ಸದ್ಯದಲ್ಲೇ ಸಂಪುಟ ವಿಸ್ತರಣೆ: ಜ.17ಕ್ಕೆ ರಾಜ್ಯಕ್ಕೆ ಅಮಿತ್​​ ಶಾ ಆಗಮನ; ಸಿಎಂ ಬಿಎಸ್​​​ವೈ ಜತೆ ಮಹತ್ವದ ಚರ್ಚೆ

ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ತವಕದಲ್ಲಿದ್ದಾರೆ. ಸಂಪುಟ ವಿಸ್ತರಣೆ ಮಾಡಿದ ಬಿಜೆಪಿ ಮೂಲೆ ಗುಂಪಾಗಲಿದೆ. ಈಗಾಗಲೇ ಯಶವಂತಪುರ ಶಾಸಕ ಎಸ್​​.ಟಿ ಸೋಮಶೇಖರ್​​ ಸೇರಿದಂತೆ ಹಲವು ನೂತನ ಶಾಸಕರು ಮಾಧ್ಯಮದ ಮುಂದೆ ಈ ಬಗ್ಗೆ ಪರೋಕ್ಷವಾಗಿ ಅಸಮಾನ ತೋಡಿಕೊಂಡಿದ್ದಾರೆ.

news18-kannada
Updated:January 11, 2020, 10:48 AM IST
ಸದ್ಯದಲ್ಲೇ ಸಂಪುಟ ವಿಸ್ತರಣೆ: ಜ.17ಕ್ಕೆ ರಾಜ್ಯಕ್ಕೆ ಅಮಿತ್​​ ಶಾ ಆಗಮನ; ಸಿಎಂ ಬಿಎಸ್​​​ವೈ ಜತೆ ಮಹತ್ವದ ಚರ್ಚೆ
ಸಿಎಂ ಬಿ.ಎಸ್.ಯಡಿಯೂರಪ್ಪ
  • Share this:
ಬೆಂಗಳೂರು(ಜ.11): ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ವಿಳಂಬವೂ ನೂತನ ಬಿಜೆಪಿ ಶಾಸಕರಲ್ಲಿ ಅಸಮಾಧಾನ ಮೂಡಿಸಿದೆ. ಈಗಾಗಲೇ ಬಿಜೆಪಿ ನೂತನ ಶಾಸಕರು ಬಿ.ಎಸ್​​ ಯಡಿಯೂರಪ್ಪರನ್ನು ಭೇಟಿ ಮಾಡಿ ಅಸಮಾಧಾನ ತೋಡಿಕೊಂಡಿದ್ದಾರೆ. ಫೆಬ್ರವರಿ 17ನೇ ತಾರೀಕಿನಂದು ವಿಧಾನಸಭಾ ಜಂಟಿ ಅಧಿವೇಶನ ನಡೆಯಲಿದೆ. ಇದಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಆಗಬೇಕೆಂದು ಸಿಎಂ ಬಿ.ಎಸ್​ ಯಡಿಯೂರಪ್ಪಗೆ ಬಿಜೆಪಿ ನೂತನ ಶಾಸಕರು ಒತ್ತಡ ಹಾಕಿದ್ದಾರೆ. ಈ ಮಧ್ಯೆಯೇ ಸದ್ಯದಲ್ಲೇ ಕೇಂದ್ರ ಗೃಹ ಸಚಿವ ಅಮಿತ್​​ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್​ ಜತೆಗೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡಲಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಇಂದು ಡಾಲರ್ಸ್​​ ಕಾಲೋನಿಯ ತಮ್ಮ ನಿವಾಸದಲ್ಲಿ ಮಾತಾಡಿದ ಸಿಎಂ ಬಿ.ಎಸ್​​ರ ಯಡಿಯೂರಪ್ಪ, ನಾನು ದೆಹಲಿಗೆ ಹೋಗುತ್ತಿಲ್ಲ. ಕೇಂದ್ರ ಗೃಹ ಸಚಿವ ಅಮಿತ್​​ ಶಾರ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಹೇಗಿದ್ದರೂ ಜನವರಿ 17- ಮತ್ತು 18ನೇ ತಾರೀಕಿನಂದು ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರು ಬಂದಾಗಲೇ ಭೇಟಿ ಮಾಡಿ ಚರ್ಚಿಸಿ ಸಂಪುಟ ವಿಸ್ತರಣೆ ಕುರಿತು ತೀರ್ಮಾನ ಮಾಡುತ್ತೇನೆ ಎಂದರು.

ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ತವಕದಲ್ಲಿದ್ದಾರೆ. ಸಂಪುಟ ವಿಸ್ತರಣೆ ಮಾಡಿದ ಬಿಜೆಪಿ ಮೂಲೆ ಗುಂಪಾಗಲಿದೆ. ಈಗಾಗಲೇ ಯಶವಂತಪುರ ಶಾಸಕ ಎಸ್​​.ಟಿ ಸೋಮಶೇಖರ್​​ ಸೇರಿದಂತೆ ಹಲವು ನೂತನ ಶಾಸಕರು ಮಾಧ್ಯಮದ ಮುಂದೆ ಈ ಬಗ್ಗೆ ಪರೋಕ್ಷವಾಗಿ ಅಸಮಾನ ತೋಡಿಕೊಂಡಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಭುಗಿಲೇಳುವ ಮುನ್ನವೇ ಸಂಪುಟ ವಿಸ್ತರಣೆ ಮಾಡುವುದು ಒಳಿತು ಎಂದು ಸಿಎಂ ಬಿ.ಎಸ್​ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್​​ಗೆ ಮನವರಿಕೆ ಮಾಡಲಿದ್ದಾರೆ ಎಂದೇಳಲಾಗುತ್ತಿದೆ.

ಮೂಲಗಳ ಪ್ರಕಾರ, ಯಡಿಯೂರಪ್ಪ ಅವರು ಜ. 17ಕ್ಕೆ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಕಳೆದ ತಿಂಗಳು ನಡೆದಿದ್ದ ಉಪಚುನಾವಣೆಯಲ್ಲಿ ಗೆದ್ದು ‘ಅರ್ಹ’ಗೊಂಡ 11 ಶಾಸಕರ ಪೈಕಿ ಏಳು ಮಂದಿಗೆ ಮಾತ್ರ ಮಂತ್ರಿ ಸ್ಥಾನ ನೀಡಲು ಬಿಎಸ್​ವೈ ಯೋಜಿಸಿದ್ದರೆನ್ನಲಾಗಿದೆ. ಇದು ತಿಳಿದ ರಮೇಶ್ ಜಾರಕಿಹೊಳಿ ಸತತ ಒತ್ತಡಗಳನ್ನು ಹಾಕಿದ ಪರಿಣಾಮ, ಸಂಪುಟದಲ್ಲಿ ‘ಅರ್ಹ’ರ ಸಂಖ್ಯೆಯನ್ನು 9ಕ್ಕೆ ಏರಿಸಲು ನಿರ್ಧರಿಸಿದ್ದಾರೆ. ಆದರೂ ಕೂಡ ರಮೇಶ್ ಜಾರಕಿಹೊಳಿ ಪಟ್ಟು ಸಡಿಲಿಸಿಲ್ಲ.

ಇದನ್ನೂ ಓದಿ: ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ ಚಿದಾನಂದಮೂರ್ತಿ ಅಂತ್ಯಕ್ರಿಯೆ; ಸಿಎಂ ಯಡಿಯೂರಪ್ಪ

ಉಪಚುನಾವಣೆಯಲ್ಲಿ ಗೆದ್ದ 11 ರೆಬೆಲ್​ಗಳ ಪೈಕಿ ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್ ಹೊರತುಪಡಿಸಿ ಉಳಿದವರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ. ಆದರೆ, ರಮೇಶ್ ಜಾರಕಿಹೊಳಿ ಅವರು ಎಲ್ಲಾ 11 ಮಂದಿಗೂ ಸಚಿವ ಸ್ಥಾನ ಸಿಗಲೇಬೇಕೆಂದು ಹಠ ಹಿಡಿದಿದ್ದಾರೆ. ನನ್ನನ್ನು ಮಂತ್ರಿ ಮಾಡದಿದ್ದರೂ ಪರವಾಗಿಲ್ಲ. ಉಳಿದವರನ್ನೆಲ್ಲಾ ಮಂತ್ರಿ ಮಾಡಿ ಎಂದು ಅವರು ಒತ್ತಡ ಹೇರುತ್ತಿದ್ಧಾರೆ. ರಮೇಶ್ ಜಾರಕಿಹೊಳಿಯ ಮಂತ್ರಕ್ಕೆ ಸಿಎಂ ಯಡಿಯೂರಪ್ಪ ಬೇಸ್ತು ಬಿದ್ದಿದ್ಧಾರೆ. ಜ. 11 ಮತ್ತು 12ರಂದು ದೆಹಲಿಗೆ ಹೋಗಲಿರುವ ಅವರು ಹೈಕಮಾಂಡ್ ಜೊತೆ ಮಾತನಾಡಿ ಒಂದು ನಿರ್ಧಾರಕ್ಕೆ ಬರುವ ನಿರೀಕ್ಷೆ ಇದೆ.

ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವಿದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ 17 ಶಾಸಕರು ಬಂಡಾಯವೆದ್ದು ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ಅನರ್ಹತೆಯ ಹಣೆಪಟ್ಟಿಯನ್ನೂ ಕಟ್ಟಿಕೊಳ್ಳಬೇಕಾಯಿತು. ಇದರಿಂದ ಯಡಿಯೂರಪ್ಪ ಅಧಿಕಾರ ಹಿಡಿಯಲು ಸಾಧ್ಯವಾಯಿತು. ಇದರಿಂದ ತೆರವಾದ 17 ಕ್ಷೇತ್ರಗಳ ಪೈಕಿ ಆರ್.ಆರ್. ನಗರ ಮತ್ತು ಮಸ್ಕಿ ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಿತು. 15 ಕ್ಷೇತ್ರಗಳ ಪೈಕಿ ಶಿವಾಜಿನಗರ ಮತ್ತು ರಾಣೆಬೆನ್ನೂರು ಹೊರತುಪಡಿಸಿ ಉಳಿದ 13 ಕ್ಷೇತ್ರಗಳಲ್ಲಿ ‘ಅನರ್ಹ’ ಶಾಸಕರಿಗೆ ಟಿಕೆಟ್ ಕೊಡಲಾಯಿತು. ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಬಿಜೆಪಿ 12ರಲ್ಲಿ ಜಯಭೇರಿ ಭಾರಿಸಿತು. 13 ಅನರ್ಹ ಶಾಸಕರಲ್ಲಿ 11 ಮಂದಿ ಗೆದ್ದು ಅರ್ಹರೆನಿಸಿದರು. ಹುಣಸೂರಿನಲ್ಲಿ ಹೆಚ್. ವಿಶ್ವನಾಥ್ ಮತ್ತು ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಸೋಲುಂಡು ಅನರ್ಹರಾಗಿಯೇ ಉಳಿದುಬಿಟ್ಟರು.ಈಗ ಈ 11 ಅರ್ಹ ಶಾಸಕರೆಲ್ಲರೂ ಮಂತ್ರಿಪಟ್ಟ ನಿಶ್ಚಿತವೆಂಬ ನಿರೀಕ್ಷೆಯಲ್ಲಿ ಇರುವಾಗ ಯಡಿಯೂರಪ್ಪ ಅವರು ಚೌಕಾಸಿ ಮಾಡಹೊರಟಿರುವುದು ರಮೇಶ್ ಜಾರಕಿಹೊಳಿ ಅಂಡ್ ಟೀಮ್ ಅನ್ನು ಕೆರಳಿಸಿದೆ. ಸಿದ್ದರಾಮಯ್ಯರಂಥ ಪ್ರಬಲ ನಾಯಕರನ್ನೇ ಲೆಕ್ಕಿಸದೇ ಬಂಡಾಯ ಎದ್ದಿದ್ದ ಈ ರೆಬೆಲ್​ಗಳು ಯಡಿಯೂರಪ್ಪ ಅವರನ್ನು ನೆಮ್ಮದಿಯಾಗಿ ಇರಲು ಬಿಡುವುದಿಲ್ಲ ಎಂದು ಡಿಕೆಶಿಯಂಥ ಕಾಂಗ್ರೆಸ್ ನಾಯಕರೇ ಹಿಂದೆ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇದು ಗೊತ್ತಿರುವ ಯಡಿಯೂರಪ್ಪ ಅವರು ಎಲ್ಲಾ 11 ಮಂದಿಗೂ ಮಂತ್ರಿಮಂಡಲದಲ್ಲಿ ಸ್ಥಾನ ಕೊಡುವ ಪ್ರಯತ್ನವನ್ನಂತೂ ಮಾಡಲಿದ್ಧಾರೆ. ಅದು ಅವರಿಗೆ ಅನಿವಾರ್ಯವೂ ಹೌದು.
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ