HOME » NEWS » State » CM BS YEDIYURAPPA THANKED TO PM MODI FOR GRANTS TO SUB URBAN PROJECT LG

ಸಬ್​​ಅರ್ಬನ್​​ ಯೋಜನೆಗೆ ಕೇಂದ್ರ ಬಜೆಟ್​​ನಲ್ಲಿ ಅನುದಾನ; ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಸಿಎಂ ಬಿಎಸ್​ವೈ

ಸಬ್​ ಅರ್ಬನ್​​ ರೈಲುಗಳು ಹವಾನಿಯಂತ್ರಿತ ಬೋಗಿಗಳನ್ನು ಹೊಂದಿರುತ್ತವೆ. ಬೆಳಗ್ಗೆ 5ರಿಂದ ಮಧ್ಯರಾತ್ರಿವರೆಗೆ ನಗರದಲ್ಲಿ ಸಂಚರಿಸುತ್ತವೆ. ಬೆಂಗಳೂರು ಸುತ್ತಮುತ್ತಲ ಲಕ್ಷಾಂತರ ಪ್ರಯಾಣಿಕರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲ ಆಗಲಿದೆ. ಈ ಯೋಜನೆಯಿಂದ ಬೆಂಗಳೂರಿನ‌ ಸಂಚಾರ ದಟ್ಟಣೆ ಇಳಿಕೆಯಾಗಲಿದೆ ಎಂದು ಹೇಳಿದರು.

news18-kannada
Updated:February 2, 2020, 12:28 PM IST
ಸಬ್​​ಅರ್ಬನ್​​ ಯೋಜನೆಗೆ ಕೇಂದ್ರ ಬಜೆಟ್​​ನಲ್ಲಿ ಅನುದಾನ; ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಸಿಎಂ ಬಿಎಸ್​ವೈ
ಸಿಎಂ ಯಡಿಯೂರಪ್ಪ
  • Share this:
ಬೆಂಗಳೂರು(ಫೆ.02): ಬೆಂಗಳೂರಿನ ಉಪ ನಗರ(ಸಬ್​ ಅರ್ಬನ್​​) ಯೋಜನೆಗೆ ಶೇ.60ರಷ್ಟು ಅನುದಾನ ನೀಡುವುದಾಗಿ ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​​ನಲ್ಲಿ ಪ್ರಕಟಿಸಿದ್ದರು. ಈ ಸಂಬಂಧ ಇಂದು ಕೇಂದ್ರ ರೈಲ್ವೆ ಸಚಿವ ಸುರೇಶ್​ ಅಂಗಡಿ ಮತ್ತು ಸಿಎಂ ಬಿಎಸ್​ ಯಡಿಯೂರಪ್ಪ ಮಹತ್ವದ  ಜಂಟಿ ಸುದ್ದಿಗೋಷ್ಠಿ ನಡೆಸಿದರು.  ಸಬ್​​​ ಅರ್ಬನ್​​​ ರೈಲ್ವೆ ಯೋಜನೆಗೆ ಕೇಂದ್ರದಿಂದ ಮೀಸಲಿಟ್ಟ ಅನುದಾನ ಹಾಗೂ ಯೋಜನೆ ಬಗ್ಗೆ ಅವರು ಮಾಹಿತಿ ನೀಡಿದರು. ಇದೇ ವೇಳೆ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದರು.

ಬೆಂಗಳೂರಿನಲ್ಲಿ ಸಬ್​ ಅರ್ಬನ್​ ರೈಲು ಯೋಜನೆ ಆಗಬೇಕೆಂದು ಬಹಳ ವರ್ಷಗಳಿಂದ ಆಸೆ ಇತ್ತು. ಕೇಂದ್ರ ಸಚಿವ ಸುರೇಶ್ ಅಂಗಡಿ ಹಾಗೂ ಸಂಸದರ ಪ್ರಯತ್ನದಿಂದ ಆ ಕನಸು ಈಗ ನನಸಾಗಿದೆ. ಕೇಂದ್ರದ ಬಜೆಟ್​​ನಲ್ಲಿ ಯೋಜನೆ ಅನುಷ್ಠಾನ ಘೋಷಣೆ ಆಗಿದೆ. ಇದಕ್ಕೆ ನಾನು ಪ್ರಧಾನಿ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಬೆಂಗಳೂರು ಹೊರವರ್ತುಲ ರಸ್ತೆಯಂತೆ ನಗರದ ಸುತ್ತಲೂ 148 ಕಿಮೀ ರೈಲು ಮಾರ್ಗ ನಿರ್ಮಾಣ ಮಾಡುವುದು ಈ ಸಬರ್ಬನ್ ರೈಲು ಯೋಜನೆಯಾಗಿದೆ. ಒಟ್ಟಾರೆ, 148 ಕಿಮೀ ಮಾರ್ಗದಲ್ಲಿ 55 ಕಿಮೀಯಷ್ಟು ಮಾರ್ಗವು ಎಲಿವೇಟೆಡ್ ಆಗಿರಲಿದೆ. ಅಂದರೆ ಮೇಲ್ಸೇತುವೆಯಾಗಿರಲಿದೆ. ಈ ಯೋಜನೆಯಲ್ಲಿ 57 ರೈಲು ನಿಲ್ದಾಣಗಳಿರಲಿವೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಿನ್ನೆಲೆ; ಧಾರ್ಮಿಕ ಮಂದಿರಗಳ ತೆರವಿಗೆ ಮುಂದಾದ ತುಮಕೂರು ಜಿಲ್ಲಾಡಳಿತ

ಸಬರ್ಬನ್ ರೈಲು ಯೋಜನೆಯಲ್ಲಿ ನಾಲ್ಕು ಪ್ರಮುಖ ಮಾರ್ಗಗಳಿವೆ:

1) ಬೈಯಪ್ಪನಹಳ್ಳಿ-ಬಾಣಸವಾಡಿ-ಯಶವಂತಪುರ – 25.1 ಕಿಮೀ
2) ಕೆಂಗೇರಿ-ಕಂಟೋನ್ಮೆಂಟ್-ವೈಟ್​ಫೀಲ್ಡ್ - 35.52 ಕಿಮೀ3) ಮಾಗಡಿ ರಸ್ತೆ-ಯಶವಂತಪುರ-ಯಲಹಂಕ-ವಿಮಾನ ನಿಲ್ದಾಣ – 41.4 ಕಿಮೀ
4) ಹೆಲ್ಲಳಿಗೆ-ಬೈಯಪ್ಪನಹಳ್ಳಿ-ಯಲಹಂಕ-ರಾಜಾನುಕುಂಟೆ – 46.24 ಕಿಮೀ

ಈ ಯೋಜನೆಗೆ ತಗುಲುವ ಒಟ್ಟು ಅಂದಾಜು ವೆಚ್ಚ 18,600 ಕೋಟಿ ಆಗಿದೆ. 18,600 ಕೋಟಿ ಮೊತ್ತದ ಸಬರ್ಬನ್ ರೈಲು ಯೋಜನೆಯ ಶೇ. 60 ವೆಚ್ಚವನ್ನು ಕೇಂದ್ರವೇ ಭರಿಸಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಾಯೋಗದೊಂದಿಗೆ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದರು.

ಸಬ್​ ಅರ್ಬನ್​​ ರೈಲುಗಳು ಹವಾನಿಯಂತ್ರಿತ ಬೋಗಿಗಳನ್ನು ಹೊಂದಿರುತ್ತವೆ. ಬೆಳಗ್ಗೆ 5ರಿಂದ ಮಧ್ಯರಾತ್ರಿವರೆಗೆ ನಗರದಲ್ಲಿ ಸಂಚರಿಸುತ್ತವೆ. ಬೆಂಗಳೂರು ಸುತ್ತಮುತ್ತಲ ಲಕ್ಷಾಂತರ ಪ್ರಯಾಣಿಕರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲ ಆಗಲಿದೆ. ಈ ಯೋಜನೆಯಿಂದ ಬೆಂಗಳೂರಿನ‌ ಸಂಚಾರ ದಟ್ಟಣೆ ಇಳಿಕೆಯಾಗಲಿದೆ ಎಂದು ಹೇಳಿದರು.

ದೆಹಲಿ ವಿಧಾನಸಭೆ ಚುನಾವಣೆ: 133 ಅಭ್ಯರ್ಥಿಗಳ ಮೇಲಿವೆ ಅಪರಾಧ ಪ್ರಕರಣಗಳು

ಸುದ್ದಿಗೋಷ್ಠಿಯಲ್ಲಿ ಸಂಸದ ಪಿ ಸಿ ಮೋಹನ್, ತೇಜಸ್ವಿ ಸೂರ್ಯ ಹಾಗೂ ಸಚಿವ ಆರ್ ಅಶೋಕ್ ಭಾಗಿಯಾಗಿದ್ದರು.
Youtube Video
First published: February 2, 2020, 12:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories