ಸರ್ಕಾರ ನಿಮ್ಮ ಜೊತೆಗಿದೆ, ನಾಳೆ ರಾಜ್ಯದಲ್ಲಿ ಪ್ರತಿಭಟನೆ ನಡೆಯಲ್ಲ; ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಇನ್ನೂ 2 ದಿನ ನಿಷೇಧಾಜ್ಞೆ ಮುಂದುವರೆಯುತ್ತದೆ. ಮಂಗಳೂರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಉನ್ನತ ಅಧಿಕಾರಿಯನ್ನು ಅಲ್ಲಿಗೆ ಕಳುಹಿಸಿಕೊಡುತ್ತಿದ್ದೇನೆ.  ಅವರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತಾರೆ. ಪ್ರತಿಭಟನೆಗೆ ಕಿವಿ ಕೊಡದೇ, ಶಾಂತಿ ಕಾಪಾಡಿ. ರಾಜ್ಯದ ಜನರು ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.

ಸಿಎಂ  ಬಿ.ಎಸ್. ಯಡಿಯೂರಪ್ಪ

ಸಿಎಂ ಬಿ.ಎಸ್. ಯಡಿಯೂರಪ್ಪ

  • Share this:
ಬೆಂಗಳೂರು(ಡಿ.19): ರಾಷ್ಟ್ರೀಯ ಪೌರತ್ವ ಮಸೂದೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಜನರು ಉದ್ವೇಗಕ್ಕೆ ಒಳಗಾಗಬೇಡಿ. ಎಲ್ಲರೂ ಶಾಂತಿ ಕಾಪಾಡಬೇಕು.  ಸರ್ಕಾರ ನಿಮ್ಮ ಜೊತೆಗೆ ಇದೆ. ನಾಳೆ ರಾಜ್ಯದಲ್ಲಿ ಪ್ರತಿಭಟನೆ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಿದ್ದೇವೆ. ಮುಸ್ಲಿಂ ಮುಖಂಡರು ಸಹಕಾರ ಕೊಟ್ಟಿದ್ದಾರೆ. ಹಿಂದೂ-ಮುಸ್ಲಿಮರು ಅಣ್ಣ-ತಮ್ಮಂದಿರಂತೆ ಇದ್ದೇವೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ಬಗ್ಗೆ ಎದ್ದಿರುವ ಸಂದೇಹ, ಭಯ ನಿವಾರಿಸಿದ ಸರ್ಕಾರ

ರಾಜ್ಯದಲ್ಲಿ ಇನ್ನೂ 2 ದಿನ ನಿಷೇಧಾಜ್ಞೆ ಮುಂದುವರೆಯುತ್ತದೆ. ಮಂಗಳೂರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಉನ್ನತ ಅಧಿಕಾರಿಯನ್ನು ಅಲ್ಲಿಗೆ ಕಳುಹಿಸಿಕೊಡುತ್ತಿದ್ದೇನೆ.  ಅವರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತಾರೆ. ಪ್ರತಿಭಟನೆಗೆ ಕಿವಿ ಕೊಡದೇ, ಶಾಂತಿ ಕಾಪಾಡಿ. ರಾಜ್ಯದ ಜನರು ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.

ಮಂಗಳೂರಿನಲ್ಲಿ ನಡೆದಂತಹ  ಘಟನೆಗಳು ಮರುಕಳಿಸದಂತೆ ಪೋಲೀಸರಿಗೆ ಸೂಚಿಸಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ನಿರ್ದೇಶನ ಕೊಟ್ಟಿದ್ದೇನೆ.‌ ಇನ್ನು ರಾಜ್ಯದಲ್ಲಿ ಯಾವುದೇ ಪ್ರತಿಭಟನೆ ನಡೆಯಲ್ಲ ಎಂಬ ಭರವಸೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಇನ್ನೆರಡು ದಿನ ನಿಷೇಧಾಜ್ಞೆ ಮುಂದುವರೆಯಲಿದೆ ಎಂದರು.

ಮೊದಲು ದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು ಯಾರು ? ರಾಜ್ಯದಲ್ಲಿ ಹೇಡಿ, ಪುಕ್ಕಲು ಸರ್ಕಾರ ಇಲ್ಲ; ಸಿದ್ದರಾಮಯ್ಯಗೆ ಸಚಿವ ಸಿ.ಟಿ. ರವಿ ತಿರುಗೇಟು

Published by:Latha CG
First published: