• Home
  • »
  • News
  • »
  • state
  • »
  • ಬಹು ದಿನಗಳ ಬಳಿಕ ಸಿಎಂ ತವರು ಜಿಲ್ಲಾ ಪ್ರವಾಸ; ಅ.19ಕ್ಕೆ ಯಡಿಯೂರಪ್ಪ ಶಿವಮೊಗ್ಗಕ್ಕೆ ಭೇಟಿ

ಬಹು ದಿನಗಳ ಬಳಿಕ ಸಿಎಂ ತವರು ಜಿಲ್ಲಾ ಪ್ರವಾಸ; ಅ.19ಕ್ಕೆ ಯಡಿಯೂರಪ್ಪ ಶಿವಮೊಗ್ಗಕ್ಕೆ ಭೇಟಿ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ದೇಶದಲ್ಲಿ ಮಹಾಮಾರಿ ಕೊರೋನಾ ಬಂದ ಬಳಿಕ, ಸಿಎಂ ಬಿಎಸ್​ ಯಡಿಯೂರಪ್ಪ ಇಷ್ಟು ದಿನ ತನ್ನ ಜಿಲ್ಲೆಗೂ ತೆರಳದೆ ಸುಮ್ಮನೆ ಆಗಿದ್ದರು. ಆದರೆ ಮಳೆ ಬಂದು ಪ್ರವಾಹ ಉಂಟಾದ ಸಂದರ್ಭದಲ್ಲಿ ತುರ್ತಾಗಿ ಕೆಲ ಜಿಲ್ಲೆಗಳಲ್ಲಿ ಮಾತ್ರ ಪ್ರವಾಸ ಕೈಗೊಂಡಿದ್ದರು.

  • Share this:

ಬೆಂಗಳೂರು(ಅ.06): ಬಹು ದಿನಗಳ ಬಳಿಕ ಸಿಎಂ ಬಿ.ಎಸ್​. ಯಡಿಯೂರಪ್ಪ  ತವರು ಜಿಲ್ಲೆಯ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಅಕ್ಟೋಬರ್ 19 ರಂದು ಸಿಎಂ ಯಡಿಯೂರಪ್ಪ ಶಿವಮೊಗ್ಗಕ್ಕೆ ತೆರಳುತ್ತಿದ್ದಾರೆ. ಅಂದು ರಾತ್ರಿ ಶಿವಮೊಗ್ಗದ ತಮ್ಮ ಮನೆಯಲ್ಲೇ ವಾಸ್ತವ್ಯ ಹೂಡಲಿರುವ ಸಿಎಂ ಬಿಎಸ್ವೈ, ಮಾರನೇ ದಿನ ಅಂದರೆ ಅಕ್ಟೋಬರ್ ‌ 20 ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲಿರುವ ಸಿಎಂ, ಅಂದು ವಿವಿಧ ಮುಖಂಡರನ್ನು ಭೇಟಿಯಾಗಲಿದ್ದಾರೆ. ಅಲ್ಲದೇ ಪಕ್ಷದ ಕಾರ್ಯಕರ್ತರು ಹಾಗೂ ಶಿಕಾರಿಪುರ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ನಂತರ ಅಂದು ರಾತ್ರಿ ಶಿಕಾರಿಪುರದಲ್ಲೇ ವಾಸ್ತವ್ಯ ಹೂಡಿ, ಅಕ್ಟೋಬರ್ ‌ 21 ರಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.


ಕೆ. ಕಲ್ಯಾಣ್ ದಾಂಪತ್ಯಕ್ಕೆ ಹುಳಿ ಹಿಂಡಿದ ಜ್ಯೋತಿ ಕುಲಕರ್ಣಿ ಬಗ್ಗೆ ಸ್ಪೋಟಕ ಮಾಹಿತಿ ಲಭ್ಯ


ದೇಶದಲ್ಲಿ ಮಹಾಮಾರಿ ಕೊರೋನಾ ಬಂದ ಬಳಿಕ, ಸಿಎಂ ಬಿಎಸ್​ ಯಡಿಯೂರಪ್ಪ ಇಷ್ಟು ದಿನ ತನ್ನ ಜಿಲ್ಲೆಗೂ ತೆರಳದೆ ಸುಮ್ಮನೆ ಆಗಿದ್ದರು. ಆದರೆ ಮಳೆ ಬಂದು ಪ್ರವಾಹ ಉಂಟಾದ ಸಂದರ್ಭದಲ್ಲಿ ತುರ್ತಾಗಿ ಕೆಲ ಜಿಲ್ಲೆಗಳಲ್ಲಿ ಮಾತ್ರ ಪ್ರವಾಸ ಕೈಗೊಂಡಿದ್ದರು. ಅಲ್ಲದೆ ಮೊನ್ನೆ ತಾನೇ ಪ್ರವಾಹ ಪರಿಹಾರ ಹಾಗೂ ಸಂಪುಟ ವಿಸ್ತರಣೆ ಕುರಿತು ದೆಹಲಿಗೆ ಹೋಗಿ ಬಂದಿದ್ದರು.


ಇಷ್ಟು ಬಿಟ್ಟು‌ ಬೆಂಗಳೂರಿನ ಕೆಲ ಕಾರ್ಯಕ್ರಮಗಳಲ್ಲಿ ಹಾಗೂ ಜಲಾಶಯಗಳಿಗೆ ಬಾಗಿನ ಅರ್ಪಿಸಲು ಕೆಲ ಜಿಲ್ಲೆಗಳಲ್ಲಿ ಮಾತ್ರ ಪ್ರವಾಸ ಕೈಗೊಂಡಿದ್ದರು. ಆದರೆ ತಮ್ಮ ಜಿಲ್ಲೆಗೆ ಮಾತ್ರ ಪ್ರವಾಸ ಮಾಡಿರಲಿಲ್ಲ. ಇದೀಗ ಬಹಳ ತಿಂಗಳ ನಂತರ ಸಿಎಂ ಬಿಎಸ್​  ಯಡಿಯೂರಪ್ಪನವರು ಶಿವಮೊಗ್ಗ ಜಿಲ್ಲೆಯ ಪ್ರವಾಸ ಕೈಗೊಳ್ಳುತ್ತಿರುವುದು ಅಲ್ಲಿನ ಜನರ ಸಂತಸಕ್ಕೆ ಕಾರಣವಾಗಿದೆ.

Published by:Latha CG
First published: