ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಅಪೇಕ್ಷೆ; ಹೈಕಮಾಂಡ್ ನಿರ್ಧಾರ ಅಂತಿಮ ಎಂದ ಸಿಎಂ ಯಡಿಯೂರಪ್ಪ

ಸಚಿವ ಸಂಪುಟ ಪುನರ್​​ ರಚನೆ ಅಥವಾ ವಿಸ್ತರಣೆ ಕೇಂದ್ರ ನಾಯಕರ ನಿರ್ಧಾರದ ಮೇಲೆ ಅವಲಂಬಿಸಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕೆಂಬ ಅಪೇಕ್ಷೆಯಿದೆ. ಆದರೆ ಎಲ್ಲವೂ ಹಿರಿಯ ನಾಯಕರ ನಿರ್ಧಾರದ ಮೇಲೆ ಬಿಟ್ಟಿದೆ ಎಂದರು.

ಸಿಎಂ ಬಿ.ಎಸ್. ಯಡಿಯೂರಪ್ಪ

ಸಿಎಂ ಬಿ.ಎಸ್. ಯಡಿಯೂರಪ್ಪ

  • Share this:
ಕಲಬುರ್ಗಿ(ಸೆ.17): ಅಧಿವೇಶನಕ್ಕೂ  ಮುಂಚಿತವಾಗಿಯೇ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂಬ ಅಪೇಕ್ಷೆಯಿದ್ದು, ಪಕ್ಷದ ನಾಯಕರ ತೀರ್ಮಾನದ ಮೇಲೆ ಅವಲಂಬಿತವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಯಡಿಯೂರಪ್ಪ, ಇಂದು ದೆಹಲಿಗೆ ಹೋಗ್ತಿದ್ದೇನೆ. ನಾಳೆ ಪ್ರಧಾನಿ ಮೋದಿ ಮತ್ತು  ಕೇಂದ್ರದ ಸಚಿವರನ್ನು ಭೇಟಿಯಾಗುತ್ತಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚಿಸಲಿದ್ದೇನೆ. ಸಚಿವ ಸಂಪುಟ ಪುನರ್​​ ರಚನೆ ಅಥವಾ ವಿಸ್ತರಣೆ ಕೇಂದ್ರ ನಾಯಕರ ನಿರ್ಧಾರದ ಮೇಲೆ ಅವಲಂಬಿಸಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕೆಂಬ ಅಪೇಕ್ಷೆಯಿದೆ. ಆದರೆ ಎಲ್ಲವೂ ಹಿರಿಯ ನಾಯಕರ ನಿರ್ಧಾರದ ಮೇಲೆ ಬಿಟ್ಟಿದೆ ಎಂದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದ ಹೆಚ್ಚಿನ ಹಾನಿಯಾಗಿದ್ದು,  ಹೆಚ್ಚಿನ ಅನುದಾನ ಬಿಡುಗಡೆ ಇತ್ಯಾದಿ ವಿಷಯಗಳನ್ನು ಪ್ರಧಾನಿ ಹಾಗೂ ಕೇಂದ್ರ ಸಚಿವರ ಜೊತೆ ಚರ್ಚಿಸಲಾಗುವುದು. ಕೋವಿಡ್ ಕಾರಣದಿಂದಾಗಿ ಈ ಬಾರಿ ಹಣಕಾಸಿನ ತೊಂದರೆಯಾಗಿದೆ. ಆದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನಿಗದಿಗೊಳಿಸಿದ ಹಣ ಬಿಡುಗಡೆ ಮಾಡುತ್ತೇನೆ. ಇನ್ನೂ 300 ಕೋಟಿ ರೂಪಾಯಿ ಹಣವನ್ನು ಕೆ.ಕೆ.ಆರ್.ಡಿ.ಬಿ.ಗೆ ಬಿಡುಗಡೆ ಮಾಡುತ್ತೇನೆ ಎಂದರು.

ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಸಂಭ್ರಮದ ಚಾಲನೆ

ಕಲಬುರ್ಗಿ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕದ ಉತ್ಸವದ ಸಂಭ್ರಮ ಮನೆ ಮಾಡಿತ್ತು. ಮಳೆಯ ಆತಂಕದಲ್ಲಿಯೇ ಕಲಬುರ್ಗಿ ಸೇರಿ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ನಡೆಯಿತು. ಕಲಬುರ್ಗಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗ ಸಿಎಂ ಯಡಿಯೂರಪ್ಪ, ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿದರು. ವಿಶೇಷ ವಿಮಾನದ ಮೂಲಕ ಕಲಬುರ್ಗಿಗೆ ಆಗಮಿಸಿದ ಯಡಿಯೂರಪ್ಪ, ಸರ್ದಾರ್ ಪಟೇಲರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಡಿ.ಎ.ಆರ್. ಮೈದಾನಕ್ಕೆ ಆಗಮಿಸಿ ರಾಷ್ಟ್ರಧ್ವಜಾರೋಹಣ ಮಾಡಿದರು.  ತೆರೆದ ವಾಹನದಲ್ಲಿ ಪರೇಡ್ ಪರಿವೀಕ್ಷಣೆ ಮಾಡಿದ ಸಿಎಂ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

Drug Mafia: ಬೆಂಗಳೂರಿನಲ್ಲಿ ಒಂದು ಕೋಟಿ ಮೌಲ್ಯದ ಗಾಂಜಾ ವಶ; 14 ಮಂದಿಯ ಬಂಧನ

ಇದೇ ವೇಳೆ ಸಿಎಂ ಯಡಿಯೂರಪ್ಪ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಜಯದೇವ ಹೃದ್ರೋಗ ಸಂಸ್ಥೆ, ಕಲಬುರ್ಗಿ ನಗರಕ್ಕೆ ನಿರಂತರ ನೂರು ಪೂರೈಕೆ ಯೋಜನೆಗೆ ಅಡಿಗಲ್ಲು, ರಸ್ತೆ ಅಗಲೀಕರಣ, ಜೇವರ್ಗಿ ರಸ್ತೆ ರೈಲ್ವೆ ಮೇಲ್ಸೇತುವೆ, ವಸತಿ ನಿಲಯಗಳ ಉದ್ಘಾಟನೆ ಮಾಡಿದರು. ಬೆಂಗಳೂರಿನಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯಗೆ ಹಸ್ತಾಂತರ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕಾರ್ಯಕ್ರಮದ ವೇಳೆ ಮಳೆ ಬಾರದೇ ಇದ್ದುದಕ್ಕೆ ವರುಣ ದೇವನಿಗೆ ಕೃತಜ್ಞತೆ ಸಲ್ಲಿಸಿದರು.

ಮಳೆ ಕಾರಣದಿಂದಾಗಿ ಬರುವ ಪರಿಸ್ಥಿತಿ ಇರಲಿಲ್ಲ. ಮಳೆ ವಿಶ್ರಾಂತಿ ಕೊಟ್ಟಿದ್ದರಿಂದ ಬಂದಿದ್ದೇನೆ. ಕಲ್ಯಾಣ ಕರ್ನಾಟಕದ ಹೊಸ ಶಕೆಗೆ ನಾಂದಿ ಹಾಡಲು ನನಗೆ ಸಂತೋಷವಾಗ್ತಿದೆ. ಈ ಭಾಗಕ್ಕೆ ತಡವಾಗಿ ಸ್ವಾತಂತ್ರ್ಯ ಸಿಕ್ಕಿದೆ. ಸರ್ದಾರ್ ಪಟೇಲರ ಪ್ರಯತ್ನದಿಂದಾಗಿ ಭಾರತ ಒಕ್ಕೂಟದಲ್ಲಿ ಈ ಭಾಗ ವಿಲೀನವಾಯಿತು. ಪಟೇಲರ ನಿರ್ಧಾರದಿಂದಾಗಿ ಒಂದು ವರ್ಷ ತಡವಾಗಿ ಈ ಭಾಗ ವಿಲೀನವಾಯಿತು. ಹೈದರಾಬಾದ್ ನಿಜಾಮನ ಶೋಷಣೆಯಿಂದ ಮುಕ್ತಿ ಹೊಂದಿದ ದಿನ ಇದಾಗಿದೆ. ಕಳೆದ ವರ್ಷ ಇದೇ ದಿನ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಮಾರ್ಪಡಿಸಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ಆಯಾಮ ನೀಡುತ್ತೇವೆ. ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಬದ್ಧ ಎಂದರು.

ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಅಭಿವೃದ್ಧಿ ಮಾಡ್ತೇವೆ, ಉದ್ಯೋಗ ಸೃಜನೆಗೂ ಒತ್ತು ಕೊಡ್ತೇವೆ. ಈ ಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನಲ್ಲಿ ವಸತಿಗಾಗಿ 40 ಕೋಟಿ ವೆಚ್ಚದಲ್ಲಿ ಒಂದು ಎಕರೆ ಜಮೀನು ನೀಡಲಾಗಿದೆ. ಜಯದೇವ ಹೃದ್ರೋಗ ಸಂಸ್ಥೆ ಸ್ಥಾಪನೆಗೆ ಅಡಿಗಲ್ಲು ಹಾಕಿದ್ದೇನೆ, ಬಸವಕಲ್ಯಾಣದಲ್ಲಿ ಅನುಭವ ಮಂಟಪ ಕಾಮಗಾರಿಯನ್ನೂ ಪೂರ್ಣಗೊಳಿಸ್ತೇವೆ. ಕಾಗಿಣಾ ನದಿ ವ್ಯಾಪ್ತಿಯಲ್ಲಿ 10 ಏತ ನೀರಾವರಿ ಯೋಜನೆ ಸ್ಥಾಪನೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ನಿಮ್ಮ ಅಪೇಕ್ಷೆಯಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡ್ತೇನೆ. ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಡಿಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಯಡಿಯೂರಪ್ಪ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕನಸುಗಾರ. ಈ ಪ್ರದೇಶದ ಅಭಿವೃದ್ಧಿಗೆ ಸಿಎಂ ವಿಶೇಷ ಆಸಕ್ತಿ ವಹಿಸಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದೇವೆ. ಈ ಭಾಗದ ಕಲ್ಯಾಣಕ್ಕೂ ಬದ್ಧರಾಗಿದ್ದೇವೆ ಎಂದರು.
Published by:Latha CG
First published: