ಹುಳಿಮಾವು ಕೆರೆ ಪ್ರದೇಶಕ್ಕೆ ಸಿಎಂ ಬಿಎಸ್​ವೈ ಭೇಟಿ; ಇಂದು ಸಂಜೆಯೊಳಗೆ ಸಂತ್ರಸ್ತರ ಖಾತೆಗೆ 50 ಸಾವಿರ ಜಮಾ

ಬಿಎಸ್​ವೈ ಸ್ಥಳದಲ್ಲೇ ಇದ್ದು ಕಾಮಗಾರಿ ನಡೆಸಬೇಕು ಎಂದು ಬಿಬಿಎಂಪಿ ಮೇಯರ್ ಮತ್ತು ಕಮಿಷನರ್​​​ಗೆ ಖಡಕ್ ಸೂಚನೆ ನೀಡಿದರು. ಕೆರೆ ಒಡೆತಕ್ಕೆ  ಕಾರಣಕರ್ತರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ. ಏರಿ ಕಟ್ಟೆ ಸಧೃಢವಾಗಿ ಇರಬೇಕು.

Latha CG | news18-kannada
Updated:November 26, 2019, 12:35 PM IST
ಹುಳಿಮಾವು ಕೆರೆ ಪ್ರದೇಶಕ್ಕೆ ಸಿಎಂ ಬಿಎಸ್​ವೈ ಭೇಟಿ; ಇಂದು ಸಂಜೆಯೊಳಗೆ ಸಂತ್ರಸ್ತರ ಖಾತೆಗೆ 50 ಸಾವಿರ ಜಮಾ
ಸಂತ್ರಸ್ತರ ಭೇಟಿ ಮಾಡಿದ ಸಿಎಂ ಬಿಎಸ್​ವೈ
  • Share this:
ಬೆಂಗಳೂರು(ನ.26): ಮೊನ್ನೆ ಬೆಂಗಳೂರಿನ ಹುಳಿಮಾವು ಕೆರೆ ಏರಿ ಒಡೆದು ಅನೇಕ ಮನೆಗಳು ಜಲಾವೃತವಾಗಿದ್ದವು. ಅನೇಕ ಜನರು ನಿರಾಶ್ರಿತರಾಗಿದ್ದರು. ಇಂದು ಸಿಎಂ ಬಿಎಸ್​ ಯಡಿಯೂರಪ್ಪ ಕಾಳಜಿ ಕೇಂದ್ರಕ್ಕೆ ತೆರಳಿ, ಮನೆ-ಮಠ ಕಳೆದುಕೊಂಡ ನಿರಾಶ್ರಿತರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಈ ಅನಾಹುತದಿಂದ ಸಂತ್ರಸ್ತರಾದವರಿಗೆ ಇಲ್ಲಿನ ಕಾರ್ಪೋರೇಟರ್​ ನೆರವು ನೀಡಿದ್ದಾರೆ. 319 ಬಡವರ ಮನೆಗಳು, ಒಟ್ಟು 630 ಮನೆಗಳು ಹಾನಿಯಾಗಿವೆ. ಮನೆ ಕಳೆದುಕೊಂಡ ನಿರಾಶ್ರಿತರ ಖಾತೆಗಳಿಗೆ ಇಂದು ಸಂಜೆಯೊಳಗೆ 50 ಸಾವಿರ ಹಣ ಜಮಾ ಮಾಡಲಾಗುವುದು ಎಂದು ಸಿಎಂ ಬಿಎಸ್​ವೈ ತಿಳಿಸಿದರು.

ಬಳಿಕ ಕೆರೆ ಒಡೆದ ಪ್ರದೇಶಕ್ಕೆ ಭೇಟಿ ನೀಡಿದ ಸಿಎಂ, ಘಟನೆಗೆ ಕಾರಣ ಏನೆಂದು ತನಿಖೆ ಮಾಡಿ, ಅಗತ್ಯ ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದೇನೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲು ಹೇಳಿದ್ದೇನೆ ಎಂದು ಹೇಳಿದರು.

ಅಮ್ಮ ಇಲ್ಲ, ಅಪ್ಪ ಕುಡಿತದ ದಾಸ, ಪಾಳುಬಿದ್ದ ಮನೆಯಲ್ಲೇ ವಾಸ; ಅಕ್ಕ-ತಂಗಿಯ ಮನಕರಗುವ ಕಥೆ ಇದು..!

ಇದೇ ವೇಳೆ, ಬಿಎಸ್​ವೈ ಸ್ಥಳದಲ್ಲೇ ಇದ್ದು ಕಾಮಗಾರಿ ನಡೆಸಬೇಕು ಎಂದು ಬಿಬಿಎಂಪಿ ಮೇಯರ್ ಮತ್ತು ಕಮಿಷನರ್​​​ಗೆ ಖಡಕ್ ಸೂಚನೆ ನೀಡಿದರು. ಕೆರೆ ಒಡೆತಕ್ಕೆ  ಕಾರಣಕರ್ತರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ. ಏರಿ ಕಟ್ಟೆ ಸಧೃಢವಾಗಿ ಇರಬೇಕು. ಕಾಟಾಚಾರಕ್ಕೆ ಮಾಡುವಂತಿಲ್ಲ ಎಂದು ಸೂಚಿಸಿದರು. ನಿರಾಶ್ರಿತರ ಬಗ್ಗೆ ಕಾಳಜಿ ವಹಿಸಿ, ಅವರಿಗೆ ಬೇಕಾದ ವ್ಯವಸ್ಥೆ ಮಾಡಿ ಎಂದರು.

ಸಂತ್ರಸ್ತರಿಗೆ ಸಮುದಾಯ ಭವನದಲ್ಲಿ ಆಶ್ರಯ ನೀಡಲಾಗಿದೆ. 2ನೇ ದಿನವೂ ಸಮುದಾಯ ಭವನದಲ್ಲೇ ಸಂತ್ರಸ್ತರು ಆಶ್ರಯ ಪಡೆಯುತ್ತಿದ್ದಾರೆ. ಸಂತ್ರಸ್ತರಿಗೆ ಬಿಬಿಎಂಪಿಯಿಂದ ತಿಂಡಿ, ಊಟ‌ ವ್ಯವಸ್ಥೆ ಮಾಡಲಾಗಿದೆ. ಮನೆಗಳಿಗೆ ನೀರು ಹೋಗಿದ್ದರಿಂದ ಸಮುದಾಯ ಭವನದಲ್ಲೇ ಇದ್ದಾರೆ. ಸುಮುದಾಯ ಭವನದಲ್ಲಿ ಉಳಿದಿರುವ ಸಂತ್ರಸ್ತರಿಗೆ ಬಿಬಿಎಂಪಿ ಕಡೆಯಿಂದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

Maharashtra Govt Formation: ಮಹಾ ತೀರ್ಪು ಪ್ರಕಟಿಸಿದ ಸುಪ್ರೀಂ; ನಾಳೆ ವಿಶ್ವಾಸಮತ ಯಾಚಿಸಲು ಕೋರ್ಟ್​ ಸೂಚನೆ

First published:November 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ