ಉಪ ಚುನಾವಣೆ: ತಪ್ಪದೇ ಮತದಾನ ಮಾಡುವಂತೆ 15 ಕ್ಷೇತ್ರಗಳ ಮತದಾರರಿಗೆ ಸಿಎಂ ಮನವಿ

ಮತದಾನ ಎಲ್ಲರ ಹಕ್ಕಾಗಿದ್ದು, ಕ್ಷೇತ್ರದ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು, ಮಳೆ, ಗಾಳಿ, ಚಳಿ ಎನ್ನದೇ ವಯಸ್ಕರೆಲ್ಲರೂ ಮತದಾನ ಮಾಡಿ. ಕ್ಷೇತ್ರಗಳಲ್ಲಿ ಶೇ 85 ರಷ್ಟು ಮತದಾನ ನಡೆಯಬೇಕು ಎಂದು ಮನವಿ ಮಾಡಿದ್ದಾರೆ

Seema.R | news18-kannada
Updated:December 4, 2019, 5:16 PM IST
ಉಪ ಚುನಾವಣೆ: ತಪ್ಪದೇ ಮತದಾನ ಮಾಡುವಂತೆ 15 ಕ್ಷೇತ್ರಗಳ ಮತದಾರರಿಗೆ ಸಿಎಂ ಮನವಿ
ಸಿಎಂ ಯಡಿಯೂರಪ್ಪ
  • Share this:
ಬೆಂಗಳೂರು (ಡಿ.04): ಅನರ್ಹ ಶಾಸಕರ ರಾಜೀನಾಮೆ ಹಿನ್ನೆಲೆ ತೆರವಾಗಿದ್ದ 15 ಕ್ಷೇತ್ರಗಳ ಉಪಚುನಾವಣೆ ನಾಳೆ ನಡೆಯಲಿದ್ದು, ತಪ್ಪದೇ ಮತದಾನ ಮಾಡುವಂತೆ ಕ್ಷೇತ್ರದ ಮತದಾರರಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಮನವಿ ಮಾಡಿದ್ದಾರೆ. 

ಡಾಲರ್ಸ್​ ಕಾಲೋನಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮತದಾನ ಎಲ್ಲರ ಹಕ್ಕಾಗಿದ್ದು, ಕ್ಷೇತ್ರದ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು, ಮಳೆ, ಗಾಳಿ, ಚಳಿ ಎನ್ನದೇ ವಯಸ್ಕರೆಲ್ಲರೂ ಮತದಾನ ಮಾಡಿ. ಕ್ಷೇತ್ರಗಳಲ್ಲಿ ಶೇ 85 ರಷ್ಟು ಮತದಾನ ನಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಬಿಜೆಪಿ ಸರ್ಕಾರದ ಅಳಿವು-ಉಳಿವನ್ನು ಈ ಉಪಚುನಾವಣೆ ನಿರ್ಧರಿಸಲಿದೆ. 107 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಕನಿಷ್ಠ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಸರ್ಕಾರ ಸುಭದ್ರವಾಗಿರಲಿದೆ.

ಇನ್ನು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹಗೊಂಡ ಶಾಸಕರ ರಾಜಕೀಯ ಭವಿಷ್ಯ ಕೂಡ ಈ ಚುನಾವಣೆಯಲ್ಲಿ ಅಡಕವಾಗಿದೆ. ಸುಪ್ರೀಂ ಕೋರ್ಟ್​ನಿಂದ ಅನರ್ಹಗೊಂಡ ಬಿಜೆಪಿ ಅಭ್ಯರ್ಥಿಗಳಿಗೆ ಮತದಾನವನ್ನು ಮಾಡಬೇಡಿ. ಸ್ವ ಹಿತಾಸಕ್ತಿಗಾಗಿ ತಮ್ಮನ್ನೇ ಮಾರಿಕೊಂಡವರು ಜನರಿಗೆ ಏನು ಮಾಡಿದ್ದಾರೆ ಎಂದು ವಿಪಕ್ಷಗಳು ಪ್ರಶ್ನಿಸಿವೆ.

ಇದನ್ನು ಓದಿ: ನನ್ನನ್ನು ಜೈಲಿಗೆ ಕಳುಹಿಸಿದವರ ನೆನಪಿಗಾಗಿ ಈ ಗಡ್ಡ: ಡಿಕೆ ಶಿವಕುಮಾರ್ (ವಿಶೇಷ ಸಂದರ್ಶನ)

ಗೋಕಾಕ್​, ಅಥಣಿ, ರಾಣೆಬೆನ್ನೂರು, ಕಾಗವಾಡ, ಹಿರೇಕೆರೂರು, ಯಲ್ಲಾಪುರ, ಯಶವಂತಪುರ, ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು, ಕೆಆರ್​ ಪೇಟೆ, ಮಹಾಲಕ್ಷ್ಮೀ ಲೇಔಟ್​ , ಕೆ.ಆರ್​ ಪುರಂ ಹಾಗೂ ಚಿಕ್ಕಬಳ್ಳಾಪುರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಈಗಾಗಲೇ ಸಕಲ ಸಿದ್ಧತೆಯನ್ನು ಚುನಾವಣಾ ಆಯೋಗ ನಡೆಸಿದೆ. ನಾಳೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.
First published: December 4, 2019, 5:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading