news18-kannada Updated:January 19, 2021, 6:47 PM IST
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಬೆಂಗಳೂರು; ಖಾತೆ ಹಂಚಿಕೆ ಬಗ್ಗೆ ನಾಳೆ ಸಚಿವರ ಜೊತೆ ಚರ್ಚೆ ಮಾಡ್ತೇನೆ. ಅಂತಿಮವಾಗಿ ಖಾತೆ ಹಂಚಿಕೆ ಪಟ್ಟಿಯನ್ನು ಗುರುವಾರ ಪ್ರಕಟ ಮಾಡ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ವೈ ಅವರು, ರೇಣುಕಾಚಾರ್ಯ ರಿಂದ ವರಿಷ್ಠರ ಭೇಟಿ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದರು. ಅವರ ಬಗ್ಗೆ ನನಗೆ ಗೊತ್ತಿದೆ. ಅವರ ಜೊತೆ ದೂರವಾಣಿ ಮೂಲಕ ಚರ್ಚೆ ಮಾಡಿದ್ದೇನೆ. ಆಮೇಲೆ ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆಯಿಂದ ಬಿಜೆಪಿಯಲ್ಲಿ ಅಸಮಾಧಾನ ಹಿನ್ನೆಲೆಯಲ್ಲಿ ಅಸಮಾಧಾನ ಶಮನಕ್ಕೆ ಸಿಎಂ ಬಿಎಸ್ವೈ ಮುಂದಾಗಿದ್ದಾರೆ. ಅತೃಪ್ತ ಶಾಸಕರ ಜೊತೆ ಚರ್ಚೆಗೆ ಮುಂದಾಗಿದ್ದಾರೆ.
ಆಪ್ತ ಸಚಿವರ ಮೂಲಕ ಅತೃಪ್ತ ಶಾಸಕರನ್ನು ಸಿಎಂ ಕರೆಸಿಕೊಂಡು ಮಾತನಾಡುತ್ತಿದ್ದಾರೆ. ಇಂದು ಅತೃಪ್ತ ಶಾಸಕರಾದ ಅರವಿಂದ ಬೆಲ್ಲದ್ ಹಾಗೂ ಬಿಸಿ ನಾಗೇಶ್ ಗೆ ಕರೆ ಮಾತನಾಡಿದ್ದಾರೆ. ಇಬ್ಬರು ಶಾಸಕರಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕರೆ ಮಾಡಿದ್ದಾರೆ. ಇದೀಗ ಬೊಮ್ಮಾಯಿ ಫೋನ್ ಕರೆಯಿಂದ ಸಿಎಂ ಭೇಟಿಗೆ ಅರವಿಂದ್ ಬೆಲ್ಲದ್ ಅವರು ಬೊಮ್ಮಾಯಿ ಜೊತೆಗೆ ಆಗಮಿಸುತ್ತಿದ್ದಾರೆ.
ಇದನ್ನು ಓದಿ: ಮತದಾನದಿಂದ ತಿರಸ್ಕರಿಸಿದವರನ್ನು, ನನಗಿಂತ ಹಿರಿಯರನ್ನು ಮಂತ್ರಿ ಮಾಡಿದ್ದಾರೆ; ದೆಹಲಿಯಲ್ಲಿ ರೇಣುಕಾಚಾರ್ಯ ಅಸಮಾಧಾನ
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಬಿಜೆಪಿ ಶಾಸಕರು ನಾಳೆ ಸಭೆ ಸೇರಲು ನಿರ್ಧರಿಸಿದ್ದರು. ಸಭೆಯ ವಿಷಯ ತಿಳಿಯುತ್ತಿದ್ದಂತೆ ಅತೃಪ್ತ ಶಾಸಕರನ್ನು ಕರೆಸಿ ಸಿಎಂ ಮಾತನಾಡುವ ಮೂಲಕ ಬಂಡಾಯ ಶಮನಕ್ಕೆ ಮುಂದಾಗಿದ್ದಾರೆ.
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ರೇಣುಕಾಚಾರ್ಯ ಇಂದು ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಲು ಮುಂದಾಗಿದ್ದಾರೆ. ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಅವರು ಸಹ ತಾವು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇನೆ. ಆದರೂ ತಮಗೆ ಸಚಿವ ಸ್ಥಾನ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅದರಂತೆ ಹಲವು ಶಾಸಕರು ಸಚಿವ ಸ್ಥಾನ ವಂಚಿತರಾದ ಕಾರಣಕ್ಕೆ ಅಸಮಾಧಾನ ಹೊರಹಾಕುತ್ತಿದ್ದಾರೆ.
Published by:
HR Ramesh
First published:
January 19, 2021, 6:47 PM IST