ಶಿವಮೊಗ್ಗ(ಡಿಸೆಂಬರ್. 10): ಬಿಜೆಪಿ ಸರ್ಕಾರದಲ್ಲಿ ನಿಗಮ ಮಂಡಳಿಗಳಿಗೆ ನಾಮ ನಿರ್ದೇಶಿತವಾಗಿರುವ ಪಟ್ಟಿಯಲ್ಲಿ ಸಿಎಂ ತವರು ಜಿಲ್ಲೆಯವರದ್ದೇ ಸಿಂಹ ಪಾಲು. ನಿಗಮ ಮಂಡಳಿ, ಪ್ರಾಧಿಕಾರ ಅಧ್ಯಕ್ಷರು ಮತ್ತು ನಿರ್ದೇಶಕರು, ಸದಸ್ಯರನ್ನು ಆಯ್ಕೆ ಮಾಡುವಾಗ ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರಿಗೆ ಹೆಚ್ಚಿನ ಸ್ಧಾನಗಳನ್ನು ನೀಡಿದ್ದಾರೆ. ಅದು ಸಹ ಶಿವಮೊಗ್ಗ ಜಿಲ್ಲೆಯ ಕಾರ್ಯಕರ್ತರಿಗೆ ಎಂದರೆ ತಪ್ಪಾಗಲಾರದು. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಸುಮಾರು ಒಂದು ವರ್ಷ ಎರಡು ತಿಂಗಳ ಮೇಲೆ ಆಗಿದೆ. ಸರ್ಕಾರ, ಈಗಾಗಲೇ ನಿಗಮ ಮಂಡಳಿಗಳಿಗೆ ನಾಮ ನಿರ್ದೇಶಕರು, ಸದಸ್ಯರನ್ನು ನೇಮಕ ಮಾಡಿದೆ. ನಿಗಮ ಮಂಡಳಿಗೆ ತಮ್ಮ ಬೆಂಬಲಿಗರಿಗೆ ನಾಮನಿರ್ದೇಶನ ಮಾಡಿ, ಬಿಜೆಪಿ ಕಾರ್ಯಕರ್ತರ ದೃಷ್ಟಿಯಲ್ಲಿ ಸೈ ಎನಿಸಿಕೊಂಡಿದ್ದಾರೆ ಯಡಿಯೂರಪ್ಪ. ಜಿಲ್ಲೆಯ ಕಾರ್ಯಕರ್ತರಲ್ಲಿ ಅವರ ಬೆಂಬಲಿಗರಿಗೆ ಯಾರಿಗೂ ಬೇಸರವಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ರಕ್ಷಣಾತ್ಮಕ ಆಟದ ಪ್ರಯೋಗ ಮಾಡಿದ್ದಾರೆ.
ಸಿಎಂ ಯಡಿಯೂರಪ್ಪ ನಿಗಮ ಮಂಡಳಿಗಳಿಗೆ ಸದಸ್ಯರು ಮತ್ತು ನಾಮನಿರ್ದೇಶಕರ, ಮತ್ತು ಅಧ್ಯಕ್ಷರನ್ನಾಗಿಸಿ, ಸಿಂಹಪಾಲು ಶಿವಮೊಗ್ಗಕ್ಕೆ ದೊರೆಯುವಂತೆ ಮಾಡಿದ್ದು, 72 ಜನ ನಾಮನಿರ್ದೇಶಿತರಿಗೆ ಒಂದೇ ಬಾರಿಗೆ ಸನ್ಮಾನಿಸಿ, ಗೌರವಿಸಲಾಗಿದೆ. 72 ಜನರಿಗೆ ಆಯ್ಕೆ ಮಾಡುವ ಮೂಲಕ ಸಿ.ಎಂ ಯಡಿಯೂರಪ್ಪ ತಮ್ಮವರು ಯಾರೂ ಕೂಡ ತಮ್ಮ ವಿರುದ್ಧ ಮಾತನಾಡದಂತೆ ಈಗಾಗಲೇ ನೋಡಿಕೊಂಡಿದ್ದಾರೆ.
ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಇರುವಂತ ಕಾಡ ಅಭಿವೃದ್ಧಿ ಪ್ರಾಧಿಕಾರ, ಎಂಎಡಿಬಿ, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಿ, ರಾಜ್ಯಮಟ್ಟದ ಆರ್ಯವೈಶ್ಯ ಅಭಿವೃದ್ಧಿ ನಿಗಮ, ಸೇರಿದಂತೆ ಹಲವು ಆಯ ಕಟ್ಟಿನ ಜಾಗಗಳ ಅಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪ ಬೆಂಬಲಿಗರಿಗೆ ಕೊಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ತಮ್ಮ ಪ್ರಭಲ್ಯ ಉಳಿಸಿಕೊಳ್ಳವ ಕೆಲಸವನ್ನು ಯಡಿಯೂರಪ್ಪ ಮಾಡಿದ್ದಾರೆ.
ಇದನ್ನೂ ಓದಿ : ಸರ್ಕಾರದ ಪರ ಮತ ಹಾಕೋಕೆ ಕುಮಾರಸ್ವಾಮಿಗೆ ನಾಚಿಕೆಯಾಗಬೇಕು: ಸಿದ್ಧರಾಮಯ್ಯ ಕಿಡಿ
ಅಲ್ಲದೇ ಶಿವಮೊಗ್ಗಕ್ಕೆ ಸಿಂಹಪಾಲು ದೊರೆತಿರುವ ನಿಗಮ ಮಂಡಳಿಗಳ ನಾಮ ನಿರ್ದೇಶಿತ ಸದಸ್ಯರಿಗೆ, ಅಧ್ಯಕ್ಷರಿಗೆ ಸನ್ಮಾನಿಸಿ, ಗೌರವಿಸುವ ಕಾರ್ಯಕ್ರಮ ಸಹ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಯಾರು ಸಹ ಚಕಾರ ಎತ್ತದಂತೆ ಮುಖ್ಯಮಂತ್ರಿಯಡಿಯೂರಪ್ಪ ನೋಡಿಕೊಂಡಿದ್ದಾರೆ .
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ