HOME » NEWS » State » CM BS YEDIYURAPPA TODAY CONDUCT AERIAL VIEW AT FLOOD AFFECTED AREAS OF VIJAYAPURA DISTRICT MVSV LG

ಭೀಮಾ ನದಿ ಪ್ರವಾಹ; ಇಂದು ಸಿಎಂ ಬಿಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ

ಈ ಪ್ರವಾಹದಲ್ಲಿ 12872 ಮನೆಗಳಿಗೆ ಹಾನಿಯಾಗಿದ್ದು, ಇವುಗಳಲ್ಲಿ 2543 ಮನೆಗಳು ಸಂಪೂರ್ಣ ಜಲಾವೃತವಾಗಿವೆ.  72534 ಭೀಮಾ ನದಿ ಪ್ರವಾಹದಿಂದ ಸಂತ್ರಸ್ತರಾಗಿದ್ದು, 12217 ಜನರನ್ನು ಸ್ಥಳಾಂತರ ಮಾಡಲಾಗಿದೆ.  ಅಷ್ಟೇ ಅಲ್ಲ, 1516 ಜನರನ್ನು ರಕ್ಷಣಾ ಕಾರ್ಯಾಚರಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ಕರೆತರಲಾಗಿದೆ.

news18-kannada
Updated:October 21, 2020, 11:22 AM IST
ಭೀಮಾ ನದಿ ಪ್ರವಾಹ; ಇಂದು ಸಿಎಂ ಬಿಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ವಿಜಯಪುರ, (ಅ. 21): ಪ್ರವಾಹ ಬಂದು ಹೋದ ಮೇಲೆ ಸಿಎಂ ಬಿ. ಎಸ್. ಯಡಿಯೂರಪ್ಪ ಇಂದು ವಿಜಯಪುರ ಜಿಲ್ಲೆಯ ಭೀಮಾ ತೀರದ ಪ್ರವಾಹದಲ್ಲಿ ಉಂಟಾದ ನೆರೆಹಾನಿಯ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದಾಗಿ ಅಪಾರ ಬೆಳೆ, ಆಸ್ತಿಪಾಸ್ತಿ ಹಾನಿಯಾಗಿದ್ದು, ಪ್ರಾಥಮಿಕ ಅಂದಾಜಿನಂತೆ ಸುಮಾರು ರೂ. 900 ಕೋ. ಬೆಳೆಹಾನಿಯಾಗಿದೆ.  ಇದು ಇನ್ನು ಪ್ರಾಥಮಿಕ ವರದಿಯಾಗಿದ್ದು, ಸಂಪೂರ್ಣ ಸಮೀಕ್ಷೆಯಾದ ಮೇಲೆ ಹಾನಿಯ ಪ್ರಮಾಣ ರೂ. 1000 ಕೋ. ದಾಟುವ ನಿರೀಕ್ಷೆಯಿದೆ. ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದಾದಿಗ 43 ಗ್ರಾಮಗಳು ಪೀಡಿತವಾಗಿವೆ.  ಚಡಚಣ, ಇಂಡಿ ಮತ್ತು ಸಿಂದಗಿ ತಾಲೂಕಿನ ಭೀಮಾ ತೀರದ ಎಲ್ಲ ಗ್ರಾಮಗಳು ಸಂಕಷ್ಟ ಎದುರಿಸಿವೆ.  ಚಡಚಣ ತಾಲೂಕಿನ ಚಣೇಗಾಂವ, ನಿವರಗಿ, ಉಮರಜ, ರೇವತಗಾಂವ, ದಸೂರ, ಸಂಕ, ಅಣಚಿ, ಟಾಕಳಿ, ಧೂಳಖೇಡ, ಹತ್ತಳ್ಳಿ, ಶಿರನಾಳ, ಮರಗೂರ, ಹಾವಿನಾಳ, ಕೆರೂರ, ತದ್ದೆವಾಡಿ, ಹಲಸಂಗಿ, ಶಿರಗೂರ ಖಾಲ್ಸಾ, ಗೋವಿಂದಪುರ, ಉಮರಾಣಿ,  ಇಂಡಿ ತಾಲೂಕಿನ ಹಿಂಗಣಿ, ಬರಗುಡಿ, ಹಳೇ ಪಡನೂರ, ಶಿರಗೂರ/ಗುಬ್ಬೇವಾಡ, ಅಗರಖೇಡ, ಚಿಕ್ಕಮಣ್ಣೂರ, ಭುಯ್ಯಾರ, ಖೇಡಗಿ, ಮಿರಗಿ, ನಾಗರಳ್ಳಿ, ರೋಡಗಿ, ನಿವರಗಿ, ಸಿಂದಗಿ ತಾಲೂಕಿನ ಕಡಣಿ, ತಾವರಖೇಡ, ಕುಡ್ನಳ್ಳಿ, ಬ್ಯಾಡಗಿಹಾಳ, ದೇವಣಗಾವಂ, ಕಡ್ಲೇವಾಡ, ಶಂಭೇವಾಡ, ಕುಮಸಗಿ, ಬಗಲೂರ, ಚಿಕ್ಕಹವಳಗಿ, ಶಿರಸಗಿ ಗ್ರಾಮಗಳ ಬೆಳೆ, ಆಸ್ತಿಪಾಸ್ತಿ ಹಾನಿಯಾಗಿದೆ.

ಈ ಪ್ರವಾಹದಲ್ಲಿ 12872 ಮನೆಗಳಿಗೆ ಹಾನಿಯಾಗಿದ್ದು, ಇವುಗಳಲ್ಲಿ 2543 ಮನೆಗಳು ಸಂಪೂರ್ಣ ಜಲಾವೃತವಾಗಿವೆ.  72534 ಭೀಮಾ ನದಿ ಪ್ರವಾಹದಿಂದ ಸಂತ್ರಸ್ತರಾಗಿದ್ದು, 12217 ಜನರನ್ನು ಸ್ಥಳಾಂತರ ಮಾಡಲಾಗಿದೆ.  ಅಷ್ಟೇ ಅಲ್ಲ, 1516 ಜನರನ್ನು ರಕ್ಷಣಾ ಕಾರ್ಯಾಚರಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ಕರೆತರಲಾಗಿದೆ.

Karnataka Weather Forecast; ರಾಜ್ಯದ ಹಲವೆಡೆ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ!

ಭೀಮಾ ಪ್ರವಾಹ ಸಂತ್ರಸ್ತರಿಗಾಗಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಲ್ಲಿ 7 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 175 ಕುಟುಂಬಗಳ 1042 ಜನರು ಹಾಗೂ ೈ217 ಮಕ್ಕಳನ್ನು ಇರಿಸಲಾಗಿದೆ.  ಇಂಡಿ ತಾಲೂಕಿನಲ್ಲಿ ಅತೀ ಹೆಚ್ಚು 21 ಕಾಳಜಿ ಕಾಳಜಿ ಕೇಂದ್ರಗಳನ್ನು ತೆರೆದು 378 ಕುಟುಂಬಗಳ ಒಟ್ಟು 1758 ಜನರು ಹಾಗೂ 491 ಮಕ್ಕಳನ್ನು ಇರಿಸಲಾಗಿದೆ.  ಸಿಂದಗಿ ತಾಲೂಕಿನಲ್ಲಿ 14 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 1490 ಮಕ್ಕಳು ಸೇರಿದಂತೆ 5317 ಜನರಿಗೆ ಆಶ್ರಯ ಕಲ್ಪಿಸಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ 160379 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದು, ಸುಮಾರು ರೂ. 636.46 ಕೋ. ಹಾನಿಯಾಗಿದೆ.  ಸೂರ್ಯಕಾಂತಿ, ತೊಗರಿ, ಈರುಳ್ಳಿ, ಶೇಂಗಾ, ಮೆಕ್ಕೆಜೋಳ, ಜೋಳ, ಕಬ್ಬು, ಹತ್ತಿ, ದ್ರಾಕ್ಷಿ ಹಾನಿಯಾಗಿದೆ.

ವಿಜಯಪುರ ಜಿಲ್ಲೆಯಲ್ಲಿ 11929.10 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 156.01 ಕೋ. ನಷ್ಟ ಅಂದಾಜಿಸಲಾಗಿದೆ. ಸರಕಾರಿ ಆಸ್ತಿಪಾಸ್ತಿಯ ಅಂದಾಜು ರೂ. 334.76 ಕೋ. ಎಂದು ಅಂದಾಜಿಸಲಾಗಿದೆ.

ಸಿಎಂ ವಿಜಯಪುರ ಜಿಲ್ಲೆಗೆ, ಯತ್ನಾಳ ಬೆಂಗಳೂರಿಗೆಈ ಮಧ್ಯೆ ಸಿಎಂ ಬಿ. ಎರ್. ಯಡಿಯೂರಪ್ಪ ಇಂದು ವಿಜಯಪುರ ಜಿಲ್ಲೆಯಲ್ಲಿ ಭೀಮಾ ಪ್ರವಾಹದ ವೈಮಾನಿಕ ಸಮೀಕ್ಷೆ ನಡೆಸಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಆಗಮಿಸುತ್ತಿದ್ದಾರೆ.
Youtube Video

ಈ ವಿಷಯ ಸೋಮವಾರವೇ ದೃಢಪಟ್ಟಿದ್ದರೂ, ಕ್ಯಾರೆ ಎನ್ನದ ಯತ್ನಾಳ ನಿನ್ನೆ ಅಂದರೆ ಮಂಗಳವಾರ ನಸುಕಿನ ಜಾವವೇ ಬೆಂಗಳೂರಿಗೆ ತೆರಳಿ ಸಿಎಂ ಭೇಟಿಯಿಂದ ದೂರ ಉಳಿದಿದ್ದಾರೆ.  ಈ ಮೂಲಕ ತಮ್ಮ ಮತ್ತದೇ ಗತ್ತು ತೋರಿಸಿದ್ದಾರೆ.
Published by: Latha CG
First published: October 21, 2020, 11:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories