'ರಾಜಕಾರಣವೇ ಬೇರೆ, ಸ್ನೇಹವೇ ಬೇರೆ'; ಸಿದ್ದರಾಮಯ್ಯ ಭೇಟಿ ಬಗ್ಗೆ ಬಿಎಸ್​ವೈ ಮನದಾಳದ ಮಾತು

ರಾಜಕೀಯ ಹೊರತುಪಡಿಸಿ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಉತ್ತಮ ಸಂಬಂಧ ಇದೆ. ಅಧಿವೇಶನದ ವೇಳೆ ಸದನದಲ್ಲಿ ಕಿತ್ತಾಡುತ್ತಿದ್ದೆವು. ಬಳಿಕ ಒಟ್ಟಿಗೆ ಕುಳಿತು ಟೀ ಕುಡಿಯುತ್ತಿದ್ದೆವು. ಮಾಜಿ ಸಿಎಂ ಕುಮಾರಸ್ವಾಮಿ ಜೊತೆಯೂ ಒಳ್ಳೆ ಸಂಬಂಧ ಇದೆ.  ದೇವೇಗೌಡರು ದೊಡ್ಡವರು ಅಲ್ಲಿಯವರೆಗೂ ನಾನು ಹೋಗಿಲ್ಲ ಎಂದು ಈಶ್ವರಪ್ಪ ಹೇಳಿದರು.

 ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ

ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ

  • Share this:
ಬೆಂಗಳೂರು(ಡಿ.12): ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಸಿಎಂ ಬಿಎಸ್​. ಯಡಿಯೂರಪ್ಪ, ಸಚಿವ ಕೆ.ಎಸ್​.ಈಶ್ವರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತಿತರರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್​ವೈ, ತಮ್ಮ ಮತ್ತು ಸಿದ್ದರಾಮಯ್ಯನವರ ನಡುವಿನ ರಾಜಕೀಯೇತರ ಸಂಬಂಧವನ್ನು ನೆನೆದರು.

ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ವೈದ್ಯರು ಎರಡು ದಿನ ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ನಾನು ಹೋದಾಗ ಅವರಿಗೆ ತುಂಬಾ ಖುಷಿಯಾಯ್ತು.  ರಾಜಕಾರಣವೇ ಬೇರೆ, ಸ್ನೇಹವೇ ಬೇರೆ ಎಂದು ಬಿಎಸ್​ವೈ ಹೇಳಿದರು.

ಬಳಿಕ ಮಾತನಾಡಿದ ಸಚಿವ ಕೆ.ಎಸ್​​.ಈಶ್ವರಪ್ಪ, ಸಿದ್ದರಾಮಯ್ಯ ಇವತ್ತೇ ಡಿಸ್ಚಾರ್ಜ್ ಆಗಬೇಕಿತ್ತು. ಆದರೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ರಾಜಕಾರಣ ಬೇರೆ, ಸಂಬಂಧಗಳು ಬೇರೆ. ನನ್ನ ತಲೆ ಕಡಿದರೂ ನಾನು ನನ್ನ ಪಕ್ಷ ಬಿಡಲ್ಲ. ಸಿದ್ದರಾಮಯ್ಯ ಕೂಡ ಅವರ ಪಕ್ಷ ಬಿಡಲ್ಲ ಎಂದರು.

Siddaramaiah Health: ರಾಜಕೀಯ ಮರೆತು ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಸಿಎಂ ಬಿ.ಎಸ್​​ ಯಡಿಯೂರಪ್ಪ

ರಾಜಕೀಯ ಹೊರತುಪಡಿಸಿ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಉತ್ತಮ ಸಂಬಂಧ ಇದೆ. ಅಧಿವೇಶನದ ವೇಳೆ ಸದನದಲ್ಲಿ ಕಿತ್ತಾಡುತ್ತಿದ್ದೆವು. ಬಳಿಕ ಒಟ್ಟಿಗೆ ಕುಳಿತು ಟೀ ಕುಡಿಯುತ್ತಿದ್ದೆವು. ಮಾಜಿ ಸಿಎಂ ಕುಮಾರಸ್ವಾಮಿ ಜೊತೆಯೂ ಒಳ್ಳೆ ಸಂಬಂಧ ಇದೆ.  ದೇವೇಗೌಡರು ದೊಡ್ಡವರು ಅಲ್ಲಿಯವರೆಗೂ ನಾನು ಹೋಗಿಲ್ಲ ಎಂದು ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ಆದರೆ ಮತ್ತೆ ಇನ್ಫೆಕ್ಷನ್ ಆಗಬಾರದು ಅನ್ನೋ ಕಾರಣಕ್ಕೆ ಇನ್ನೂ ಒಂದೆರಡು ದಿನ ಆಸ್ಪತ್ರೆಯಲ್ಲಿ ಇರ್ತಾರೆ. ಸಿದ್ದರಾಮಯ್ಯ ಆಸ್ಪತ್ರೆಯಲ್ಲಿ ಇರೋರಲ್ಲಾ, ಡಾಕ್ಟರ್ ಹೇಳಿದ್ದಾರೆ ಅನ್ನೋ ಕಾರಣಕ್ಕೆ ಇದ್ದಾರಷ್ಟೇ ಎಂದು ಹೇಳಿದರು.

ನನ್ನ ಪಕ್ಷದ ಬಗ್ಗೆ ಅವರೇನಾದರೂ ಹೇಳಿದರೆ ನಾನು ಸುಮ್ಮನಿರಲ್ಲ. ಅವರ ಪಕ್ಷದ ಬಗ್ಗೆ ನಾನೇನಾದರೂ ಹೇಳಿದರೂ ಅವರು ಸುಮ್ಮನಿರಲ್ಲ. ಆದರೆ ನಮ್ಮಿಬ್ಬರ ನಡುವೆ  ಮಾನವೀಯ ಸಂಬಂಧಗಳಿವೆ. ನಾವು ಕಿತ್ತಾಡೋದನ್ನ ನೋಡಿದರೆ ಈ ಜನ್ಮದಲ್ಲಿ ಇವರು ಮುಖ ನೋಡಲ್ಲ ಅನ್ಕೊಳ್ಳೋರು. ಆದರೆ ಅವರು ಸಿಎಂ ಆಗಿದ್ದಾಗ ಊಟಕ್ಕೆ ಅವರ ಪಕ್ಕದಲ್ಲೇ ಆಸನ ಹಾಕಿಸಿ ಕಾಯುತ್ತಿದ್ದರು ಎಂದು ಹಳೆಯ ದಿನಗಳನ್ನು ಸ್ಮರಿಸಿದರು.

ಮಹಾರಾಷ್ಟ್ರ ಸರ್ಕಾರದ ಖಾತೆ ಹಂಚಿಕೆ: ಮೈತ್ರಿಪಕ್ಷಗಳಿಗೆ ಸಮ ಪ್ರಾಶಸ್ತ್ಯ; ಶಿವಸೇನಾಗೆ ಗೃಹ; ಎನ್​ಸಿಪಿಗೆ ಹಣಕಾಸು; ಕಾಂಗ್ರೆಸ್​ಗೆ ಪಿಡಬ್ಲ್ಯೂಡಿ, ಕಂದಾಯ

ಒಮ್ಮೆ ಸದನದಲ್ಲಿ ಮಾತಿನ ಚಕಮಕಿ ಆಗಿತ್ತು. ಸಭಾಪತಿ ಶಂಕರಮೂರ್ತಿ ಅವರ ಕೊಠಡಿಯಲ್ಲಿ ಕುಳಿತಿದ್ದೆ. ಸಿದ್ದರಾಮಯ್ಯ ಸಿಎಂ ಆಗಿದ್ದರು.‌ ಅವರು ಅಲ್ಲಿಗೆ ಬಂದರು, ನಾನು ಹೊರಡಲು ರೆಡಿಯಾದೆ. ಈಶ್ಚರಪ್ಪ ಕುಳಿತುಕೊಳ್ಳಿ ಎಲ್ಲಿಗೆ ಹೋಗ್ತಿದ್ದೀರಿ ಅಂತಾ ಹೇಳ್ತಾನೆ ಕುಳಿತು ಟೀ ಕುಡಿದೆವು ಎಂದು ನಕ್ಕರು.

ನಾನು ಡಿಸಿಎಂ ಇರಬೇಕಾದರೆ ಅವರ ಒಂದಿಷ್ಟು ನೋಟುಗಳು ನನ್ನ ಬಳಿ ಬರೋದು. ಅವರನ್ನು ನೋಡಿ ಸಹಿ ಮಾಡಲಾ ಅಂದ್ರೆ ತಲೆ ಅಲ್ಲಾಡಿಸುತ್ತಿದ್ದರು.‌ ನಾನು ಸಹಿ ಮಾಡ್ತಿದ್ದೆ. ಅವರು ಸಿಎಂ ಆದಾಗ ನನ್ನ ನೋಟ್ ಗಳು ಹೋದಾಗ ಸಹಿ ಮಾಡಿ ಅಂತಿದ್ದೆ. ಆಗಲೂ ತಲೆ ಅಲ್ಲಾಡಿಸಿ ಸಹಿ ಮಾಡ್ತಾ ಇದ್ದರು. ಇದೆಲ್ಲವೂ ರಾಜಕಾರಣ ಹೊರತುಪಡಿಸಿ ಇರುವ ಸಂಬಂಧಗಳು ಎಂದು ನೆನೆದರು.
Published by:Latha CG
First published: