HOME » NEWS » State » CM BS YEDIYURAPPA TO VISIT DELHI IN THREE DAYS TO DISCUSS ABOUT CABINET EXPANSION WITH HIGH COMMAND GNR

ಸಚಿವ ಸಂಪುಟ ವಿಸ್ತರಣೆ: ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಿಎಂ ಯಡಿಯೂರಪ್ಪ ದೆಹಲಿ ಪ್ರವಾಸ ಸಾಧ್ಯತೆ

ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡಲು ಸಿಎಂ ಬಯಸಿದ್ದರು. ಈ ಸಂಬಂಧ ದೆಹಲಿಗೂ ಹೋಗಿ ಬಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಸಂಪುಟ ವಿಸ್ತರಣೆಗೆ ಅನುಮತಿ ಸಿಗುವ ನಿರೀಕ್ಷೆ ಹುಸಿಯಾಗಿತ್ತು. ಇದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯಾಗಿತ್ತು.

news18-kannada
Updated:September 28, 2020, 5:49 PM IST
ಸಚಿವ ಸಂಪುಟ ವಿಸ್ತರಣೆ: ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಿಎಂ ಯಡಿಯೂರಪ್ಪ ದೆಹಲಿ ಪ್ರವಾಸ ಸಾಧ್ಯತೆ
ಬಿ.ಎಸ್. ಯಡಿಯೂರಪ್ಪ
  • Share this:
ಬೆಂಗಳೂರು(ಸೆ.28): ಕಳೆದ ಒಂದು ವಾರದ ಹಿಂದೆಯಷ್ಟೇ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಿದ್ದರು. ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ಮಾಡಿ ಸಂಪುಟ ವಿಸ್ತರಣೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ರು. ನಂತರ ವಾಪಸ್ಸು ಬಂದು ಹೈಕಮಾಂಡ್ ಒಪ್ಪಿಗಾಗಿ ಒಂದು ವಾರ ಕಾದಿದ್ರು. ಇದೀಗ ಒಪ್ಪಿಗೆ ಸಿಗದೆ ಇರೋದ್ರಿಂದ ಮತ್ತೊಮ್ಮೆ ದೆಹಲಿಗೆ ತೆರಳಲು ಸಿದ್ದತೆ ನಡೆಸಿದ್ದಾರೆ. ಹೌದು ಇನ್ನೂ ಮೂರು ದಿನಗಳಲ್ಲಿ ಸಿಎಂ ದೆಹಲಿಗೆ ಹೋಗಿ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ತಿಳಿಸಿದ್ದಾರೆ. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ರೈತರ ಬಂದ್ ಕುರಿತು ಸುದ್ದಿಗೋಷ್ಢಿಯಲ್ಲಿ ಈ ಮಾತನ್ನು ಹೇಳಿದ್ದಾರೆ. ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಮತ್ತೆ ದೆಹಲಿ ಪ್ರವಾಸಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ನಿರ್ಧಾರ ಪ್ರಕಟಿಸಲಿದ್ದಾರೆ. ಸಂಪುಟ ವಿಸ್ತರಣೆ ಮಾಡಲು ಈಗ ಯಾವುದೇ ಸಮಸ್ಯೆ ಇಲ್ಲ. ಮೂರ್ನಾಲ್ಕು ದಿನಗಳಲ್ಲಿ ದೆಹಲಿಗೆ ತೆರಳುತ್ತೇನೆ ಎಂದರು. ವರಿಷ್ಠರ ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಮತ್ತೆ ಚರ್ಚೆ ನಡೆಸಲಿದ್ದೇನೆ. ಕೇಂದ್ರದ ನಾಯಕರ ಸಮ್ಮತಿ ಪಡೆದು ಸಂಪುಟ ವಿಸ್ತರಿಸಲಿದ್ದೇನೆ ಎಂದರು.

ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡಲು ಸಿಎಂ ಬಯಸಿದ್ದರು. ಈ ಸಂಬಂಧ ದೆಹಲಿಗೂ ಹೋಗಿ ಬಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಸಂಪುಟ ವಿಸ್ತರಣೆಗೆ ಅನುಮತಿ ಸಿಗುವ ನಿರೀಕ್ಷೆ ಹುಸಿಯಾಗಿತ್ತು. ಇದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯಾಗಿತ್ತು.

ಈಗ ಅಧಿವೇಶನ ಮುಗಿಯುತ್ತಿದ್ದಂತೆ ಮತ್ತೆ ಸಿಎಂ ಹೆಹಲಿಗೆ ತೆರಳುವ ಕುರಿತು ಮಾತನಾಡಿದ್ದು, ಸಚಿವಾಕಾಂಕ್ಷಿಗಳಲ್ಲಿ ಮತ್ತೆ ಕನಸು ಚಿಗುರೊಡೆದಿದೆ. ಇದೀಗ ಎರಡನೇ ಬಾರಿಯ ಭೇಟಿಯಲ್ಲಾದ್ರು ಸಂಪುಟ ವಿಸ್ತರಣೆ ಸಿಗಬಹುದಾ ಎಂಬುದು ಇದೀಗ ಸಚಿವ ಸ್ಥಾನದ ಆಕಾಂಕ್ಷಿ ಗಳಲ್ಲಿ ಚಿಂತೆಯಾಗಿದೆ.

ರಾಜ್ಯದಲ್ಲಿ ಇನ್ನೂ 6 ಸಂಪುಟ ದರ್ಜೆಯ ಸಚಿವ ಸ್ಥಾನ ಉಳಿದಿದೆ. ಆದರೆ, ಈ 6 ಸ್ಥಾನಕ್ಕೆ ಬಿಜೆಪಿಯಲ್ಲಿ ಕನಿಷ್ಟ 20ಕ್ಕೂ ಹೆಚ್ಚು ಸಚಿವ ಸ್ಥಾನ ಆಕಾಂಕ್ಷಿಗಳು ಇದ್ದಾರೆ. ಇನ್ನೂ ಉತ್ತರ ಕರ್ನಾಟಕ ಮೂಲದ ಪ್ರಬಲ ನಾಯಕ ಉಮೇಶ್‌ ಕತ್ತಿ ಆದಿಯಾಗಿ ಈ ಪಟ್ಟಿ ಬಹುದೊಡ್ಡದಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಒಂದು ವರ್ಷವಾದರೂ ಸಹ ಬಿಎಸ್‌ವೈ ಸಂಪುಟ ವಿಸ್ತರಣೆ ಮಾಡಿರಲಿಲ್ಲ.

ಸಚಿವ ಸ್ಥಾನಕ್ಕಾಗಿ ಅನೇಕ ನಾಯಕರು ಲಾಬಿ ನಡೆಸಿದ್ದರೂ ಸಹ ಸಂಪುಟ ವಿಸ್ತರಣೆ ಮಾಡುವ ದುಸ್ಸಾಹಸಕ್ಕೆ ಯಡಿಯೂರಪ್ಪ ಕೈಹಾಕಿರಲಿಲ್ಲ. ಆದರೆ, ಒಂದು ವರ್ಷದ ಬಳಿಕ ಕೊನೆಗೂ ಬಿಎಸ್‌ವೈ ಮುಂದಿನ ತಿಂಗಳಲ್ಲಿ ಸಂಪುಟ ವಿಸ್ತರಣೆ ಹಾಗೂ ಪುನಾರಚಣೆ ಮಾಡಲಿದ್ದಾರೆ.
Youtube Video

ಇದನ್ನೂ ಓದಿ: ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಯತ್ನ - ನೂರಾರು ರೈತರನ್ನು ವಶಕ್ಕೆ ಪಡೆದ ಪೊಲೀಸರುಕಳೆದ ಒಂದು ವರ್ಷದಿಂದ ತಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸದ ಕೆಲವರಿಗೆ ಕೋಕ್‌ ಕೊಟ್ಟು ಹೊಸಬರಿಗೆ ಅವಕಾಶ ನೀಡಲಿದ್ದಾರೆ. ಅಲ್ಲದೆ, ಉಳಿದಿರುವ ಖಾತೆಗಳನ್ನೂ ಸಮರ್ಥರಿಗೆ ಹಂಚಲಿದ್ದಾರೆ. ಈಗಾಗಲೇ ಯಾರ್‍ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಪಟ್ಟಿ ಅವರ ಬಳಿ ಸಿದ್ದವಿದೆ ಎಂದು ಹೇಳಲಾಗುತ್ತಿದೆ.
Published by: Ganesh Nachikethu
First published: September 28, 2020, 5:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories