HOME » NEWS » State » CM BSTEDDYURAPPA SAYS I WILL STRIVE FOR THE HONEST LIFE OF THE FORMERS UNTIL THE LAST BREATH OF MY LIFE HRN MAK

ನನ್ನ ಬದುಕಿನ‌ ಕೊನೆ ಉಸಿರು ಇರುವವರೆಗೆ ರೈತರ ಪ್ರಾಮಾಣಿಕ ಬದುಕಿಗಾಗಿ ಶ್ರಮಿಸುತ್ತೇನೆ; ಬಿ.ಎಸ್​. ಯಡಿಯೂರಪ್ಪ

ರೈತನ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ನಿರ್ಧಾರ ತೆಗೆದುಕೊಳ್ಳಲಾಗುವುದು. ಹೊಳೆಯಲ್ಲಿ ಅನವಶ್ಯಕವಾಗಿ ನೀರು ಹರಿದು ಹೋಗುವುದನ್ನು ತಪ್ಪಿಸಿ, ಕೆರೆ ತುಂಬಿಸುವ ಮೂಲಕ ಅಂತರ್ಜಲ ವೃದ್ದಿಯಾಗಲು ಕ್ರಮ. ಕೇವಲ ಶಿಕಾರಿಪುರ ಕ್ಷೇತ್ರಕ್ಕೆ ಮಾತ್ರ ಹಣ ಕೊಡುತ್ತಿಲ್ಲ ರಾಜ್ಯದ 224 ಕ್ಷೇತ್ರಗಳಿಗೂ ಅನುದಾನ ನೀಡುತ್ತಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

news18-kannada
Updated:February 24, 2020, 7:51 PM IST
ನನ್ನ ಬದುಕಿನ‌ ಕೊನೆ ಉಸಿರು ಇರುವವರೆಗೆ ರೈತರ ಪ್ರಾಮಾಣಿಕ ಬದುಕಿಗಾಗಿ ಶ್ರಮಿಸುತ್ತೇನೆ; ಬಿ.ಎಸ್​. ಯಡಿಯೂರಪ್ಪ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಶಿವಮೊಗ್ಗ (ಫೆಬ್ರವರಿ 24); ಇಡೀ ರಾಜ್ಯದ ಅಭಿವೃದ್ಧಿಯಾಗಬೇಕು, ರೈತರು ಸ್ವಾವಲಂಭಿಗಳಾಗಿ ಬದುಕು ಕಟ್ಟಿಕೊಳ್ಳುವಂತಾಗಬೇಕು. ರೈತರ ಪ್ರಾಮಾಣಿಕ ಬದುಕಿಗಾಗಿ ನಾನು ನನ್ನ ಕೊನೆಯ ಉಸಿರಿರುವವರೆಗೆ ಹೋರಾಟ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ಶಿವಮೊಗ್ಗದ ಶಿಕಾರಿಪುರದಲ್ಲಿ 1,250 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಭಾಷಣ ಮಾಡಿದ ಸಿ.ಎಂ. ಯಡಿಯೂರಪ್ಪ, "ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಇತರೆ ಕಾಮಗಾರಿಗಳನ್ನು ಒಂದು ವರ್ಷದಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ. ಇನ್ನು ಮೂರು ವರ್ಷದಲ್ಲಿ ಶಿಕಾರಿಪುರ, ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದಲ್ಲಿ ನೀರಾವರಿಗೆ ಆದ್ಯತೆ ನೀಡಲಾಗುವುದು.

ರೈತನ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ನಿರ್ಧಾರ ತೆಗೆದುಕೊಳ್ಳಲಾಗುವುದು. ಹೊಳೆಯಲ್ಲಿ ಅನವಶ್ಯಕವಾಗಿ ನೀರು ಹರಿದು ಹೋಗುವುದನ್ನು ತಪ್ಪಿಸಿ, ಕೆರೆ ತುಂಬಿಸುವ ಮೂಲಕ ಅಂತರ್ಜಲ ವೃದ್ದಿಯಾಗಲು ಕ್ರಮ. ಕೇವಲ ಶಿಕಾರಿಪುರ ಕ್ಷೇತ್ರಕ್ಕೆ ಮಾತ್ರ ಹಣ ಕೊಡುತ್ತಿಲ್ಲ ರಾಜ್ಯದ 224 ಕ್ಷೇತ್ರಗಳಿಗೂ ಅನುದಾನ ನೀಡುತ್ತಿದ್ದೇನೆ.

ಇಡೀ ರಾಜ್ಯ ಅಭಿವೃದ್ಧಿ ಆಗಬೇಕು ಎಂಬುದು ನಮ್ಮ‌ ಉದ್ದೇಶ. ನನ್ನ ಬದುಕಿನ‌ ಕೊನೆ ಉಸಿರು ಇರುವವರೆಗೆ ರೈತರ ಪ್ರಾಮಾಣಿಕ ಬದುಕಿಗೆ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ. ಬೆಂಗಳೂರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಕೆಲವರು ಒತ್ತುವರಿ‌ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. ಮಹಿಳೆಯರು ಮತ್ತು ರೈತರು ಸ್ವಾವಲಂಭಿಯಾಗಿ ಬದುಕಲು ಬಜೆಟ್ ನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಲಾಗುವುದು"  ಎಂದು ಎಂದು ಸಿಎಂ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬಿಜೆಪಿಯ ಎಲ್ಲವನ್ನೂ ಟೀಕೆ ಮಾಡುವುದೊಂದೆ ಕಾಂಗ್ರೆಸ್ ಜಾಯಮಾನ; ನಳಿನ್ ಕುಮಾರ್ ಕಟೀಲ್ ಕಿಡಿ
First published: February 24, 2020, 7:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories