HOME » NEWS » State » CM BS YEDIYURAPPA SAYS FORMATION OF JOINT COMMITTEE TO INVESTIGATE DRINKING WATER COMPONENTS SCAM SESR NMPG

ಕುಡಿಯುವ ನೀರಿನ ಘಟಕಗಳ ಹಗರಣ ತನಿಖೆಗೆ ಜಂಟಿ ಸಮಿತಿ ರಚನೆ; ಸಿಎಂ ಬಿಎಸ್​ ಯಡಿಯೂರಪ್ಪ

ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆಯಲ್ಲಿ ದೊಡ್ಡ ಹಗರಣವಾಗಿದೆ. ಯಾರುಯಾರು ಎಷ್ಟು ಲೂಟಿ ಮಾಡಿ ಅವ್ಯವಹಾರ ಮಾಡಿದ್ದಾರೆ ಅವರ ವಿರುದ್ಧ ಸೂಕ್ತ ತನಿಖೆ ಮಾಡಿಸುತ್ತೇನೆ

news18-kannada
Updated:December 9, 2020, 7:57 PM IST
ಕುಡಿಯುವ ನೀರಿನ ಘಟಕಗಳ ಹಗರಣ ತನಿಖೆಗೆ ಜಂಟಿ ಸಮಿತಿ ರಚನೆ; ಸಿಎಂ ಬಿಎಸ್​ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
  • Share this:
ಯಾದಗಿರಿ (ಡಿ. 9): ರಾಜ್ಯದಲ್ಲಿ ಅಳವಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆಯಲ್ಲಿ ಹಗರಣವಾಗಿದೆ.  ಈ ಬಗ್ಗೆ ತನಿಖೆ ನಡೆಸಲು ಜಂಟಿ ಸದನ ಸಮಿತಿ ರಚನೆ ಮಾಡಲಾಗುವುದು. ಎರಡು ತಿಂಗಳ ಒಳಗಾಗಿ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಿಎಸ್  ಯಡಿಯೂರಪ್ಪ ಇಂದು ವಿಧಾನಸಭಾ ಅಧಿವೇಶನದಲ್ಲಿ ತಿಳಿಸಿದರು. ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದರು ಯಾವುದೇ ಘಟಕಗಳು ಕಾರ್ಯನಿರ್ವಹಿಸದೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಬಗ್ಗೆ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಸದನದ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಿರುವ ಒಟ್ಟು 123 ಘಟಕಗಳ ಪೈಕಿ,94 ಘಟಕಗಳು ಚಾಲ್ತಿಯಲ್ಲಿದ್ದು, ಉಳಿದ 29 ಘಟಕಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತವೆ ಎಂದು ಉತ್ತರಿಸಿದರು.

ಈ ಕುರಿತು ಮರು ಪ್ರಶ್ನೆ ಮಾಡಿದ ಶಾಸಕರು, ನೀರಿನ ಘಟಕಗಳ ಅಳವಡಿಕೆ ಮಾಡಿರುವ  ಕಂಪನಿಗಳ ವಿರುದ್ದ ಸರ್ಕಾರ ಯಾವ ಕ್ರಮಕೈಗೊಂಡಿದೆ ಎಂದರು. ಇದಕ್ಕೆ ಉತ್ತರಿಸಿದ  ಈಶ್ವರಪ್ಪ, ತಾತ್ಕಾಲಿಕವಾಗಿ ಸ್ಥಗಿತಗೊಂಡ 29 ಘಟಕಗಳ ಪೈಕಿ ಅಂತರ್ಗತ ಅಡಿ ಇರುವ 17 ಘಟಕಗಳನ್ನು ಸುಸ್ಥಿತಿಯಲ್ಲಿಡುವಂತೆ ಆಯಾ ಏಜೆನ್ಸಿಗಳಿಗೆ ನೊಟೀಸ್ ಮುಖಾಂತರ ತಿಳಿಸಲಾಗಿದೆ.  ಮ್ಯಾಕ್ಸ್ ಆಕ್ವಾ ಏಜೆನ್ಸಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಏಜೆನ್ಸಿಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುತ್ತಿದ್ದಾರೆ. ಕೆಆರ್​ಐಡಿಎಲ್​​ ವತಿಯಿಂದ ಹಸ್ತಾಂತರಿಸಿಕೊಂಡಿರುವ ಉಳಿದ 12 ಘಟಕಗಳ ನಿರ್ವಹಣೆಯನ್ನು ಟೆಂಡರ್ ಮುಖಾಂತರ ಪ್ರತ್ಯೇಕ ಏಜೆನ್ಸಿಗೆ ವಹಿಸಲಾಗಿದೆ. ಮಾಕ್ಸ್ ಆಕ್ವಾ  ಏಜೆನ್ಸಿ ಅವರು ಘಟಕಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ವಹಿಸಿದ್ದರಿಂದ ಸದರಿಯವರ ಎಫ್​ಎಸ್​ಡಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅದರನ್ವಯ ಟೆಂಡರ್ ರದ್ದತಿ ಪ್ರಕ್ರಿಯೆಯಲ್ಲಿದೆ ಎಂದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಸದನದಲ್ಲಿ ನೀರಿನ ಘಟಕಗಳ ಬಗ್ಗೆ ಚರ್ಚೆ ಮಾಡುತ್ತಿದ್ದಂತೆ ಪಕ್ಷ ಭೇದ ಮರೆತು ಶಾಸಕರಾದ ಸಿದ್ದು ಸವದಿ,ಯು.ಟಿ.ಖಾದರ್, ಬಸನಗೌಡ ಪಾಟೀಲ ಯತ್ನಾಳ, ಅರಗ ಜ್ಞಾನೇಂದ್ರ,ವೆಂಕಟರಾವ್ ನಾಡಗೌಡ, ರವೀಂದ್ರ ಶ್ರೀಕಂಠಯ್ಯ ಅವರು ಶುದ್ದ ಕುಡಿಯುವ ನೀರಿನ ಘಟಕಗಳ ಅವ್ಯವಹಾರ ಹಾಗೂ ಹೆಚ್ಚಿನ ವೆಚ್ಚದಲ್ಲಿ ಘಟಕಗಳು ಅಳವಡಿಸಿದರು. ನೀರಿನ ಘಟಕಗಳು ಬಂದ್ ಆಗಿದ್ದು ಸಂಬಂಧಪಟ್ಟ ಏಜೆನ್ಸಿ ಗಳು ನಿರ್ವಹಣೆ ಮಾಡುತ್ತಿಲ್ಲವೆಂದು ಚರ್ಚೆ ನಡೆಸಿದರು.  ಶುದ್ದ ಕುಡಿಯುವ ನೀರಿನ ಘಟಕಗಳ ಅಳವಡಿಕೆಯಲ್ಲಿ ದೊಡ್ಡ ಹಗರಣ ನಡೆದಿದೆ. ಮೂರದಿಂದ ನಾಲ್ಕು ಪಟ್ಟು ಹೆಚ್ಚಿನ ವೆಚ್ಚದಲ್ಲಿ ಟೆಂಡರ್ ಮಾಡಲಾಗಿದ್ದು, ಕಳಪೆ ಮಟ್ಟದ ಘಟಕಗಳು ಅಳವಡಿಸಲಾಗಿದೆ ಎಂದರು.

ರಾಜ್ಯದಲ್ಲಿ ಬಹಳ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿದ್ದು,ದುರಸ್ಥಿಯಾಗುತ್ತಿಲ್ಲ.ಈಗಾಗಲೇ ನೀರಿನ ಘಟಕಗಳ ಬಗ್ಗೆ ಸಮೀಕ್ಷೆ ಮಾಡಲಾಗಿದ್ದು, ಪ್ರತಿಶತ 70 ರಷ್ಟು ಘಟಕಗಳು  ಚಾಲ್ತಿಯಲ್ಲಿದ್ದು, 4 ಪ್ರತಿಶತ ಘಟಕಗಳು ಬಂದ್ ಆಗಿದೆ. ಉಳಿದ 26 ಪ್ರತಿಶತ ಘಟಕಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. 18,500 ಘಟಕಗಳಲ್ಲಿ 1,629 ಘಟಕಗಳು ತಾತ್ಕಾಲಿಕವಾಗಿ ಸ್ಥಗಿತವಾಗಿವೆ. ಘಟಕಗಳು ಆರಂಭ ಮಾಡಲು ಕ್ರಮವಹಿಸಲಾಗುತ್ತದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಈಗಾಗಲೇ 45 ಘಟಕಗಳು ಸ್ಥಗಿತವಾಗಿವೆ ಎಂದರು

ಈ  ವೇಳೆ ಮಾತನಾಡಿದ ಸಿಎಂ ಬಿಎಸ್​ ಯಡಿಯೂರಪ್ಪ,  ಶಾಸಕರು ಹೇಳಿದಂತೆ ನೀರಿನ ಘಟಕಗಳ ಅಳವಡಿಕೆಯಲ್ಲಿ ಹಗರಣವಾಗಿದ್ದು,ನಾನು‌ ಕೂಡ ಅನೇಕ ಬಾರಿ ಭೇಟಿ ಮಾಡಿದ ಸಂದರ್ಭದಲ್ಲಿ ಶುದ್ಧ ನೀರಿನ ಘಟಕಗಳು ಕೆಟ್ಟು ಹೋಗಿದ್ದು ಕಂಡಿದ್ದೇನೆ.  ಹೆಚ್ಚಿನ ಹಣ ವೆಚ್ಚ ಮಾಡಿ ಒಂದಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಹಣ ವೆಚ್ಚ ಮಾಡಿ ಈ ಹಿಂದಿನ ಸರ್ಕಾರ ಘಟಕ ಅಳವಡಿಸಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಅಳವಡಿಕೆಯಲ್ಲಿ  ದೊಡ್ಡ ಹಗರಣವಾಗಿದೆ. ಯಾರುಯಾರು ಎಷ್ಟು ಲೂಟಿ ಮಾಡಿ ಅವ್ಯವಹಾರ ಮಾಡಿದ್ದಾರೆ ಅವರ ವಿರುದ್ಧ ಸೂಕ್ತ ತನಿಖೆ ಮಾಡಿಸುತ್ತೇನೆ.  ತನಿಖಾ ವರದಿಯನ್ನು ಸದನದಲ್ಲಿ ಮಂಡಿಸುತ್ತೆನೆ. ಜಂಟಿ ಸದನ ಸಮಿತಿ ರಚನೆ ಮಾಡಿ ಸಮಗ್ರ ತನಿಖೆ ಮಾಡಿಸಲಾಗುತ್ತದೆ.
Published by: Seema R
First published: December 9, 2020, 7:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories