ಉತ್ತರ ಕರ್ನಾಟಕ ಪ್ರವಾಹ: ರಾಜ್ಯಕ್ಕೆ ನೆರವು ನೀಡುವುದಾಗಿ ಪಿಎಂ ಮೋದಿ ಭರವಸೆ; ಸಿಎಂ ಬಿಎಸ್ ಯಡಿಯೂರಪ್ಪ

ಚಾಮುಂಡಿಬೆಟ್ಟಕ್ಕೆ ತುರ್ತಾಗಿ 7.5 ಕೋಟಿ ಹಣ ಬಿಡುಗಡೆ ಮಾಡಲಾಗುತ್ತದೆ.  ದೇವಿಕೆರೆ ಹಾಗೂ ಮೆಟ್ಟಿಲುಗಳ‌ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ಶೀಘ್ರವೇ ಹಣ ‌ಮಂಜೂರಾತಿ ಮಾಡಿ ದೇವಾಲಯದ ಅಭಿವೃದ್ಧಿ ಮಾಡುವ ಭರವಸೆಯನ್ನು ಸಿಎಂ ಬಿಎಸ್​ವೈ ನೀಡಿದರು.

news18-kannada
Updated:October 17, 2020, 10:28 AM IST
ಉತ್ತರ ಕರ್ನಾಟಕ ಪ್ರವಾಹ: ರಾಜ್ಯಕ್ಕೆ ನೆರವು ನೀಡುವುದಾಗಿ ಪಿಎಂ ಮೋದಿ ಭರವಸೆ; ಸಿಎಂ ಬಿಎಸ್ ಯಡಿಯೂರಪ್ಪ
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ಮೈಸೂರು(ಅ.17): ನಾಡಹಬ್ಬ ದಸರೆಗೆ ಇಂದು ವಿದ್ಯುಕ್ತ ಚಾಲನೆ ದೊರೆತಿದೆ. ಕೊರೋನಾ ವಾರಿಯರ್ ಡಾ.ಸಿ.ಎನ್.ಮಂಜುನಾಥ್ ಮೈಸೂರು ದಸರಾ ಉದ್ಘಾಟಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರು ಸಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬಿ.ಎಸ್​.ಯಡಿಯೂರಪ್ಪ,  ಸಂಕಷ್ಟದಲ್ಲಿ ಈ ನಾಡಹಬ್ಬ ಆಚರಿಸುತ್ತಿದ್ದೇವೆ. ಚಾಮುಂಡಿಯಲ್ಲಿ ನಾವು ಕೊರೋನಾ ನಿವಾರಣೆಗಾಗಿ ಪ್ರಾರ್ಥಿಸಿದ್ದೇವೆ. ಈ‌ ಸಂದರ್ಭದಲ್ಲಿ ಹಬ್ಬ ಆಚರಿಸಿ ಜನರಿಗೆ ಸಮಸ್ಯೆ ಆಗದಂತೆ ಸರಳ ದಸರಾ ಮಾಡುತ್ತಿದ್ದೇವೆ. ಕೊರೋನಾ ಕಾರಣಕ್ಕಾಗಿಯೇ ಕೊರೋನಾ ವಾರಿಯರ್ಸ್‌ರಿಂದ ದಸರಾ ಉದ್ಘಾಟನೆ ಮಾಡಿದ್ದೇವೆ. ಸನ್ಮಾನಿತ ಕೊರೋನಾ ವಾರಿಯರ್ಸ್‌ಗೆ ಅಭಿನಂದನೆಗಳು. ಲಸಿಕೆ‌ ಸಿಗುವವರೆಗೂ ಜನರೆಲ್ಲ‌ ಮಾಸ್ಕ್ ಧರಿಸಿ ಸಾಮಾಜಿಕ ಅಂತ ಕಾಯ್ದುಕೊಳ್ಳಿ ಎಂದು ಹೇಳಿದರು.

ತೃಣಮೂಲ ಕಾಂಗ್ರೆಸ್​ನಲ್ಲಿ ಆಂತರಿಕ ಬಿಕ್ಕಟ್ಟು; ಚುನಾವಣೆಗೂ ಮುನ್ನವೇ ಇಕ್ಕಟ್ಟಿಗೆ ಸಿಲುಕಿದ ಮಮತಾ ಬ್ಯಾನರ್ಜಿ

ಉತ್ತರ ಕರ್ನಾಟಕದಲ್ಲಿ ನೆರೆ ಪರಿಸ್ಥಿತಿ ಇದೆ. ಈ ಬಗ್ಗೆ ಪ್ರಧಾನಿ ಮೋದಿಯವರು ನನಗೆ ದೂರವಾಣಿ ಕರೆ ಮಾಡಿದ್ದರು. ಕರ್ನಾಟಕಕ್ಕೆ ಬೇಕಾದ ನೆರವು ನೀಡುತ್ತೇವೆ ಎಂದು ಹೇಳಿದ್ದಾರೆ. ದಸರಾ ಸಂದರ್ಭದಲ್ಲಿ‌ ಮೋದಿಯವರ ಈ ಮಾತು ಸಮಾಧಾನ ತಂದಿದೆ.
ಪ್ರವಾಹ ಪರಿಸ್ಥಿತಿ ನಿಯಂತ್ರಿಸುವಲ್ಲಿ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ.
ಉತ್ತರ ಕರ್ನಾಟಕದ‌ ಜೊತೆ ಸರ್ಕಾರ ಇದೆ ಎಂದು ಭರವಸೆ ನೀಡಿದರು.

ಚಾಮುಂಡಿಬೆಟ್ಟಕ್ಕೆ ತುರ್ತಾಗಿ 7.5 ಕೋಟಿ ಹಣ ಬಿಡುಗಡೆ ಮಾಡಲಾಗುತ್ತದೆ.  ದೇವಿಕೆರೆ ಹಾಗೂ ಮೆಟ್ಟಿಲುಗಳ‌ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ಶೀಘ್ರವೇ ಹಣ ‌ಮಂಜೂರಾತಿ ಮಾಡಿ ದೇವಾಲಯದ ಅಭಿವೃದ್ಧಿ ಮಾಡುವ ಭರವಸೆಯನ್ನು ಸಿಎಂ ಬಿಎಸ್​ವೈ ನೀಡಿದರು.
ಮುಂದುವರೆದ ಅವರು, ಉತ್ತರ ಕರ್ನಾಟಕದ ಜನರ ಜೊತೆ ಸರ್ಕಾರ ಇದೆ. ಕಂದಾಯ ಸಚಿವರು ಈಗಾಗಲೇ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಪ್ರವಾಹದಿಂದಾಗಿ 9,952 ಕೋಟಿ ರೂ. ನಷ್ಟವಾಗಿದೆ. ಎಲ್ಲ ರೀತಿಯ ಪರಿಹಾರಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ.
ಕರ್ನಾಟಕ ಆರ್ಥಿಕವಾಗಿ ಸದೃಢವಾಗಲು ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
Published by: Latha CG
First published: October 17, 2020, 10:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading