ನಾನು ಹೈಸ್ಕೂಲ್ ಓದಬೇಕಾದ್ರೆ ತರಕಾರಿ, ನಿಂಬೆಹಣ್ಣು ಮಾರುತ್ತಿದ್ದೆ; ಸಿಎಂ ಯಡಿಯೂರಪ್ಪ

ಸರ್ಕಾರಿ ಉದ್ಯೋಗ ಅಷ್ಟೇ ಅಲ್ಲ. ಸಣ್ಣ ಕೈಗಾರಿಕಾ ಕಂಪನಿ ಶುರು ಮಾಡಿ.ಇದರಿಂದ ನೂರಾರು ಜನರಿಗೆ ಉದ್ಯೋಗ ನೀಡಿ. ನೀವು ಮನಸ್ಸು ಮಾಡಿದರೆ ಅಂದುಕೊಂಡ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಸ್ವಾಭಿಮಾನದಿಂದ ನಿಮ್ಮ‌ ಕಾಲಿನ ಮೇಲೆ ನೀವು ನಿಂತುಕೊಳ್ಳಿ ಎಂದು ಸಿಎಂ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. 

news18-kannada
Updated:January 12, 2020, 3:09 PM IST
ನಾನು ಹೈಸ್ಕೂಲ್ ಓದಬೇಕಾದ್ರೆ ತರಕಾರಿ, ನಿಂಬೆಹಣ್ಣು ಮಾರುತ್ತಿದ್ದೆ; ಸಿಎಂ ಯಡಿಯೂರಪ್ಪ
ಸಿಎಂ ಬಿ.ಎಸ್. ಯಡಿಯೂರಪ್ಪ
  • Share this:
ಬೆಂಗಳೂರು(ಜ.12): ಇಂದು ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆ ಉನ್ನತ ಶಿಕ್ಷಣ ಇಲಾಖೆಯು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಿಎಂ ಬಿಎಸ್​ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್​ ವಿತರಣೆ ಮಾಡಿದರು. ಬಳಿಕ ಭಾಷಣ ಮಾಡಿದ ಬಿಎಸ್​ವೈ, ಸ್ವಾಮಿ ವಿವೇಕಾನಂದ ಜನ್ಮ‌ ದಿನಾಚರಣೆಯಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದೇವೆ. ವಿವೇಕಾನಂದರ ಹೆಸರೇ ಒಂದು ಸ್ಪೂರ್ತಿ. ಶಕ್ತಿಶಾಲಿ, ಶ್ರದ್ಧಾವಂತರಾಗಿ ವಿಚಾರಗಳನ್ನು ತಿಳಿಸಿದವರು ಸ್ವಾಮಿ ವಿವೇಕಾನಂದರು ಎಂದು ಸ್ಮರಿಸಿದರು.

ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವಕ-ಯುವತಿಯರಿಗೆ ಸನ್ಮಾನ ಮಾಡಿದ್ದೇವೆ. ಅವರ ರೀತಿ, ನೀವು ಯಾಕೆ ಸಾಧನೆ ಮಾಡಬಾರದು  ಎನ್ನುವುದನ್ನು ನೀವು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳೀದರು. ಇದೇ ವೇಳೆ ತಮ್ಮ ಶಾಲಾದಿನಗಳನ್ನು ಬಿಎಸ್​ವೈ ನೆನೆಸಿಕೊಂಡರು. "ನಾನು ಮಂಡ್ಯದಲ್ಲಿ ಹೈಸ್ಕೂಲ್ ಓದಬೇಕಾದರೆ ತರಕಾರಿ, ನಿಂಬೆಹಣ್ಣು ಮಾರಿಕೊಂಡು ಇದ್ದೆ. ಇವಾಗ ರಾಜ್ಯದ ಜನರ ಆಶೀರ್ವಾದದಿಂದ‌ ನಾಲ್ಕನೇ ಬಾರಿಗೆ ಸಿಎಂ ಆಗಿ ಬಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಬೂಕನಕರೆಯಲ್ಲಿ ಹುಟ್ಟಿ ಹಲವು ರಾಜಕೀಯ ನಾಯಕರ ಮಾರ್ಗದರ್ಶನ ಪಡೆದು ಇವಾಗ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ನಾನು ಸಂಕಲ್ಪ ಮಾಡಿದ್ದರಿಂದಲೇ ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೇ ಸಾಕ್ಷಿ," ಎಂದು ಹೇಳಿದರು.

ಉಚಿತ ಲ್ಯಾಪ್​ಟಾಪ್​ಗಾಗಿ ವಿದ್ಯಾರ್ಥಿಗಳಿಂದ ಪ್ರತಿಭಟನೆ; ಡಿಸಿಎಂ ಕಾರಜೋಳಗೆ ಮುತ್ತಿಗೆ ಯತ್ನ

"ಸರ್ಕಾರಿ ಉದ್ಯೋಗ ಅಷ್ಟೇ ಅಲ್ಲ. ಸಣ್ಣ ಕೈಗಾರಿಕಾ ಕಂಪನಿ ಶುರು ಮಾಡಿ.ಇದರಿಂದ ನೂರಾರು ಜನರಿಗೆ ಉದ್ಯೋಗ ನೀಡಿ. ನೀವು ಮನಸ್ಸು ಮಾಡಿದರೆ ಅಂದುಕೊಂಡ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಸ್ವಾಭಿಮಾನದಿಂದ ನಿಮ್ಮ‌ ಕಾಲಿನ ಮೇಲೆ ನೀವು ನಿಂತುಕೊಳ್ಳಿ," ಎಂದು ಸಿಎಂ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಸ್ವಾಮಿ ವಿವೇಕಾನಂದರ ಬದುಕು ಜನರ ಬದುಕನ್ನು ಬದಲಿಸಿದೆ. ಇಂದಿನ ಯುವ ಜನತೆ ಆಧುನಿಕ ಅಲೆಯಲ್ಲಿ ಸಿಲುಕಿ ದೇಶದ ಪರಂಪರೆ ಆಚಾರ-ವಿಚಾರ ಮರೆಯುವ ಪರಿಸ್ಥಿತಿ ಬರುತ್ತಿದ್ದಾರೆ. ವಿದ್ಯಾರ್ಥಿಗಳು ವಿದೇಶಿ ವ್ಯಾಮೋಹದಿಂದ ಹೊರಗೆ ಬನ್ನಿ. ಜನರ ತೆರಿಗೆ ಹಣದಲ್ಲಿ ನಿಮ್ಮನ್ನು ಸಾಫ್ಟವೇರ್ ಇಂಜನಿಯರ್ಸ್, ಡಾಕ್ಟರ್ಸ್ ಮಾಡ್ತೀವಿ. ಆದರೆ ಇಲ್ಲಿ ಓದಿ ವಿದೇಶದಲ್ಲಿ ನೆಲೆಸುವ ಬಗ್ಗೆ ವಿದ್ಯಾರ್ಥಿಗಳು ಚಿಂತನೆ ಮಾಡುವುದನ್ನು ಬಿಡಬೇಕು ಎಂದು ಯಡಿಯೂರಪ್ಪ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.

ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆರ್.ಎಸ್. ಪಾಟೀಲ ಆಯ್ಕೆ - ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಹೈಕಮಾಂಡ್

ದಿನಕ್ಕೆ ಹತ್ತು ಪುಟವಾದರೂ, ವಿವೇಕಾನಂದರ ಜೀವನ ಚರಿತ್ರೆಯನ್ನ ಓದಿ. ಇದರಿಂದ ನಿಮಗೆ ಸ್ಪೂರ್ತಿ ಮತ್ತು ಸ್ವಾಭಿಮಾನ ಬರುತ್ತದೆ ಎಂದರು. ಸಿಎಂ ಯಡಿಯೂರಪ್ಪ ಯುವ ಸಬಲೀಕರಣ ಕೇಂದ್ರಗಳನ್ನು ಕೂಡ ಉದ್ಘಾಟಿಸಿದರು. ಭಾರತ ಮಹಿಳಾ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿ ವೇದಾಕೃಷ್ಣಮೂರ್ತಿ, ಬೌನ್ಸ್ ಸಿಇಓ ವಿವೇಕಾನಂದ್​​ಗೆ ಪ್ರಶಸ್ತಿ ಪ್ರದಾನ ಮಾಡಿದರು.ಕಾರ್ಯಕ್ರಮದಲ್ಲಿ ಡಿಸಿಎಂ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ, ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಕೃಷ್ಣಮೂರ್ತಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ