HOME » NEWS » State » CM BS YEDIYURAPPA TODAY GONE TO DELHI FOR CABINET EXPANSION RH

ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ತೆರಳಿದ ಸಿಎಂ ಬಿಎಸ್​ ಯಡಿಯೂರಪ್ಪ; ಹೈಕಮಾಂಡ್ ನಾಯಕರ ಭೇಟಿ

ಮಹಾಜನ್ ಆಯೋಗದ ವರದಿಯೇ ಅಂತಿಮ. ಅದರಂತೆ ಕನ್ನಡಿಗರು-ಮರಾಠಿಗರು ಅನ್ಯೋನ್ಯವಾಗಿದ್ದಾರೆ. ಮರಾಠಿಗಳು ಕಟ್ಟಾ ಹಿಂದುತ್ವವಾದಿಗಳು. ಬೆಳಗಾವಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿಗರು ಸಹಕಾರ ಕೊಟ್ಟಿದ್ದಾರೆ. ಇಂಥ ನಿರ್ಧಾರ ತೆಗೆದುಕೊಂಡಾಗ ಟೀಕೆ ಟಿಪ್ಪಣಿಗಳು ಸಹಜ. ಬಲವಂತದ ಬಂದ್ ಗೆ ಅವಕಾಶ ಕೊಡಲ್ಲ ಎಂದು ಹೇಳಿದರು.

news18-kannada
Updated:November 18, 2020, 3:43 PM IST
ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ತೆರಳಿದ ಸಿಎಂ ಬಿಎಸ್​ ಯಡಿಯೂರಪ್ಪ; ಹೈಕಮಾಂಡ್ ನಾಯಕರ ಭೇಟಿ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
  • Share this:
ನವದೆಹಲಿ; ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ದೆಹಲಿಗೆ ಆಗಮಿಸಿದ್ದಾರೆ. ಇಂದು ಸಂಜೆ ಹೈಕಮಾಂಡ್ ನಾಯಕರನ್ನು ಬಿಎಸ್​ವೈ ಭೇಟಿಯಾಗಲಿದ್ದಾರೆ. ಸಂಜೆ 4 .30ಕ್ಕೆ ಜನಪಥ್ ರಸ್ತೆಯಲ್ಲಿರುವ ನಿವಾಸದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ.  ಸಚಿವಾಕಾಂಕ್ಷಿಗಳ ಪಟ್ಟಿಯೊಂದಿಗೆ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದಾರೆ. ಹೆಚ್ಚಿನ ಜನರಿಗೆ ಅವಕಾಶ ನೀಡುವ ಉದ್ದೇಶದಿಂದ ಸಚಿವ ಸಂಪುಟದ ಪುನಾ​ರಚನೆಗೆ ಸಿಎಂ ಬಿಎಸ್​ವೈ ಅವರು ಹೈಕಮಾಂಡ್ ನಾಯಕರ ಬಳಿ ಮನವಿ ಮಾಡಲಿದ್ದಾರೆ.

ದೆಹಲಿಗೆ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್​ ಯಡಿಯೂರಪ್ಪ ಅವರು, ಸಂಪುಟ ವಿಸ್ತರಣೆ ಬಗ್ಗೆ ನಡ್ಡಾ ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಅವಕಾಶ ಸಿಕ್ಕರೆ ಅಮಿತ್ ಶಾ ಭೇಟಿಯಾಗುತ್ತೇನೆ. ಡಿ.7 ರಿಂದ ವಿಧಾನಸಬೆ ಅಧಿವೇಶನ ನಡೆಸಬೇಕು ಎಂದುಕೊಂಡಿದ್ದೇನೆ ಎಂದು ತಿಳಿಸಿದರು.

ಇದನ್ನು ಓದಿ: ಸಚಿವ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಗೊಂದಲ ಸಂಜೆಯೊಳಗೆ ಬಗೆಹರಿಯುತ್ತೆ; ಕೆ.ಎಸ್.ಈಶ್ವರಪ್ಪ
Youtube Video

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವರ್ ಅನಗತ್ಯಗಿ ಕ್ಯಾತೆ ತೆಗೆಯುತ್ತಿದ್ದಾರೆ. ಮಹಾಜನ್ ಆಯೋಗದ ವರದಿಯೇ ಅಂತಿಮ. ಅದರಂತೆ ಕನ್ನಡಿಗರು-ಮರಾಠಿಗರು ಅನ್ಯೋನ್ಯವಾಗಿದ್ದಾರೆ. ಮರಾಠಿಗಳು ಕಟ್ಟಾ ಹಿಂದುತ್ವವಾದಿಗಳು. ಬೆಳಗಾವಿ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿಗರು ಸಹಕಾರ ಕೊಟ್ಟಿದ್ದಾರೆ. ಇಂಥ ನಿರ್ಧಾರ ತೆಗೆದುಕೊಂಡಾಗ ಟೀಕೆ ಟಿಪ್ಪಣಿಗಳು ಸಹಜ. ಬಲವಂತದ ಬಂದ್ ಗೆ ಅವಕಾಶ ಕೊಡಲ್ಲ ಎಂದು ಹೇಳಿದರು.
Published by: HR Ramesh
First published: November 18, 2020, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories