Ramesh Jarkiholi: ರಮೇಶ್​ ಜಾರಕಿಹೊಳಿ ಪ್ರಕರಣದಲ್ಲಿ ಮೌನವಹಿಸುವಂತೆ ಸಚಿವರಿಗೆ ಸಿಎಂ ಕಿವಿಮಾತು

ಕರಣದ ಕುರಿತು ಇದುವರೆಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಪ್ರಕರಣದಲ್ಲಿ ಅವರು ಸಂಪೂರ್ಣ ಮೌನವಹಿಸಿದ್ದಾರೆ.

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

  • Share this:
    ಬೆಂಗಳೂರು (ಮಾ. 3): ರಮೇಶ್​ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಬಿಜೆಪಿ ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ. ನಾಳೆಯಿಂದ ಬಜೆಟ್​ ಅಧಿವೇಶನ (bduget session) ಪ್ರಾರಂಭವಾಗಲಿದ್ದು, ಈ ಪ್ರಕರಣವನ್ನು ವಿಪಕ್ಷಗಳಾದ ಕಾಂಗ್ರೆಸ್​, ಜೆಡಿಎಸ್​ ಅಸ್ತ್ರವಾಗಿಸಿಕೊಂಡು ಆಡಳಿತ ಪಕ್ಷದ ವಿರುದ್ಧ ಹರಿಹಾಯಲು ಸಿದ್ಧತೆ ನಡೆಸಿದೆ. ಈ ಎಲ್ಲಾ ಬೆಳವಣಿಗೆ ಕುರಿತು ರಾಜ್ಯ ಸರ್ಕಾರದ ಸಚಿವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಹಿನ್ನಲೆ ಈ ಪ್ರಕರಣದ ಕುರಿತು ಮೌನವಹಿಸುವುದು ಸೂಕ್ತ ಎಂಬ ನಿರ್ಧಾರ ಸಚಿವರಿಂದ ಕೇಳಿ ಬಂದಿದೆ. ರಮೇಶ್​ ಜಾರಕಿಹೊಳಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದ ಬಳಿಕ ನಡೆದ ಸಂಪುಟ ಸಭೆಯಲ್ಲಿ ಈ ಸಿಡಿ ಪ್ರಕರಣದ ಕುರಿತು ಸಚಿವರುಗಳು ಗಂಭೀರ ಚರ್ಚೆ ನಡೆಸಿದ್ದು, ಈ ಪ್ರಕರಣದ ಕುರಿತು ಯಾವುದೇ ಹೇಳಿಕೆ ನೀಡದಂತೆ ಮುಖ್ಯಮಂತ್ರಿಗಳು ಸಚಿವರಿಗೆ ಸೂಚನೆ ನೀಡಿದ್ದಾರೆ.

    ಬಜೆಟ್​ ಆರಂಭಕ್ಕೂ ಮುನ್ನವೇ ನಡೆದ ಈ ಘಟನೆ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಗಣಿಸಿದೆ. ರಮೇಶ್​ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪ್ರತಿಪಕ್ಷಗಳು ಈ ವಿಚಾರವನ್ನು ಕಲಾಪದಲ್ಲಿ ಪ್ರಸ್ತಾಪಿಸುತ್ತಾರೆ. ಸಚಿವರು ರಾಜೀನಾಮೆ ನೀಡಿದರು ಅವರು ಸುಮ್ಮನಾಗುವುದಿಲ್ಲ. ಇದನ್ನು ಚುನಾವಣಾ ಪ್ರಚಾರದ ಲಾಭಾಕ್ಕೆ ಬಳಸಿಕೊಳ್ಳುತ್ತಾರೆ. ಇದಕ್ಕೆ ನಾವು ಜಾಗರೂಕರಾಗಿರಬೇಕು. ಪ್ರಕರಣ ತಣ್ಣಗಾಗುವವರೆಗೆ ನಾವು ಮೌನವಾಗಿರಬೇಕು ಎಂದು ಸಿಎಂ ಸಲಹೆ ನೀಡಿದ್ದಾರೆ.

    ಅಲ್ಲದೇ ಇದೇ ವೇಳೆ ಏನೇನೋ ಹೇಳಿಕೆ ಕೊಟ್ಟು ಮತ್ತೆ ವಿವಾದಕ್ಕೆ ಆಸ್ಪದ ಕೊಡಬೇಡಿ. ಈ ವಿಚಾರದ ಕುರಿತು ಹೇಳಿಕೆ ನೀಡುವಾಗ ಎಚ್ಚರಿಕೆ ಇರಲಿ. ನಾವು ಹೇಳುವುದು ಒಂದು ಅದು ಆಗುವುದು ಇನ್ನೊಂದು ಎಂಬ ರೀತಿ ಆಗದೇ ಇರಲಿ ಎಂದು ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಬಿಎಸ್​ವೈ ಕಿವಿಮಾತು ಹೇಳಿದ್ದಾರೆ.

    ಇದನ್ನು ಓದಿ: ರಮೇಶ್​ ಜಾರಕಿಹೊಳಿ ಅಜ್ಞಾತ ಸ್ಥಳದಲ್ಲಿಲ್ಲ, ಬೆಂಗಳೂರಿನಲ್ಲಿಯೇ ಇದ್ದಾರೆ; ಬಾಲಚಂದ್ರ ಜಾರಕಿಹೊಳಿ

    ಇನ್ನು ಈ ಪ್ರಕರಣದ ಕುರಿತು ಇದುವರೆಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಪ್ರಕರಣದಲ್ಲಿ ಅವರು ಸಂಪೂರ್ಣ ಮೌನವಹಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ ಎಂದು ಕೆಲ ಸಚಿವರು ಪ್ರತಿಕ್ರಿಯಿಸಿದ್ದಾರೆ.

    ಸಿಡಿ ಪ್ರಕರಣ ಸ್ಪೋಟವಾಗುತ್ತಿದ್ದಂತೆ ಇಂದು ಕಾಂಗ್ರೆಸ್​ ಪ್ರತಿಭಟನೆ ನಡೆಸಿದ್ದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ನಾಳೆಯಿಂದ ಬಜೆಟ್​ ಅಧಿವೇಶನ ಆರಂಭವಾಗಲಿದ್ದು, ಅಲ್ಲಿ ಕೂಡ ಸರ್ಕಾರದ ವಿರುದ್ಧ ಹರಿಹಾಯಲು ಈ ಪ್ರಕರಣದ ಮೂಲಕ ಸಿದ್ಧತೆ ನಡೆಸಿವೆ.
    Published by:Seema R
    First published: