ಕೊಟ್ಟ ಮಾತು ಉಳಿಸಿಕೊಂಡ ಸಿದ್ದರಾಮಯ್ಯ: ಬಾದಾಮಿ ಅಭಿವೃದ್ದಿಗೆ 600 ಕೋಟಿ. ರೂ ಅನುದಾನ ತರುವಲ್ಲಿ ಯಶಸ್ವಿ

"ನಾನು ಚುನಾವಣೆಗೆ 8 ಬಾರಿ ಸ್ಪರ್ಧಿಸಿದ್ದೇನೆ. ಈ ಸಲದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜನರು ಷಡ್ಯಂತ್ರಕ್ಕೆ ಬಲಿಯಾಗಿ ನನಗೆ ಮತ ನೀಡಲಿಲ್ಲ. ಬಾದಾಮಿಯಲ್ಲೂ ನನ್ನನ್ನು ಸೋಲಿಸಲು ಷಡ್ಯಂತ್ರ ನಡೆದಿತ್ತು, ಆದರೆ ಇಲ್ಲಿನ ಜನ ಕೈಬಿಡಲಿಲ್ಲ. ಮನೆ ಮಗನಂತೆ ನನ್ನನ್ನು ಆದರಿಸಿ ಆಯ್ಕೆ ಮಾಡಿದ್ದಾರೆ. ಈ ಕ್ಷೇತ್ರದ ಅಭಿವೃದ್ದಿಗಾಗಿ ಕೆಲಸ ಮಾಡುತ್ತೇನೆ" ಎಂದು ಹಿಂದೆಯೇ ಹೇಳಿದ್ದರು.

ಮಾಜಿ ಸಿಎಂ ಸಿದ್ಧರಾಮಯ್ಯ

ಮಾಜಿ ಸಿಎಂ ಸಿದ್ಧರಾಮಯ್ಯ

 • Share this:
  ಬೆಂಗಳೂರು(ಫೆ.19): ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ ಸಿಎಂ ಯಡಿಯೂರಪ್ಪ ಭರ್ಜರಿ ಗಿಫ್ಟ್​​ ನೀಡಿದ್ದಾರೆ. ಇಲ್ಲಿನ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸುಮಾರು 600 ಕೋಟಿ ರೂ. ಯೋಜನೆಗೆ ಬಿ.ಎಸ್​​ ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ. ಈ ಮೂಲಕ ತನ್ನ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಸಮಾಧಾನಗೊಳಿಸುವ ಯತ್ನ ಮಾಡಿದ್ದಾರೆ.

  ಮಂಗಳವಾರ(ನಿನ್ನೆ) ವಿಧಾನಸಭೆಯಲ್ಲಿ ಹರಿಹಾಯ್ದ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಇದಾದ ನಂತರ ಅಧಿವೇಶನವನ್ನೇ ಬಹಿಷ್ಕರಿಸುವ ಬೆದರಿಕೆ ಸಿದ್ದರಾಮಯ್ಯ ಹಾಕಿದ್ದರು. ಹೀಗೆ ರಾಜ್ಯ ಸರ್ಕಾರದ ವಿರುದ್ಧ ಕಿಡಕಾರುತ್ತಿರುವ ಪ್ರತಿಪಕ್ಷ ನಾಯಕರನ್ನು ಸಮಾಧಾನಗೊಳಿಸುವ ಸಲುವಾಗಿ ಮುಖ್ಯಮಂತ್ರಿಗಳು ಬಾದಾಮಿ ಕ್ಷೇತ್ರಕ್ಕೆ 600 ಕೋಟಿ. ರೂ ಅನುದಾನ ನೀಡಿದ್ದಾರೆನ್ನಲಾಗುತ್ತಿದೆ.

  ಈ ಹಿಂದೆಯೇ ಮಾಜಿ ಸಿಎಂ ಸಿದ್ದರಾಮಯ್ಯ ತನ್ನ ಕ್ಷೇತ್ರದ ಪ್ರವಾಸೋದ್ಯಮ, ಕೃಷಿ, ನೀರಾವರಿ ಇಲಾಖೆಗಳಿಗೆ ಸಂಬಂಧಪಟ್ಟಂತೆ ಯೋಜನೆಗಳಿಗೆ ಸುಮಾರು ಒಂದು ಕೋಟಿ. ರೂ ಅನುದಾನಕ್ಕಾಗಿ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ 600 ಕೋಟಿ ರೂ. ಯೋಜನೆಗೆ ಸಹಿ ಹಾಕಿದ್ದಾರೆ. ನಿನ್ನೆ ಮಧ್ಯಾಹ್ನವೇ 600 ಕೋಟಿ ರೂ. ಯೋಜನೆಗಳಿಗೆ ಅಂಗೀಕಾರ ಸಿಕ್ಕಿದೆ.

  ಇದನ್ನೂ ಓದಿ: ತಪಸ್ ಪಾಲ್ ಸಾವಿಗೆ ಕೇಂದ್ರ ಸರ್ಕಾರದ ಪ್ರತೀಕಾರದ ರಾಜಕೀಯ ನೀತಿಯೇ ಕಾರಣ; ಮಮತಾ ಬ್ಯಾನರ್ಜಿ ಕಿಡಿ

  ಇನ್ನು, ಸಿದ್ದರಾಮಯ್ಯ ಬಾದಾಮಿಯವರಿಗೆ ಮಾತು ನೀಡಿದಂತೆಯೇ ಹಲವು ಅಭಿವೃದ್ದಿಗಳನ್ನು ಮಾಡುತ್ತಿದ್ದಾರೆ. "ನಾನು ಚುನಾವಣೆಗೆ 8 ಬಾರಿ ಸ್ಪರ್ಧಿಸಿದ್ದೇನೆ. ಈ ಸಲದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜನರು ಷಡ್ಯಂತ್ರಕ್ಕೆ ಬಲಿಯಾಗಿ ನನಗೆ ಮತ ನೀಡಲಿಲ್ಲ. ಬಾದಾಮಿಯಲ್ಲೂ ನನ್ನನ್ನು ಸೋಲಿಸಲು ಷಡ್ಯಂತ್ರ ನಡೆದಿತ್ತು, ಆದರೆ ಇಲ್ಲಿನ ಜನ ಕೈಬಿಡಲಿಲ್ಲ. ಮನೆ ಮಗನಂತೆ ನನ್ನನ್ನು ಆದರಿಸಿ ಆಯ್ಕೆ ಮಾಡಿದ್ದಾರೆ. ಈ ಕ್ಷೇತ್ರದ ಅಭಿವೃದ್ದಿಗಾಗಿ ಕೆಲಸ ಮಾಡುತ್ತೇನೆ" ಎಂದು ಹಿಂದೆಯೇ ಹೇಳಿದ್ದರು.

  ಜೀವನಪೂರ್ತಿ ಬಾದಾಮಿ ಕ್ಷೇತ್ರದ ಜನರಿಗೆ ನಾನು ಋಣಿಯಾಗಿರುತ್ತೇನೆ. ತಿಂಗಳಿಗೆ ಎರಡು ಬಾರಿ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ, ಜನರನ್ನು ಭೇಟಿ ಮಾಡಿ ಸಮಸ್ಯೆ ತಿಳಿದುಕೊಳ್ಳುತ್ತೇನೆ. ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸುತ್ತೇನೆ. ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಈಗ ಬಾದಾಮಿಗೆ 600 ಕೋಟಿ ರೂ ಒಂದೇ ಹಂತದಲ್ಲಿ ಅನುದಾನ ಸಿಕ್ಕಿರುವುದು ಸಿದ್ದರಾಮಯ್ಯರ ಪ್ರಾಮಾಣಿಕ ಪ್ರಯತ್ನ ಎನ್ನಬಹುದು.
  First published: