ಇನ್ನೂ ಶಮನವಾಗದ ಬಿಜೆಪಿ ಒಳ ಬೇಗುದಿ; ಶಾಸಕರ ಸಂಧಾನಕ್ಕೆ ಮುಂದಾದ ಸಿಎಂ ಬಿ.ಎಸ್. ಯಡಿಯೂರಪ್ಪ

ಶಾಸಕರ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಪಕ್ಷದಲ್ಲಿ ಅಸಮಾಧಾನ, ಭಿನ್ನಾಭಿಪ್ರಾಯ ಯಾವುದೂ ಇರಕೂಡದು ಹಾಗೂ ಶಾಸಕರ ಕ್ಷೇತ್ರದ ಏನೇ ಅಭಿವೃದ್ಧಿ ಕಾರ್ಯಗಳು ಇದ್ದರೂ ನೇರವಾಗಿ ಬಂದು ನನ್ನನ್ನೇ ಭೇಟಿಯಾಗಿ ಎಂದು ಶಾಸಕರಿಗೆ ಸಿಎಂ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಬಿ.ಎಸ್​​ ಯಡಿಯೂರಪ್ಪ.

ಸಿಎಂ ಬಿ.ಎಸ್​​ ಯಡಿಯೂರಪ್ಪ.

  • Share this:
ಬೆಂಗಳೂರು (ಮಾರ್ಚ್ 17); ಎಲ್ಲಾ ಕ್ಷೇತ್ರಗಳಿಗೂ ಸಮನಾಗಿ ಅನುದಾನ ಹಂಚಿಕೆ ಮಾಡಲಾಗುತ್ತಿಲ್ಲ ಮತ್ತು ಸರ್ಕಾರದಲ್ಲಿ ಏನೇ ಕೆಲಸ ಆಗಬೇಕು ಎಂದರೂ ಬಿ.ವೈ. ವಿಜಯೇಂದ್ರ ಅವರ ಬಳಿಯೇ ಹೋಗಬೇಕು ಎಂಬ ವಿಚಾರಕ್ಕೆ ಬಿಜೆಪಿಯ ಅನೇಕ ಹಿರಿಯ ಶಾಸಕರು ಗರಂ ಆಗಿದ್ದಾರೆ. ಅಲ್ಲದೆ, ಕಳೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಸಹ ಈ ಕುರಿತು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ಶಾಸಕರ ಸಂಧಾನಕ್ಕೆ ಮುಂದಾಗಿದ್ದಾರೆ.

ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿರುವ ಬಿಎಸ್​ವೈ ಸರ್ಕಾರದ ಕಾರ್ಯವೈಖರಿ ಶಾಸಕರಿಗೆ ಇಷ್ಟವಿದೆಯೋ ಅಥವಾ ಏನಾದ್ರು ಅಸಮಧಾನವಿದೆಯೋ? ಎಂಬುದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಒನ್ ಟು ಒನ್ ಮಾತುಕತೆಗೆ ಮುಂದಾಗಿದ್ದಾರೆ.

ಡಾಲರ್ಸ್ ಕಾಲೋನಿಯ ತಮ್ಮ ಮನೆಯಲ್ಲಿ ಮಾತುಕತೆ ನಡೆಸುತ್ತಿರುವ ಸಿಎಂ ಯಡಿಯೂರಪ್ಪ ನಿನ್ನೆ ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಯ ಬಿಜೆಪಿ ಶಾಸಕರನ್ನು ಕರೆದು ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ. ಇಂದು ಬಾಗಲಕೋಟೆ, ವಿಜಯಪುರ, ಗದಗ, ಬಳ್ಳಾರಿ ಜಿಲ್ಲೆಗಳ ಬಿಜೆಪಿ ಶಾಸಕರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕರ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಪಕ್ಷದಲ್ಲಿ ಅಸಮಾಧಾನ, ಭಿನ್ನಾಭಿಪ್ರಾಯ ಯಾವುದೂ ಇರಕೂಡದು ಹಾಗೂ ಶಾಸಕರ ಕ್ಷೇತ್ರದ ಏನೇ ಅಭಿವೃದ್ಧಿ ಕಾರ್ಯಗಳು ಇದ್ದರೂ ನೇರವಾಗಿ ಬಂದು ನನ್ನನ್ನೇ ಭೇಟಿಯಾಗಿ ಎಂದು ಶಾಸಕರಿಗೆ ಸಿಎಂ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಕೊರೋನಾಗೆ ಬಲಿಯಾದ ವ್ಯಕ್ತಿಯ ಹೆಂಡತಿಗೂ ತಗುಲಿರುವ ಸೋಂಕು; ಮುಂದುವರೆದ ಚಿಕಿತ್ಸೆ
First published: