ಖಾತೆ ಹಂಚಿಕೆ ಕಸರತ್ತು: ರಾಜ್ಯಪಾಲರ ಒಪ್ಪಿಗೆ ಬಳಿಕ ಪಟ್ಟಿ ಪ್ರಕಟ ; ಸಿಎಂ ಬಿಎಸ್​ ಯಡಿಯೂರಪ್ಪ

ಸಚಿವರಿಗೆ ಹಂಚಲಾಗಿರುವ ಖಾತೆಗಳ ಪಟ್ಟಿ ಸಿದ್ದವಾಗಿದ್ದು, ರಾಜ್ಯಪಾಲರ ಒಪ್ಪಿಗೆ ಬಳಿಕ  ಪಟ್ಟಿ ಪ್ರಕಟ  ಮಾಡಲಾಗುವುದು.  ಈಗ ರಾಜಭವನಕ್ಕೆ ಪಟ್ಟಿ ಕಳುಹಿಸುತ್ತಿದ್ದೇನೆ- ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

  • Share this:
ಬೆಂಗಳೂರು  (ಫೆ.10):  ಸಚಿವ ಸಂಪುಟ ವಿಸ್ತರಣೆಗೊಂಡ ಐದು ದಿನಗಳ ಬಳಿಕ ಸಿಎಂ ಇಂದು ಖಾತೆ ಹಂಚಿಕೆಗೆ ಮುಂದಾಗಿದ್ದಾರೆ. ಸರ್ಕಾರ ರಚನೆಗೆ ಸಹಾಯ ಮಾಡಿದ ಹಿನ್ನೆಲೆ ಪ್ರಬಲ ಖಾತೆಯನ್ನು ನೀಡಬೇಕು ಎಂಬ ಪಟ್ಟು ಹೊಸ ಸಚಿವರಿಂದ ಕೇಳಿ ಬಂದಿದೆ. ಈ ನಡುವೆ ಮೂಲ ಬಿಜೆಪಿಗರ ಓಲೈಕೆ ಮಾಡುವ ಅನಿವಾರ್ಯತೆ ಕೂಡ ಇರುವ ಹಿನ್ನೆಲೆ ಸಿಎಂ ಅಳೆದು ತೂಗಿ ಖಾತೆ ಹಂಚಲಿದ್ದಾರೆ ಎನ್ನಲಾಗಿದೆ. 

ಶನಿವಾರ ನಿಗದಿಯಾಗಿದ್ದ ಈ ಖಾತೆ ಹಂಚಿಕೆಯನ್ನು ಸಿಎಂ ಬಿಎಸ್​ ಯಡಿಯೂರಪ್ಪ  ಇಂದಿಗೆ ಮುಂದೂಡಿದ್ದರು. ನೂತನ ಸಚಿವರ ಓಲೈಕೆ ನಡುವೆ ಇಂದು ಪಟ್ಟಿಯನ್ನು ಸಿದ್ದಪಡಿಸಿದ್ದು, ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಖಾತೆ ಹಂಚಿಕೆ ಪಟ್ಟಿ ಸಿದ್ಧವಾಗಿದ್ದು, ರಾಜ್ಯಪಾಲರ ಒಪ್ಪಿಗೆ ಬಳಿಕ  ಪಟ್ಟಿ ಪ್ರಕಟ  ಮಾಡಲಾಗುವುದು.  ಈಗ ರಾಜಭವನಕ್ಕೆ ಪಟ್ಟಿ ಕಳುಹಿಸುತ್ತೇನೆ ಎಂದರು.

ದೊಡ್ಡ ದೊಡ್ಡ ಖಾತೆ ಮೇಲೆ ನೂತನ ಸಚಿವರ ಕಣ್ಣು

ಪಕ್ಷ ತೊರೆದು ಸರ್ಕಾರ ರಚನೆಗೆ ಸಹಾಯ ಮಾಡಿದ ಹಿನ್ನೆಲೆ ಪ್ರಬಲ ಖಾತೆಯನ್ನು ನಮಗೆ ನೀಡಬೇಕು. ಇದು ನಮಗೆ ಪ್ರತಿಷ್ಠೆಯ ವಿಷಯವಾಗಿದೆ ಎಂದು ಈಗಾಗಲೇ ಸೋಮಶೇಖರ್​ ಪ್ರತಿಕ್ರಿಯಿಸಿದ್ದಾರೆ.

ಇದೇ ಕಾರಣಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದಲೂ ನೂತನ ಸಚಿವರು, ಸಿಎಂ ಮೇಲೆ ಒತ್ತಡ ಹೇರುತ್ತಿದ್ದು, ಗೋಪಾಲಯ್ಯ, ಶ್ರೀಮಂತ ಪಾಟೀಲ್​ ಸೇರಿದಂತೆ ಹಲವು ನಾಯಕರು ಕೂಡ ಇಂದು ಸಿಎಂ ಭೇಟಿಯಾಗಿ ತಮ್ಮ ಬೇಡಿಕೆ ಸಲ್ಲಿಸಿದ್ದಾರೆ.

ಇನ್ನು ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ ರಮೇಶ್​ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದು, ಬೆಂಗಳೂರು ಸಚಿವರಾದ ಸೋಮಶೇಖರ್​, ಭೈರತಿ ಬಸವರಾಜ್​ ಬೆಂಗಳೂರು ನಗರಾಭಿವೃದ್ಧಿ ಮೇಲೆ ಕಣ್ಣಿಟ್ಟಿದ್ದಾರೆ.

ಖಾತೆ ಹಂಚಿಕೆ ಬಳಿಕ ಶುರುವಾಗತ್ತಾ ಭಿನ್ನಮತ? 

ಸಚಿವ ಸ್ಥಾನಕ್ಕಾಗಿ ಸಿಎಂ ಮೇಲೆ ಒತ್ತಡ ಹೇರಿದ್ದ ನೂತನ ಸಚಿವರು ಈಗಾಗಲೇ ಖಾತೆ ಬಗ್ಗೆ ತಮ್ಮದೇ ಆದ ನಿರ್ದಿಷ್ಠವಾದ ಬೇಡಿಕೆ ಇಟ್ಟಿದ್ಧಾರೆ. ಆದರೆ, ಈ ಖಾತೆಗಳನ್ನು ಪಡೆಯುವಲ್ಲಿ ವಿಫಲವಾದರೆ, ಭಿನ್ನಮತ ಸ್ಪೋಟಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ

ಇದನ್ನು ಓದಿ: ಸೋತ ಶಾಸಕರಿಂದ ಹೊಸ ಲೆಕ್ಕಾಚಾರ; ಅಧಿಕಾರಕ್ಕಾಗಿ ಭಿನ್ನ ದಾರಿ ಹಿಡಿದ ವಿಶ್ವನಾಥ್, ಎಂಟಿಬಿ ನಾಗರಾಜ್

ಇದನ್ನೆಲ್ಲಾ ಅರಿತಿರುವ ಸಿಎಂ ಬಿಎಸ್​ವೈ ಈಗಾಗಲೇ  ನೂತನ ಸಚಿವರ ಓಲೈಕೆಗೆ ಮುಂದಾಗಿದ್ದು, ಅವರಿಗೆ ಪರಿಸ್ಥಿತಿ ಅರ್ಥ ಮಾಡಿಸುವಲ್ಲಿ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.
First published: