ಗ್ರಾಮಗಳಿಗೆ ಅಲ್ಲ, ಬಡಾವಣೆಗೆ 10 ಕೋಟಿ ನೀಡಿದ ದಾನಿಗಳ ಹೆಸರಿಡಲು ಚಿಂತನೆ; ಸಿಎಂ ಬಿಎಸ್​ ಯಡಿಯೂರಪ್ಪ

ಗ್ರಾಮಗಳಿಗೆ ಮರುನಾಮಕರಣ ಮಾಡುವ ಯಾವುದೇ ಆಲೋಚನೆ ಇಲ್ಲ. 10 ಕೋಟಿಗೂ ಹೆಚ್ಚಿಗೆ ದೇಣಿಗೆ ನೀಡಿದವರ ಹೆಸರನ್ನು ಆ ಗ್ರಾಮಗಳ ಬಡಾವಣೆಗೆ ಇಡಲಾಗುವುದು ಎಂದು ಸಿಎಂ ಟ್ವಿಟರ್​ನಲ್ಲಿ ಸ್ಪಷ್ಟಪಡಿಸಿದ್ದಾರೆ

Seema.R | news18-kannada
Updated:August 16, 2019, 10:51 AM IST
ಗ್ರಾಮಗಳಿಗೆ ಅಲ್ಲ, ಬಡಾವಣೆಗೆ 10 ಕೋಟಿ ನೀಡಿದ ದಾನಿಗಳ ಹೆಸರಿಡಲು ಚಿಂತನೆ; ಸಿಎಂ ಬಿಎಸ್​ ಯಡಿಯೂರಪ್ಪ
ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು (ಆ.16): ಪ್ರವಾಹ ಪೀಡಿತ ಪ್ರದೇಶಗಳ ಪುನಶ್ಚೇತನಕ್ಕೆ 10 ಕೋಟಿ ನೀಡಿದ ದಾನಿಗಳ ಹೆಸರನ್ನು ಗ್ರಾಮಕ್ಕೆ ಇಡುವ  ಕುರಿತ ಸಿಎಂ ನಿರ್ಧಾರಕ್ಕೆ ವ್ಯಾಪಕ ಟೀಕೆ ಕೇಳಿ ಬಂದ ಹಿನ್ನೆಲೆ ಯಡಿಯೂರಪ್ಪ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಗ್ರಾಮಗಳ ಹೆಸರನ್ನು ಬದಲಾಯಿಸುವ ಕುರಿತು ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಬದಲಾಗಿ ದೇಣಿಗೆ ನೀಡಿದವರ ಹೆಸರನ್ನು ಆ ಗ್ರಾಮಗಳ ಬಡಾವಣೆಗೆ ಇಡಲಾಗುವುದು ಎಂದು ಅವರು  ಯೂ ಟರ್ನ್​ ಹೊಡೆದಿದ್ದಾರೆ.

ರಾಜ್ಯದ ಮುಕ್ಕಾಲು ರಾಜ್ಯ ಪ್ರವಾಹಕ್ಕೆ ಒಳಗಾಗಿದ್ದು, ಇವುಗಳ ಮರುನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬೇಕಾಗಿದೆ. ಈ ಹಿನ್ನೆಲೆ ಸಾರ್ವಜನಿಕ ಉದ್ಯಮಿ ಹಾಗೂ ಕೈಗಾರಿಕೋದ್ಯಮಗಳು ದೇಣಿಗೆ ಆಹ್ವಾನಿಸಿ ಮಾತನಾಡಿದ್ದ ಅವರು, 10 ಕೋಟಿಗೂ ಹೆಚ್ಚಿಗೆ ದೇಣಿಗೆ ನೀಡಿದ ದಾನಿ, ಸಂಸ್ಥೆಗಳ ಹೆಸರನ್ನು ಪುನರ್​ನಿರ್ಮಾಣಗೊಂಡ ನೆರೆ ಪೀಡಿತ ಗ್ರಾಮಗಳಿಗೆ ಇಡಲಾಗುವುದು ಎಂದಿದ್ದರು.


Loading...

ಮುಖ್ಯಮಂತ್ರಿಗಳ ಈ ನಿರ್ಧಾರಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗಿತ್ತು. ನೆರೆಯಿಂದ ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರು ಈಗ ಸಿಎಂ ಬಿಎಸ್​ವೈ ತುಘಲಕ್​ ನಿರ್ಧಾರದಿಂದಾಗಿ ತಮ್ಮ ಗ್ರಾಮದ ಹೆಸರನ್ನೂ ಕಳೆದುಕೊಳ್ಳುವಂತೆ ಆಗಿದೆ., ಈ ರೀತಿ ಮಾಡಬೇಡಿ. ಕರ್ನಾಟಕವನ್ನು ಮಾರಾಟಕ್ಕೆ ಇಡಬೇಡಿ ಎಂದು ಬಿಎಸ್​ವೈ ನಿರ್ಧಾರಕ್ಕೆ ಜೆಡಿಎಸ್​ ತೀವ್ರ ಖಂಡನೆ ವ್ಯಕ್ತಪಡಿಸಿತು.

ಇದನ್ನು ಓದಿ: 10 ಕೋಟಿ ದೇಣಿಗೆ ನೀಡಿದ ಸಂಸ್ಥೆ ಹೆಸರು ನೆರೆಪೀಡಿತ ಗ್ರಾಮಕ್ಕೆ ನಾಮಕರಣ; ರಾಜ್ಯವನ್ನು ಮಾರಾಟಕ್ಕೆ ಇಡಬೇಡಿ ಎಂದ ಜೆಡಿಎಸ್

ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಗ್ರಾಮಗಳಿಗೆ ಮರುನಾಮಕರಣ ಮಾಡುವ ಯಾವುದೇ ಆಲೋಚನೆ ಇಲ್ಲ. 10 ಕೋಟಿಗೂ ಹೆಚ್ಚಿಗೆ ದೇಣಿಗೆ ನೀಡಿದವರ ಹೆಸರನ್ನು ಆ ಗ್ರಾಮಗಳ ಬಡಾವಣೆಗೆ ಇಡಲಾಗುವುದು ಎಂದು ಟ್ವಿಟರ್​ನಲ್ಲಿ ಸ್ಪಷ್ಟಪಡಿಸಿದ್ದಾರೆ

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...