HOME » NEWS » State » CM BS YEDIYURAPPA SAYS WILL DISCUSS HIGH COMMAND WITH VEERASHAIVA LINGAYAT COMMUNITY UNDER OBC SESR

ದೆಹಲಿ ಭೇಟಿ ಬಳಿಕ ಲಿಂಗಾಯತ-ವೀರಶೈವ ಸಮುದಾಯಕ್ಕೆ ಒಬಿಸಿ ಮೀಸಲು ಕುರಿತು ನಿರ್ಧಾರ; ಸಿಎಂ ಬಿಎಸ್​ ಯಡಿಯೂರಪ್ಪ

ಇದೇ ವೇಳೆ ಸಂಪುಟ ವಿಸ್ತರಣೆ ಕುರಿತು ಮಾತನಾಡಿರುವ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಅಮಿತ್​ ಶಾ ಅವರೊಂದಿಗೆ ಚರ್ಚಿಸಲಾಗಿದೆ. ಇನ್ನೆರಡು ದಿನದಲ್ಲಿ ಅಂತಿಮ ಪಟ್ಟಿ ಸಿದ್ದಗೊಳ್ಳಲಿದೆ.

news18-kannada
Updated:November 27, 2020, 5:46 PM IST
ದೆಹಲಿ ಭೇಟಿ ಬಳಿಕ ಲಿಂಗಾಯತ-ವೀರಶೈವ ಸಮುದಾಯಕ್ಕೆ ಒಬಿಸಿ ಮೀಸಲು ಕುರಿತು ನಿರ್ಧಾರ; ಸಿಎಂ ಬಿಎಸ್​ ಯಡಿಯೂರಪ್ಪ
ಸಿಎಂ ಬಿಎಸ್​ ಯಡಿಯೂರಪ್ಪ.
  • Share this:
ಬೆಂಗಳೂರು (ನ.27): ವೀರಶೈವ-ಲಿಂಗಾಯತ ನಿಗಮ ಸ್ಥಾಪನೆ ಬೆನ್ನಲ್ಲೇ ಈಗ ಸಮುದಾಯಕ್ಕೆ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಮುಂದಾಗಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಇನ್ನು ಮೂರು ದಿನದಲ್ಲಿ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಈ ಕುರಿತು ಬಿಜೆಪಿ ಹೈ ಕಮಾಂಡ್​ ಜೊತೆ ಮಾತನಾಡಲಾಗುವುದು ಎಂದಿದ್ದಾರೆ. ಸಮುದಾಯವನ್ನು ಒಬಿಸಿಗೆ ಸೇರಿಸುವುದು ಪ್ರಮುಖವಾದ ವಿಷಯಗಳಲ್ಲಿ ಒಂದಾಗಿದ್ದು, ಇದನ್ನು ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಬೇಕಿದೆ. ಇನ್ನು ಮೂರು ದಿನದೊಳಗೆ ದೆಹಲಿ ನಾಯಕರೊಂದಿಗೆ ಸಭೆ ನಡೆಸುವ ಚಿಂತನೆ ಇದೆ. ಇದಾದ ಬಳಿಕ ಈ ಕುರಿತು ನಿರ್ಧರಿಸಬಹುದು ಎಂದರು.

ವೀರಶೈವ-ಲಿಂಗಾಯತ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ನೀಡುವ ಕುರಿತು ಸಚಿವ ಸಂಪುಟ ಸದಸ್ಯರಲ್ಲಿಯೂ ಒಮ್ಮತಇದೆ. ವೀರಶೈವ-ಲಿಂಗಾಯತರನ್ನು ಒಬಿಸಿ ವರ್ಗಕ್ಕೆ ಸೇರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಕುರಿತು ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತು ಮೊದಲು ಅಟಾರ್ನಿ ಜನರಲ್​ ಪರಿಶೀಲಿಸಬೇಕು. ಇದಾದ ಬಳಿಕ ಅವರು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ. ಬಳಿಕ ಕೇಂದ್ರ ಸರ್ಕಾರದಿಂದ ಸಲಹೆ ಪಡೆಯಬಹುದು ಎಂದರು.

ಇದೇ ವೇಳೆ ಸಂಪುಟ ವಿಸ್ತರಣೆ ಕುರಿತು ಮಾತನಾಡಿರುವ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಅಮಿತ್​ ಶಾ ಅವರೊಂದಿಗೆ ಚರ್ಚಿಸಲಾಗಿದೆ. ಇನ್ನೆರಡು ದಿನದಲ್ಲಿ ಅಂತಿಮ ಪಟ್ಟಿ ಸಿದ್ದಗೊಳ್ಳಲಿದ್ದು, ಬಳಿಕ ಈ ಬಗ್ಗೆ ತಿಳಿಸಲಾಗುವುದು ಎಂದರು.

ಇದನ್ನು ಓದಿ: ತೇಜಸ್ವಿ ಸೂರ್ಯ ಅವರ ಉದ್ಯೋಗ ಮಿತ್ರ ಅಭಿಯಾನ: ಕೆಲಸ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ

ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಕೂಡಲ ಸಂಗಮ ಜಗದ್ಗುರುಗಳು ಕಳೆದ ಅ.28ರಂದು ಬೆಳಗಾವಿಯ ಸುವರ್ಣಸೌಧದ ಎದುರು ಒಂದು ದಿನದ ಸಾಕೇಂತಿಕ ಉಪವಾಸ ಸತ್ಯಗ್ರಾಹ ನಡೆಸಿದ್ದರು. ಈ ವೇಳೆ ತಮ್ಮ ಮನವಿಗೆ ನ.28ರೊಳಗೆ ಸ್ಪಂದಿಸಬೇಕು ಎಂದು ಗಡವು ನೀಡಿದ್ದರು.

ಇನ್ನು ಸರ್ಕಾರದ ಈ ನಿರ್ಧಾರ ಕುರಿತು ಪ್ರತಿಕ್ರಿಯಿಸಿರುವ ಕಾನೂನು ಸಚಿವ ಮಾಧುಸ್ವಾಮಿ, ಹಲವರು ವರ್ಷಗಳ ಹಿಂದೆ ಅತಿ ಹೆಚ್ಚಿನ ಜನರು ಲಿಂಗಾಯತ ಸಮುದಾಯಕ್ಕೆ ಪರಿವರ್ತನೆಗೊಂಡರು. ಇದೊಂದು ದೊಡ್ಡ ಸಮುದಾಯವಾಗಿದ್ದು, ಇದರಲ್ಲಿ ಎಲ್ಲರೂ ಸ್ಥಿತಿವಂತರಲ್ಲ. ಇತರೆ ಸಮುದಾಯದಲ್ಲಿದ್ದಂತೆ ಇದರಲ್ಲಿಯೂ ಅನೇಕ ಹಿಂದುಳಿದವರಿದ್ದಾರೆ. ರಾಷ್ಟ್ರೀಯವಾಗಿ 16 ಉಪಸಮುದಾಯಗಳನ್ನು ಗುರುತಿಸಲಾಗಿದ್ದು, ನಮ್ಮನ್ನು ಅದರಲ್ಲಿ ಒಂದರಂತೆ ಪರಿಗಣಿಸುವಂತೆ ಕೇಳುತ್ತಿದ್ದೇವೆ. ಇದರಲ್ಲಿ ತಪ್ಪೆನು ಎಂದರು.

ಇನ್ನು ಇತ್ತೀಚೆಗಷ್ಟೆ ಲಿಂಗಾಯತ-ವೀರಶೈವ ನಿಗಮ ಸ್ಥಾಪಿಸಿರುವ ಸರ್ಕಾರ ಬಿಎಸ್​ ಪರಮಶಿವಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
Published by: Seema R
First published: November 27, 2020, 5:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories