ಎರಡನೇ ಕಂತಿನಲ್ಲಿ ನೆರೆ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ; ಪ್ರಧಾನಿಗೆ ಬಿಎಸ್​ವೈ ಅಭಿನಂದನೆ

ಕೇಂದ್ರದಿಂದ ಇನ್ನೂ ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ. ಮತ್ತಷ್ಟು ಹಣ ಬಿಡುಗಡೆ ಮಾಡುವ ವಿಶ್ವಾಸ ಇದೆ. ಈಗ ಬಿಡುಗಡೆ ಆಗಿರುವ ಹಣ ಸಾಕಾಗುವುದಿಲ್ಲ.  ಇವಾಗ ಎರಡು ಕಂತುಗಳಲ್ಲಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.

Latha CG | news18-kannada
Updated:January 7, 2020, 11:20 AM IST
ಎರಡನೇ ಕಂತಿನಲ್ಲಿ ನೆರೆ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ; ಪ್ರಧಾನಿಗೆ  ಬಿಎಸ್​ವೈ ಅಭಿನಂದನೆ
ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು(ಜ.07): ಕೇಂದ್ರ ಸರ್ಕಾರವು ರಾಜ್ಯಕ್ಕೆ ಎರಡನೇ ಕಂತಿನಲ್ಲಿ ನೆರೆ ಪರಿಹಾರ ಹಣ ಬಿಡುಗಡೆ ಮಾಡಿದ್ದು, ಸಿಎಂ ಬಿಎಸ್​.ಯಡಿಯೂರಪ್ಪ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ಧಾರೆ. "ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಹೋದ ಕೂಡಲೇ 1869 ಕೋಟಿ  ನೆರೆ ಪರಿಹಾರ ಬಿಡುಗಡೆ ಮಾಡಿದ್ಧಾರೆ. ಈ ಮೊದಲು 1200 ಕೋಟಿ ಹಣ ಬಿಡುಗಡೆ ಮಾಡಿದ್ದರು. ಇವಾಗ 1869 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ.  ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಹಾರ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ.  ಅದಕ್ಕಾಗಿ ಪ್ರಧಾನಿಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ," ಎಂದರು.

"ಕೇಂದ್ರದಿಂದ ಇನ್ನೂ ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ. ಮತ್ತಷ್ಟು ಹಣ ಬಿಡುಗಡೆ ಮಾಡುವ ವಿಶ್ವಾಸ ಇದೆ. ಈಗ ಬಿಡುಗಡೆ ಆಗಿರುವ ಹಣ ಸಾಕಾಗುವುದಿಲ್ಲ.  ಇವಾಗ ಎರಡು ಕಂತುಗಳಲ್ಲಿ ಹಣ ಬಿಡುಗಡೆ ಮಾಡಿದ್ದಾರೆ," ಎಂದು ಹೇಳಿದರು.

ಕರ್ನಾಟಕಕ್ಕೆ 1,869 ಕೋಟಿ ರೂ. ನೆರೆ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

ಮುಂದುವರೆದ ಅವರು, "ಈಗಾಗಲೇ ಬಜೆಟ್ ಪೂರ್ವ ಭಾವಿ ಸಭೆ ಆರಂಭಿಸಲಾಗಿದೆ. ನಿನ್ನೆ ವಿವಿಧ ತೆರಿಗೆ ಇಲಾಖೆಯ ಜೊತೆ ಸಭೆ ನಡೆಸಿದ್ದೇನೆ. ಮುಂದೆ ಉಳಿದ ಇಲಾಖೆಗಳ ಜೊತೆ ಸಭೆ ಮಾಡುತ್ತೇನೆ. ಇವಾಗ ಇಲಾಖೆಗಳಲ್ಲಿ ಏನೇನು ಆಗಿದೆ? ಮುಂದಿನ ಬಜೆಟ್ ನಲ್ಲಿ ಏನು ಮಾಡಬೇಕು? ಎಂದು ಚರ್ಚೆ ನಡೆಸಲಾಗಿದೆ. ಈ ಸಲ ಅವರ ಸಲಹೆ ಪಡೆದು ಒಳ್ಳೆಯ ಬಜೆಟ್ ಮಂಡನೆ ಮಾಡುತ್ತೇನೆ. ರೈತ ಪರ ಬಜೆಟ್ ಮಂಡನೆ ಬಗ್ಗೆ ಯೋಚನೆ ಮಾಡುತ್ತಿದ್ದೇನೆ," ಎಂದರು.

ಇದಕ್ಕೂ ಮುನ್ನ  ಸಿಎಂ ಬಿಎಸ್​ ಯಡಿಯೂರಪ್ಪ ವಿಧಾನಸೌಧದ ಆವರಣದಲ್ಲಿ 20 ನೂತನ ಬಸ್​​​ಗಳನ್ನು ಲೋಕಾರ್ಪಣೆ ಮಾಡಿದರು. ಹಸಿರು ಬಾವುಟ ತೋರಿಸುವ ಮೂಲಕ ಹೊಸ ಬಸ್​ಗಳಿಗೆ ಚಾಲನೆ ನೀಡಿದರು. ಇದೇ ಮೊದಲ ಬಾರಿಗೆ ಅಂಬಾರಿ ಡ್ರೀಮ್ಸ್​ ಕ್ಲಾಸ್​​ ಬಸ್ಸುಗಳು ರಸ್ತೆಗಿಳಿಯುತ್ತಿದ್ದು,  ಸಿಎಂ ಬಿಎಸ್​ವೈ ಈ ಮಾದರಿಯ 5 ಬಸ್​ಗಳಿಗೆ ಚಾಲನೆ ನೀಡಿದರು. ಕೆಎಸ್​​ಆರ್​ಟಿಸಿಯ ವಿವಿಧ ಮಾದರಿಯ ಒಟ್ಟು 20 ಬಸ್​ಗಳಿಗೆ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿದರು.

JNU Violence: ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶ್​​​​ ಘೋಷ್ ವಿರುದ್ಧ ಎಫ್​​ಐಆರ್​​​

 

  • ಅಂಬಾರಿ ಡ್ರೀಮ್ ಕ್ಲಾಸ್- 5

  • ಐರಾವತ ಕ್ಲಾಸ್ - 3

  • ಐರಾವತ - 4

  • ನಾನ್ ಎಸಿ ಸ್ಲೀಪರ್ - 01

  • ರಾಜಹಂಸ - 2

  • ಕರ್ನಾಟಕ ಸಾರಿಗೆ - 5


ಹೀಗೆ  ಒಟ್ಟು 20 ಬಸ್ಸುಗಳಿಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು. ಬಳಿಕ ತನ್ನ ಊರಿನ ಬಸ್ಸಿನಲ್ಲಿ (ಬೆಂಗಳೂರು-ಶಿಕಾರಿಪುರ) ಸಿಎಂ ತುಸು ದೂರ ಪ್ರಯಾಣ ಮಾಡಿದರು. ನೂತನ ಬಸ್​ಗಳ ಉದ್ಘಾಟನಾ ಸಮಾರಂಭಕ್ಕೆ ಸಾರಿಗೆ ಸಚಿವರೇ ಗೈರಾಗಿದ್ದರು. ಡಿಸಿಎಂ ಹಾಗೂ ಸಾರಿಗೆ ಸಚಿವರಾಗಿರುವ ಲಕ್ಷ್ಮಣ ಸವದಿ ಕಾರ್ಯಕ್ರಮಕ್ಕೆ ಹಾಜರಾಗದೇ ಇದ್ದದ್ದು ಎದ್ದು ಕಾಣುತ್ತಿತ್ತು.

 

 
First published:January 7, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ