೇಕು ಎಂದು ಒತ್ತಾಯಿಸಿದ್ದರು. ಈ ವಿಚಾರದಲ್ಲಿ ಭಾರೀ ಗಲಭೆ ಕೂಡ ಉಂಟಾಗಿತ್ತು.  ಈ ವೇಳೆ ಕುರುಬ ಸಮುದಾಯದ ಪ್ರಭಾವಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿಯನ್ನು‌ ಮಾಧುಸ್ವಾಮಿ ನಿಂದಿಸಿದ್ದರು. ಅಲ್ಲದೆ, ಕ್ಷಮೆಯಾಚಿಸುವ ಮಾತೇ ಇಲ್ಲ ಎಂದಿದ್ದರು.

ಇದನ್ನು ಓದಿ: ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ನಾಳೆ ಹುಳಿಯಾರು ಪಟ್ಟಣ ಬಂದ್

ಕುರುಬ ಸಮುದಾಯದ ಸ್ವಾಮೀಜಿ ವಿರುದ್ಧ  ಅವಹೇಳನಕಾರಿ ಹೇಳಿಕೆ ನೀಡಿದ ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ನಾಳೆ ಹುಳಿಯಾರು ಪಟ್ಟಣ ಬಂದ್​ಗೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವಾದ ದೊಡ್ಡವಾಗಿ ಬೆಳೆಯುವುದು ಬೇಡ ಎಂಬ ಕಾರಣಕ್ಕೆ ಸಿಎಂ ಬಿಎಸ್​ವೈ ಅವರು ಇಂದು ಬೆಳಗ್ಗೆ ಕ್ಷಮೆ ಕೋರಿದ್ದರು. ಇದೀಗ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

First published:November 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ