HOME » NEWS » State » CM BS YEDIYURAPPA SAYS IN TOMORROW CABINET EXPANSION DONT KNOW HOW MANY WILL GET MINISTRY POST SESR

ನಾಳೆ ಬೆಳಗ್ಗೆ 10.30ಕ್ಕೆ ಪಂಚಾಂಗದ ಪ್ರಕಾರ ಸಂಪುಟ ವಿಸ್ತರಣೆ; ಎಷ್ಟು ಮಂದಿಗೆ ಸಚಿವ ಸ್ಥಾನ ಎಂಬುದು ಸಿಎಂಗೂ ಗೊತ್ತಿಲ್ಲ

ನೂತನ ಶಾಸಕರ ಹೊರತಾಗಿ ಸಿಎಂ ಉಮೇಶ್​ ಕತ್ತಿ, ಅರವಿಂದ ಲಿಂಬಾವಳಿ, ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ಮೂಲ ಬಿಜೆಪಿ ನಾಯಕರಲ್ಲಿ ಅಸಮಾಧಾನ ಮೂಡಿದೆ. ಈ ಹಿನ್ನೆಲೆ ಮೂವರು ಶಾಸಕರ ಹೆಸರನ್ನು ತಡೆ ಹಿಡಿಯಲು ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ. 

news18-kannada
Updated:February 5, 2020, 1:34 PM IST
ನಾಳೆ ಬೆಳಗ್ಗೆ 10.30ಕ್ಕೆ ಪಂಚಾಂಗದ ಪ್ರಕಾರ ಸಂಪುಟ ವಿಸ್ತರಣೆ; ಎಷ್ಟು ಮಂದಿಗೆ ಸಚಿವ ಸ್ಥಾನ ಎಂಬುದು ಸಿಎಂಗೂ ಗೊತ್ತಿಲ್ಲ
ಸಿಎಂ ಬಿ.ಎಸ್​. ಯಡಿಯೂರಪ್ಪ
  • Share this:
ಕಲಬುರಗಿ (ಫೆ.05): ಮೂಲ ಬಿಜೆಪಿಗರ ಅಸಮಾಧಾನ, ಸೋತ ಶಾಸಕರ ಹತಾಶೆ ನಡವೆ ನಾಳೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಆದರೆ, ಎಷ್ಟು ಮಂದಿ ಸಚಿವ ಸ್ಥಾನ ಪಡೆಯುವಲ್ಲಿ ಅರ್ಹರಾಗಲಿದ್ದಾರೆ ಎಂಬುದು ಮಾತ್ರ ಅನಿಶ್ಚಿತವಾಗಿದೆ. 

ಈ ಕುರಿತು ಇಂದು ಮಾತನಾಡಿದ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ನಾಳೆ ಸಚಿವ ಸಂಪುಟ ವಿಸ್ತರಣೆ ನಡೆಯುವುದು ಖಚಿತ.  ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಎಷ್ಟು ಜನ ಸೇರ್ಪಡೆಯಾಗುತ್ತಾರೆ ಎಂಬ ಬಗ್ಗೆ ಹೈ ಕಮಾಂಡ್​ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ಬಗ್ಗೆ ಸಂಜೆ ಹೈ ಕಮಾಂಡ್​ನಿಂದ ಮಾಹಿತಿ ರವಾನೆಯಾಗಲಿದೆ ಎಂದರು.

ಉಪಚುನಾವಣೆ ಬಳಿಕ ಸಂಪುಟ  ವಿಸ್ತರಣೆಗೆ ಕಸರತ್ತು ನಡೆಸಿದ ಸಿಎಂ ಬಿಎಸ್​ ಯಡಿಯೂರಪ್ಪ, ಕಳೆದ ವಾರ ಹೈ ಕಮಾಂಡ್​​ನಿಂದ ಗ್ರೀನ್​ ಸಿಗ್ನಲ್​ ಪಡೆದಿದ್ದರು. ಇದಾದ ಬಳಿಕ ಮಾತನಾಡಿದ ಅವರು, 10:3 ಅನುಪಾತದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದರು. ಈ ಮೂಲಕ  ಕೇವಲ ಗೆದ್ದ ನೂತನ ಬಿಜೆಪಿ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದು, ಇದರ ಜೊತೆಗೆ 3 ಜನ ಮೂಲ ಬಿಜೆಪಿಗರಿಗೂ ಸಚಿವ ಸ್ಥಾನ ನೀಡಲು ಮುಂದಾಗಿರುವುದಾಗಿ ಸಿಎಂ ತಿಳಿಸಿದ್ದರು.

ಇದನ್ನು ಓದಿ: ಸಂಪುಟ ಪುನರ್​ ರಚನೆ ಇಲ್ಲ, ವಿಸ್ತರಣೆ ಮಾತ್ರ; ಸಿಎಂ ಬಿಎಸ್​ವೈ ಭರವಸೆ

ಆದರೆ, ಯಾರು ಆ 13 ಶಾಸಕರು ಎಂಬ ರಹಸ್ಯವನ್ನು ಸಿಎಂ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ನಾಳೆ ಸಂಪುಟ ವಿಸ್ತರಣೆ ನಡೆಯುವ ಹಿನ್ನೆಲೆ ಇಂದು ಹೈ ಕಮಾಂಡ್​ಗೆ 13 ಶಾಸಕರ ಹೆಸರಿನ ಪಟ್ಟಿಯನ್ನು ಅವರು ಕಳುಹಿಸಿದ್ದಾರೆ. ಸಂಜೆ ಈ ಪಟ್ಟಿಗೆ ಹೈ ಕಮಾಂಡ್​ ನಿರ್ದೇಶನ ನೀಡಲಿದೆ ಎನ್ನಲಾಗಿದೆ.

ಹತ್ತಾ ಅಥವಾ ಹದಿಮೂರಾ..? 

ನೂತನ ಶಾಸಕರ ಹೊರತಾಗಿ ಸಿಎಂ ಉಮೇಶ್​ ಕತ್ತಿ, ಅರವಿಂದ ಲಿಂಬಾವಳಿ, ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ಮೂಲ ಬಿಜೆಪಿ ನಾಯಕರಲ್ಲಿ ಅಸಮಾಧಾನ ಮೂಡಿದೆ. ಈ ಹಿನ್ನೆಲೆ ಮೂವರು ಶಾಸಕರ ಹೆಸರನ್ನು ತಡೆ ಹಿಡಿಯಲು ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.ಏನು ಬೇಕಾದರೂ ಆಗಬಹುದು: ಡಿಸಿಎಂ 

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ ಲಕ್ಷಣ್​ ಸವದಿ, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಸಿಎಂ ಬಿಎಸ್​ವೈ ಈಗ 10+3 ಅಂತ ಹೇಳಿದ್ದಾರೆ. ಪಟ್ಟಿ ಕಳಿಸಿದಾಗ ಏನಾದ್ರೂ ಆಗಬಹುದು. ಪಟ್ಟಿಯಲ್ಲಿ ಹೆಸರು ಸೇರಬಹುದು, ತಪ್ಪಬಹುದು ಎಂದಿದ್ದಾರೆ.  ಇದೇ ವೇಳೆ ಸಚಿವ ಸ್ಥಾನಕ್ಕೆ ಶ್ರೀಮಂತ ಪಾಟೀಲ್ ಸೇರ್ಪಡೆಗೆ ವಿರೋಧವಿಲ್ಲ ಎಂದ ಅವರು ಮಹೇಶ್ ಕುಮಟಳ್ಳಿ ಮಂತ್ರಿ ಆದರೆ ನನಗೆ ಖುಷಿ ಎಂದರು.

ಪಂಚಾಂಗದ ಪ್ರಕಾರ ಸಂಪುಟ ವಿಸ್ತರಣೆ

ನಾಳೆ ಬೆಳಗ್ಗೆ ರಾಜಭವನದಲ್ಲಿ ಸಂಪುಟ ವಿಸ್ತರಣೆ ಕಾರ್ಯ ನಡೆಯಲಿದೆ. ಬೆಳಗ್ಗೆ 10.30ಕ್ಕೆ ರಾಜ್ಯಪಾಲರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಹಲವು ಅಡೆತಡೆಗಳ ಬಳಿಕ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾದ ಹಿನ್ನೆಲೆ ಈ ಕಾರ್ಯವನ್ನು ಶಾಸ್ತ್ರ ಪ್ರಕಾರ ನಡೆಸಲು ಸರ್ಕಾರ ಮುಂದಾಗಿದೆ.ಇದಕ್ಕಾಗಿ ಪಂಚಾಂಗದ ಮೊರೆ ಹೋಗಿದ್ದು, ಬೆಳಗ್ಗೆ 10.30ಕ್ಕೆ ಆರಿದ್ರಾ ನಕ್ಷತ್ರದಲ್ಲಿ ನೂತನ ಸಚಿವರು ಪದಗ್ರಹಣ ನಡೆಯಲಿದೆ. ಈ ನಕ್ಷತ್ರದಲ್ಲಿ ಈ ಕಾರ್ಯ ನಡೆದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಮಂಗಳೂರಿನ ಉಲ್ಲಾಳದ ಪ್ರಖ್ಯಾತಿ ಜ್ಯೋತಿಷಿ ಎಂ.ಎಸ್. ತಂತ್ರಿಯವರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆ ಸಿಎಂ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಆರಿದ್ರಾ ನಕ್ಷತ್ರಕ್ಕೆ ಈಶ್ವರ ಅಧಿಪತಿಯಾಗಿದೆ. ಯಡಿಯೂರಪ್ಪ ಅವರು ಕೂಡ ಈಶ್ವರನ ಅನುಯಾಯಿಯಾಗಿದ್ದು, ಈ ಮೂಹರ್ತದಲ್ಲಿ ವಿಸ್ತರಣೆ ಕಾರ್ಯ ಮಾಡಿದರೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.

 
Youtube Video
First published: February 5, 2020, 1:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories