HOME » NEWS » State » CM BS YEDIYURAPPA WILL MEET PRIME MINISTER NARENDRA MODI TODAY SESR

ಇಂದು ಪ್ರಧಾನಿ ಭೇಟಿ ಮಾಡಲಿರುವ ಸಿಎಂ ಬಿಎಸ್​ವೈ; ನೆರೆ ಪರಿಹಾರ, ಸಂಪುಟ ವಿಸ್ತರಣೆ ಕುರಿತು ಚರ್ಚೆ

ಇದೇ ವೇಳೆ  ಬಿಜೆಪಿ ಸರ್ಕಾರ ರಚನೆಯಾಗಿ ಒಂದು ವರ್ಷ ಪೂರ್ಣಗೊಂಡಿದ್ದು ರಾಜ್ಯದ ಬೆಳವಣಿಗೆ ಕುರಿತು ಚರ್ಚೆ ನಡೆಸಲಿದ್ದಾರೆ.

news18-kannada
Updated:September 18, 2020, 7:19 AM IST
ಇಂದು ಪ್ರಧಾನಿ ಭೇಟಿ ಮಾಡಲಿರುವ ಸಿಎಂ ಬಿಎಸ್​ವೈ; ನೆರೆ ಪರಿಹಾರ, ಸಂಪುಟ ವಿಸ್ತರಣೆ ಕುರಿತು ಚರ್ಚೆ
ಸಿಎಂ ಬಿಎಸ್​ ಯಡಿಯೂರಪ್ಪ-ಪ್ರಧಾನಿ ಮೋದಿ
  • Share this:
ನವದೆಹಲಿ (ಸೆ.18):  ಮೂರು ದಿನಗಳ ದೆಹಲಿ ಪ್ರವಾಸ ನಡೆಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಲಿದ್ದಾರೆ. ಈ ವೇಳೆ ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಅವರಿಗೆ ಶುಭಕೋರಲಿದ್ದಾರೆ. ಇದೇ ವೇಳೆ  ಬಿಜೆಪಿ ಸರ್ಕಾರ ರಚನೆಯಾಗಿ ಒಂದು ವರ್ಷ ಪೂರ್ಣಗೊಂಡಿದ್ದು ರಾಜ್ಯದ ಬೆಳವಣಿಗೆ ಕುರಿತು ಚರ್ಚೆ ನಡೆಸಲಿದ್ದಾರೆ. ನೆರೆ, ಅತಿವೃಷ್ಟಿ ಪರಿಹಾರ ಹಂಚಿಕೆ , ಅನುದಾನದ ಕುರಿತು ಚರ್ಚೆ ನಡೆಸಲಿದ್ದು, ಅಗತ್ಯ ನೆರವು ಕೋರಲಿದ್ದಾರೆ.  ಇದೇ ವೇಳೇ ರಾಜ್ಯದ ಸಂಪುಟ ವಿಸ್ತರಣೆ ಕುರಿತು ಮಹತ್ವದ ಮಾತುಕತೆ ಕೂಡ ನಡೆಸಲಿದ್ದಾರೆ. ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಹಿನ್ನಲೆ ವಿಸ್ತರಣೆ ಬದಲು ಪುನರ್ರಚನೆಗೆ ಸಿಎಂ ಬಿಎಸ್ವೈ ಅವಕಾಶ ಕೇಳಲಿದ್ದು, ಇದಕ್ಕೆ ಪ್ರಧಾನಿಗಳ ಉತ್ತರ ಏನಿರಬಹುದು ಎಂಬ ಕುತೂಹಲ ಈಗಾಗಲೇ ಸಚಿವಾಕಾಂಕ್ಷಿಗಳಲ್ಲಿ ಮೂಡಿದೆ. ಪ್ರಧಾನಿ ಭೇಟಿಗೂ ಮುನ್ನ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಕಾಣಲಿದ್ದಾರೆ.

ರಾಜ್ಯದ ಪ್ರವಾಹ ಪರಿಹಾರ ಹಂಚಿಕೆ ಮಾಡಿರುವ  ಕೇಂದ್ರ ಸರ್ಕಾರ,  ಶೇ.10 ರಷ್ಟು ಮಾತ್ರ ನೀಡಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಿಎಂ ಹೆಚ್ಚಿನ ಅನುದಾನ ಕೋರುವುದರೊಂದಿಗೆ ಕಳೆದ ವರ್ಷದಿಂದ ಉಂಟಾದ ಪ್ರವಾಹ ಹಾನಿಯ ಸಂಬಂಧವು ಚರ್ಚಿಸಲಿದ್ದಾರೆ ಎನ್ನಲಾಗಿದೆ

ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ಮತ್ತು ಅನುಮೋದನೆ ಪಡೆಯಲು ಅವರು, ರಕ್ಷಣಾ, ಹಣಕಾಸು, ಜಲಸಂಪನ್ಮೂಲ ಸೇರಿದಂತೆ ವಿವಿಧ ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ.
ಗುರುವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಹಣಕಾಸಿನ ನೆರವನ್ನು ಯಾಚಿಸಿದ್ದಾರೆ. ಅವರೊಟ್ಟಿಗೆ ಹಲವು ಯೋಜನೆಗಳನ್ನು ಚರ್ಚಿಸಿದ ಬಳಿಕ ಮಾತನಾಡಿದ ಅವರು ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದಾರೆ. ಸಚಿವರಿಂದ ಅನುದಾನ ನೀಡುವ ಭರವಸೆ ಸಿಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ, ಡಿಸಿಎಂ ಗೋವಿಂದ ಕಾರಜೋಳ, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್ ಕೂಡ ಭಾಗಿಯಾಗಿದ್ದರು.

ಇದಾದ ಬಳಿಕ ಅವರು, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಕೂಡ ಭೇಟಿಯಾಗಿ ಮಾತುಕತೆ ನಡೆಸಿದರು.
Published by: Seema R
First published: September 18, 2020, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories