ಜಿಎಸ್​​ಟಿ ಸಂಬಂಧ ಆಯ್ಕೆ 1ನ್ನು ಆರಿಸಿಕೊಂಡ ರಾಜ್ಯ ಸರ್ಕಾರ; 18,289 ಕೋಟಿ ಪರಿಹಾರಕ್ಕೆ ಕರ್ನಾಟಕ ಅರ್ಹ

ಆಯ್ಕೆ 1ರ ಅಡಿಯಲ್ಲಿ ಒಟ್ಟು 18,289 ಕೋಟಿ ರೂ.ಪರಿಹಾರ ಪಡೆಯಬಹುದಾಗಿದೆ. ಈ ಆಯ್ಕೆಯನ್ನು ಕರ್ನಾಟಕ ಸರ್ಕಾರ ತನ್ನ ಆದ್ಯತೆಯನ್ನಾಗಿ ತೀರ್ಮಾನಿಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ ಎಂದು ಟ್ವಿಟರ್​​ನಲ್ಲಿ ತಿಳಿಸಿದ್ದಾರೆ.

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

 • Share this:
  ಬೆಂಗಳೂರು(ಸೆ.02): ಕೇಂದ್ರ ಸರ್ಕಾರ ಒಂದು ದೇಶ, ಒಂದು ತೆರಿಗೆ ಮೂಲಕ ರಾಜ್ಯಗಳ ಜಿಎಸ್​​ಟಿ ಪಾಲನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಕಿತ್ತುಕೊಂಡಿದೆ ಎಂದು ಅನೇಕ ರಾಜ್ಯಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಕರ್ನಾಟಕದಲ್ಲಿಯೂ ಸಹ ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಈ ನಡುವೆಯೇ ಜಿಎಸ್​​ಟಿ ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎರಡು ಆಯ್ಕೆಗಳನ್ನು ನೀಡಿತ್ತು. ಮೌಲ್ಯಮಾಪನದ ನಂತರ ಸಿಎಂ ಬಿಎಸ್​​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಆಯ್ಕೆ ಒಂದನ್ನು ಆರಿಸಿಕೊಂಡಿದೆ.

  ಈ ಕುರಿತು ಸಿಎಂ ಬಿಎಸ್​ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸರ್ಕಾರ ನೀಡಿರುವ ಆಯ್ಕೆಗಳ ಪ್ರಕಾರ, ಆಯ್ಕೆ 1ರ ಅಡಿಯಲ್ಲಿ ಒಟ್ಟು 18,289 ಕೋಟಿ ರೂ.ಪರಿಹಾರ ಪಡೆಯಬಹುದಾಗಿದೆ. ಈ ಆಯ್ಕೆಯನ್ನು ಕರ್ನಾಟಕ ಸರ್ಕಾರ ತನ್ನ ಆದ್ಯತೆಯನ್ನಾಗಿ ತೀರ್ಮಾನಿಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ ಎಂದು ಟ್ವಿಟರ್​​ನಲ್ಲಿ ತಿಳಿಸಿದ್ದಾರೆ.

  ರಾಜ್ಯಗಳಿಂದ ತೆರಿಗೆ ಹಕ್ಕನ್ನು ಕಿತ್ತುಕೊಂಡು, ಈಗ ತೆರಿಗೆ ಪಾಲು ಕೊಡಲು ಆಗುವುದಿಲ್ಲ. ನಿಮ್ಮ ಖರ್ಚು- ವೆಚ್ಚಗಳಿಗೆ ಬೇಕಿದ್ದರೆ, ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುತ್ತೇವೆ ಎಂದು ಪ್ರಧಾನಿ ಮೋದಿ ಸರ್ಕಾರ ಹೇಳಿತ್ತು. ಕೇಂದ್ರ ಸರ್ಕಾರದ ಈ ಮಾತಿಗೆ ಬಿಜೆಪಿ ಆಡಳಿತದ ರಾಜ್ಯಗಳೂ ಸೇರಿದಂತೆ ಬಹುತೇಕ ರಾಜ್ಯ ಸರ್ಕಾರಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

  ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಹೆಚ್ಚಾದ ಗಾಂಜಾ ದಂಧೆ; ಕಠಿಣ ಕ್ರಮಕ್ಕಾಗಿ ಜನರ ಆಗ್ರಹ

  ಮೊದಲಿಗೆ ಕೇರಳ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ತೆಲಂಗಾಣ, ಪಶ್ಚಿಮ ಬಂಗಾಳ, ದೆಹಲಿ, ಛತ್ತೀಸ್​ಗಢ ರಾಜ್ಯಗಳೂ ಧ್ವನಿ ಎತ್ತಿವೆ.

  ಇನ್ನು, ಈ ಬಾರಿ ದೇಶಾದ್ಯಂತ ಕೊರೋನಾ ವೈರಸ್​ ಮತ್ತು ಲಾಕ್​ಡೌನ್​ನಿಂದಾಗಿ ಬಹುತೇಕ ಉದ್ಯಮ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಜಿಎಸ್​ಟಿ ಆದಾಯದಲ್ಲಿ ಇಳಿಕೆಯಾಗಿದೆ. ಆಗಸ್ಟ್​ ತಿಂಗಳಿನಲ್ಲಿ 86,449 ಕೋಟಿ ರೂ. ಸಂಗ್ರಹವಾಗಿದೆ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
  Published by:Latha CG
  First published: