ಸಂಪುಟ ವಿಸ್ತರಣೆ: ಹೈ ಕಮಾಂಡ್​ ಸೂಚನೆಗೆ ಕಾಯುತ್ತಿದ್ದೇನೆ; ಸಿಎಂ ಯಡಿಯೂರಪ್ಪ

 ಅಧಿವೇಶನಕ್ಕೆ ಮುನ್ನ ವಿಸ್ತರಣೆ ಆಗಬೇಕು ಎಂಬುದು ನನ್ನ ಆಪೇಕ್ಷೆ ಆದರೆ ಇರುವ ಆರು ಸ್ಥಾನಗಳ ವಿಸ್ತರಣೆ ನಡೆಯುತ್ತದೆಯೋ ಅಥವಾ ಪುನರ್​ ರಚನೆ ನಡೆಯುತ್ತದೋ ಗೊತ್ತಿಲ್ಲ. ಎಷ್ಟು ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ. ಹೈ ಕಮಾಂಡ್​ ತಿಳಿಸಿದ ಬಳಿಕ ಇದಕ್ಕೆಲ್ಲಾ ಸ್ಪಷ್ಟನೆ ಸಿಗಲಿದೆ

news18-kannada
Updated:September 19, 2020, 5:17 PM IST
ಸಂಪುಟ ವಿಸ್ತರಣೆ: ಹೈ ಕಮಾಂಡ್​ ಸೂಚನೆಗೆ ಕಾಯುತ್ತಿದ್ದೇನೆ;  ಸಿಎಂ ಯಡಿಯೂರಪ್ಪ
ಸಿಎಂ ಬಿಎಸ್​ ಯಡಿಯೂರಪ್ಪ-ಪ್ರಧಾನಿ ಮೋದಿ
  • Share this:
ಬೆಂಗಳೂರು (ಸೆ.19): ಸಂಪುಟ ವಿಸ್ತರಣೆ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಚರ್ಚೆ ನಡೆಸಿದ್ದೇನೆ. ಈ ಕುರಿತು ಹೈ ಕಮಾಂಡ್​ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಹೈಕಮಾಂಡ್​ ಸೂಚನೆಗಾಗಿ ಕಾಯುತ್ತಿದ್ದು, ಅವರಿಂದ ಸಂದೇಶ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪ್ರವಾಸ ಮುಗಿಸಿ ರಾಜಧಾನಿಗೆ ಮರಳಿರುವ ಸಿಎಂ ಬಿಎಸ್​ ಯಡಿಯೂರಪ್ಪ ತಿಳಿಸಿದರು. ನಗರದಲ್ಲಿ ಮಾತನಾಡಿದ ಅವರು ಸಂಪುಟ ವಿಸ್ತರಣೆಯೋ ಅಥವಾ ಪುನರಾಚನೆಯೋ ಎಂಬ ಬಗ್ಗೆ ಅವರಿಷ್ಠರಿ ತೀರ್ಮಾನ ಕೈಗೊಳ್ಳುತ್ತಾರೆ. ಈ ಬಗ್ಗೆ ಇನ್ನು ಸೂಚನೆ ಬಂದಿಲ್ಲ ಎಂದು ತಿಳಿಸಿದರು. ಆದರೆ, ಈ ಬಾರಿಯ ದೆಹಲಿ ಪ್ರವಾಸ ಯಶಸ್ವಿಯಾಗಿದೆ.  ರಾಜ್ಯದ ಅಭಿವೃದ್ಧಿ ಕುರಿತು ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಅವಗಳನ್ನು ಪೂರೈಸುವ ಕುರಿತು ಅವರಿಂದ ಸಕರಾತ್ಮಕ ಭರವಸೆ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ಇದೇ ವೇಳೆ ಮುಂದುವರೆದು ಮಾತನಾಡಿದ ಅವರು, ಅಧಿವೇಶನಕ್ಕೆ ಮುನ್ನ ವಿಸ್ತರಣೆ ಆಗಬೇಕು ಎಂಬುದು ನನ್ನ ಆಪೇಕ್ಷೆ ಆದರೆ ಇರುವ ಆರು ಸ್ಥಾನಗಳ ವಿಸ್ತರಣೆ ನಡೆಯುತ್ತದೆಯೋ ಅಥವಾ ಪುನರ್​ ರಚನೆ ನಡೆಯುತ್ತದೋ ಗೊತ್ತಿಲ್ಲ. ಎಷ್ಟು ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ. ಹೈ ಕಮಾಂಡ್​ ತಿಳಿಸಿದ ಬಳಿಕ ಇದಕ್ಕೆಲ್ಲಾ ಸ್ಪಷ್ಟನೆ ಸಿಗಲಿದೆ ಎಂದರು.

ರಾಜ್ಯದ ಅಭಿವೃದ್ದಿ, ಅನುದಾನ, ಪರಿಹಾರ ಹಂಚಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚೆ ನಡೆಸಿದ್ದೇನೆ. ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಅವರಿಗೆ ತಿಳಿಸುವ ಪ್ರಯತ್ನ ಮಾಡಾಗಿದೆ. ಹಣಕಾಸು, ಜಲಸಂಪನ್ಮೂಲ ಹಾಗೂ ಇತರೆ ಸಚಿವರನ್ನು ಭೇಟಿಯಾಗಿದ್ದು, ಚರ್ಚೆ ನಡೆಸಲಾಗಿದೆ. ರಾಜ್ಯದ ವಿವಿಧ ಯೋಜನಗೆಳ ಕುರಿತು ಅನುಮೋದನೆ ಹಾಗೂ ಮಂಜೂರಾತಿಗೆ ಮನವಿ ಸಲ್ಲಿಸಿದ್ದೇನೆ. ಎಲ್ಲರೂ ಕೂಡಾ ರಾಜ್ಯದ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಉತ್ತಮವಾಗಿ ಸ್ಪಂದಿಸಿದ್ದು, ಅಗತ್ಯ ನೆರವು ನೀಡುವ ಕುರಿತು ಭರವಸೆ ಸಿಕ್ಕಿದೆ ಎಂದರು.

ನೆರೆ ಪರಿಹಾರ ಹಂಚಿಕೆ, ಅನುದಾನ ಸೇರಿದಂತೆ ಖಾಲಿ ಇರುವ ಆರು ಸಚಿವ ಸ್ಥಾನಗಳ ವಿಸ್ತರಣೆ ಪ್ರಸ್ತಾವ ಕುರಿತು ಸಿಎಂ ಬಿಎಸ್​ ಯಡಿಯೂರಪ್ಪ ಕಳೆದ ಮೂರು ದಿನಗಳ ಹಿಂದೆ ದೆಹಲಿ ಪ್ರಯಾಣ ನಡೆಸಿದ್ದರು.
Published by: Seema R
First published: September 19, 2020, 5:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading