ರಾಜ್ಯದ ನೆರೆ ಪ್ರವಾಹ ಪರಿಹಾರಕ್ಕೆ ಪ್ರಧಾನಿಗೆ ಮನವಿ ಸಲ್ಲಿಸಿದ ಸಿಎಂ ಬಿಎಸ್​ ಯಡಿಯೂರಪ್ಪ

ರಾಜ್ಯದ ಪ್ರವಾಹ ಕುರಿತು ಪ್ರಧಾನಿ ಮೋದಿ ಮಾಹಿತಿ ಪಡೆದಿದ್ದಾರೆ. ಪರಿಸ್ಥಿತಿ ಅವಲೋಕಿಸಲು ಶೀಘ್ರದಲ್ಲಿಯೇ ಕೇಂದ್ರದಿಂದ ತಂಡ ಕಳುಹಿಸುವ ಬಗ್ಗೆ  ಭರವಸೆ ನೀಡಿದ್ದಾರೆ- ಬಿಎಸ್​ ಯಡಿಯೂರಪ್ಪ

Seema.R | news18-kannada
Updated:August 16, 2019, 1:16 PM IST
ರಾಜ್ಯದ ನೆರೆ ಪ್ರವಾಹ ಪರಿಹಾರಕ್ಕೆ ಪ್ರಧಾನಿಗೆ ಮನವಿ ಸಲ್ಲಿಸಿದ ಸಿಎಂ ಬಿಎಸ್​ ಯಡಿಯೂರಪ್ಪ
ಪ್ರಧಾನಿ ಮೋದಿ ಭೇಟಿ ಮಾಡಿದ ಬಿಎಸ್​ವೈ
  • Share this:
ಬೆಂಗಳೂರು (ಆ.16): ರಾಜ್ಯದಲ್ಲಿ ಉಂಟಾಗಿರುವ ಭೀಕರ ನೆರೆ ಪ್ರವಾಹದಿಂದಾಗಿರುವ ನಷ್ಟ ಕುರಿತು ಅಧ್ಯಯನ ನಡೆಸಿ, ಪರಿಹಾರ ನೀಡುವಂತೆ ಪ್ರಧಾನಿ ಮೋದಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಭೇಟಿ ಬಳಿಕ ಮಾತನಾಡಿದ ಅವರು, ರಾಜ್ಯದ ಪ್ರವಾಹ ಕುರಿತು ಪ್ರಧಾನಿ ಮೋದಿ ಮಾಹಿತಿ ಪಡೆದಿದ್ದಾರೆ. ಪರಿಸ್ಥಿತಿ ಅವಲೋಕಿಸಲು ಶೀಘ್ರದಲ್ಲಿಯೇ ಕೇಂದ್ರದಿಂದ ತಂಡ ಕಳುಹಿಸುವ ಬಗ್ಗೆ  ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

modi bsy
ಪ್ರಧಾನಿ ಮೋದಿ ಭೇಟಿ ಮಾಡಿದ ಬಿಎಸ್​ವೈ ನಿಯೋಗ


ಪ್ರವಾಹ ಕುರಿತು 40 ನಿಮಿಷಗಳ ಚರ್ಚೆ ನಡೆಸಲಾಗಿದೆ. ಯಾವುದೇ ಅಂಕಿ-ಅಂಶದ ಕುರಿತು ಚರ್ಚೆ ಮಾಡಿಲ್ಲ. ಸುಮಾರು 40 ಸಾವಿರ ಕೋಟಿ ನಷ್ಟವಾಗಿರಬಹುದು. ಕೇಂದ್ರದಿಂದ ಪರಿಹಾರ ನೀಡುವ ಭರವಸೆ ಇದೆ. ರಾಜ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡಲಾಗಿದೆ ಎಂದರು.

ಇದನ್ನು ಓದಿ: ಬಿಜೆಪಿ ಹೈ ಕಮಾಂಡ್​ ಅಂಗಳ ತಲುಪಿದ ಫೋನ್​ ಟ್ಯಾಪಿಂಗ್​; ಎಚ್​ಡಿಕೆ ವಿರುದ್ಧ ಸಿಬಿಐ ತನಿಖೆ?

ಭರವಸೆ ಸಿಗುವುದು ಅನುಮಾನ?

ಇನ್ನು ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಮಹಾರಾಷ್ಟ್ರದಿಂದ ನೀರು ಬಿಟ್ಟಿದ್ದು ಕಾರಣವಾಗಿದೆ. ಯಾವುದೇ ಮುನ್ಸೂಚನೆ ನೀಡದೇ ನರೆಯ ರಾಜ್ಯ ನೀರು ಬಿಟ್ಟ ಪರಿಣಾಮ ಈ ಮಟ್ಟಿನ ಹಾನಿ ಸಂಭವಿಸಿದೆ. ಪ್ರವಾಹದಿಂದ 40 ಸಾವಿರ ಕೋಟಿ ನಷ್ಟವಾಗಿದ್ದು, ಕೇಂದ್ರದ ಬಳಿ ಸಿಎಂ 10000 ಕೋಟಿ ಪರಿಹಾರ  ಕೇಳಿದ್ದು, 2000 ಕೋಟಿಯನ್ನು ಸದ್ಯಕ್ಕೆ ಬಿಡುಗಡೆ ಮಾಡುವಂತೆ ಸಿಎಂ ಮನವಿ ಮಾಡಿದ್ದಾರೆ. ಆದರೆ, ಈ ಪರಿಹಾರ ಸಿಗುವುದು ಅನುಮಾನವಾಗಿದೆ. ಕಾರಣ, ಪ್ರವಾಹದ ಕುರಿತು ಯಾವುದೇ ಭರವಸೆಯನ್ನು ನೀಡಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
Loading...

(ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ)

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...