news18-kannada Updated:November 13, 2020, 4:24 PM IST
ಸಿಎಂ ಬಿಎಸ್ ಯಡಿಯೂರಪ್ಪ
ಬೆಂಗಳೂರು (ನ.13): ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಗೆ ಕಾಲವೇ ಕೂಡಿಬರುತ್ತಿಲ್ಲ ಎನ್ನುವಂತಿದೆ ಸದ್ಯದ ಪರಿಸ್ಥಿತಿ. ಉಪಚುನಾವಣೆ ಫಲಿತಾಂಶದ ಬಳಿಕ ಹೈ ಕಮಾಂಡ್ ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸುತ್ತೇನೆ ಎಂದಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಮತ್ತೆ ಈ ಕಾರ್ಯಕ್ರಮವನ್ನು ಮುಂದೆ ಹಾಕಿದ್ದಾರೆ. ಬಿಹಾರದಲ್ಲಿ ಸರ್ಕಾರ ರಚನೆಯಲ್ಲಿ ಹಿರಿಯ ಬಿಜೆಪಿ ನಾಯಕರು ಮಗ್ನರಾಗಿರುವ ಹಿನ್ನಲೆ ಈ ಸಂದರ್ಭದಲ್ಲಿ ದೆಹಲಿ ಪ್ರಯಾಣ ಸಲ್ಲದು ಎಂಬ ತೀರ್ಮಾನಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಇಂದು ದೆಹಲಿಗೆ ಹೊರಟಿದೆ. ಆದರೆ, ಹೈ ಕಮಾಂಡ್ ಬಿಹಾರ ಸರ್ಕಾರ ರಚನೆಯಲ್ಲಿ ನಿರತವಾಗಿದೆ. ಈ ಹಿನ್ನಲೆ ಅಲ್ಲಿನ ಸರ್ಕಾರ ರಚನೆಯಾದ ಬಳಿಕ ಬನ್ನಿ ಎಂಬುದು ಅವರ ಅಪೇಕ್ಷೆ. ಇದಾದ ಮೇಲೆ ಅವರು ಕರೆ ನೀಡುವುದಾಗಿ ತಿಳಿಸಿದ್ದಾರೆ. ಅವರು ಕರೆದ ಕೂಡಲೇ ನಾನು ಭೇಟಿ ಮಾಡುತ್ತೇನೆ. ಹೈಕಮಾಂಡ್ ನಾಯಕರ ಜತೆ ಚರ್ಚೆ ಬಳಿಕ ಈ ಬಗ್ಗೆ ನಿರ್ಧಾರ ಮಾಡಲಾಗುವುದು. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಹೈ ಕಮಾಂಡ್ ತೀರ್ಮಾನ ಅಂತಿಮ. ಅವರು ಹೇಳಿದಂತೆ ನಡೆಯಲಾಗುವುದು ಎಂದರು
ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ ಮಾಡಲಾಗುವುದು. ಇನ್ನೆರಡು ಮೂರು ದಿನಗಳೊಳಗೆ ಈ ಕುರಿತು ಹೈ ಕಮಾಂಡ್ ಜೊತೆ ಚರ್ಚಿಸುವುದಾಗಿ ತಿಳಿಸಿದ್ದರು. ಸಿಎಂ ಸಂಪುಟ ವಿಸ್ತರಣೆ ಕುರಿತು ಹೇಳಿಕೆ ನೀಡುತ್ತಿದ್ದಂತೆ ಸಚಿವಾಕಾಂಕ್ಷಿಗಳು ಸಭೆ ನಡೆಸುವುದು, ಸಿಎಂ ಭೇಟಿ ನಡೆಸುವ ಕಾರ್ಯಕ್ರಮ ನಡೆದಿತ್ತು. ಈ ನಡುವೆ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಮನೆಯಲ್ಲಿ ಸಚಿವಾಕಾಂಕ್ಷಿಗಳ ಗುಂಪೊಂದು ಸಭೆ ಸೇರಿದ್ದು ಎಲ್ಲರ ಕುತೂಹಲ ಮೂಡಿಸಿತು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ರಾಜುಗೌಡ, ಪೂರ್ಣಿಮಾ ಶ್ರೀನಿವಾಸ್, ಶಿವರಾಜ್ ಪಾಟೀಲ್ ಈ ಸಭೆಯಲ್ಲಿ ಭಾಗಿಯಾಗಿದ್ದರು
ಇದನ್ನು ಓದಿ: ಮೂಲ ಬಿಜೆಪಿ ಮುಖಂಡರಿಂದಲೂ ಗೋಕಾಕ್ ಸಾಹುಕಾರ್ ಭೇಟಿ; ಸರ್ಕಾರದಲ್ಲಿ ಪವರ್ಫುಲ್ ಆದ್ರಾ ರಮೇಶ್ ಜಾರಕಿಹೊಳಿ?
ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಶಾಸಕರ ಸಭೆ ಸಮರ್ಥನೆ ಮಾಡಿಕೊಂಡರು. ಅವರು ಇವಾಗ ಸಭೆ ಸೇರದ , ಇನ್ನು ಯಾವಾಗ ಸಭೆ ಸೇರುತ್ತಾರೆ ಎಂದು ಹೇಳಿದರು.
ಈಗಾಗಲೇ ಸಂಪುಟ ವಿಸ್ತರಣೆ ಕುರಿತು ಹೈ ಕಮಾಂಡ್ ಜೊತೆ ಚರ್ಚೆ ನಡೆಸಿ ಮರಳಿದ್ದಾರೆ. ಈ ವೇಳೆ ಹಿರಿಯ ಬಿಜೆಪಿ ನಾಯಕರು ಸಂಪುಟ ವಿಸ್ತರಣೆಗೆ ಒಪ್ಪಿಗೆ ಸೂಚಿಸಿಲ್ಲ. ಸಿಎಂ ತಮಗೆ ಸರ್ಕಾರ ರಚನೆ ಮಾಡಲು ಸಹಾಯ ಮಾಡಿದ ಮುನಿರತ್ನಗೆ ಮಂತ್ರಿ ಸ್ಥಾನ ನೀಡಲು ನಿರ್ಧರಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿಯೂ ಇದನ್ನು ಅವರು ತಿಳಿಸಿದ್ದರು. ಮುನಿರತ್ನ ಮಂತ್ರಿಯಾಗಲಿದ್ದಾರೆ. ಅವರಿಗೆ ಮತ ನೀಡಿದರೆ, ಕ್ಷೇತ್ರದ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದಿದ್ದರು. ಈ ನಡುವೆ ಪ್ರಬಲ ಆಕಾಂಕ್ಷಿಗಳಾಗಿರುವ ಎಚ್ ವಿಶ್ವನಾಥ್ ಮತ್ತು ಆರ್ ಶಂಕರ್ ದೆಹಲಿ ಭೇಟಿ ಬಳಿಕ ನಿನ್ನೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರು.
Published by:
Seema R
First published:
November 13, 2020, 4:24 PM IST