HOME » NEWS » State » CM BS YEDIYURAPPA REQUESTED HIS FOLLOWERS NOT TO BRING ANY GIFTS ON HIS BIRTHDAY SESR

ನಿಮ್ಮ ಅಭಿಮಾನವೇ ದೊಡ್ಡ ಉಡುಗೊರೆ; ಹುಟ್ಟುಹಬ್ಬಕ್ಕೆ ಹಾರ-ತುರಾಯಿ ಬೇಡ ಎಂದ ಬಿಎಸ್​ವೈ

ನಿಮ್ಮ ಆಶೀರ್ವಾದವೇ ದೊಡ್ಡ ಉಡುಗೊರೆ. ನಿಮ್ಮ ಪ್ರೀತಿಯಲ್ಲಿಯೇ ಮಿಂದೇಳುವ ನನಗೆ ಅನಗತ್ಯವಾಗಿ ಫಲಪುಷ್ಪ, ಪೇಟ, ಶಾಲು, ಹಾರ, ತುರಾಯಿ, ಸಿಹಿತಿಂಡಿ ಹಾಗೂ ನೆನಪಿನ ಕಾಣಿಕೆಗಳನ್ನು ತರಬೇಡಿ ಎಂದು ಮನವಿ ಮಾಡಿದ್ದಾರೆ

news18-kannada
Updated:February 26, 2020, 6:09 PM IST
ನಿಮ್ಮ ಅಭಿಮಾನವೇ ದೊಡ್ಡ ಉಡುಗೊರೆ; ಹುಟ್ಟುಹಬ್ಬಕ್ಕೆ ಹಾರ-ತುರಾಯಿ ಬೇಡ ಎಂದ ಬಿಎಸ್​ವೈ
ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು (ಫೆ.26): ನಾಳೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಹುಟ್ಟು ಹಬ್ಬ. 77 ವಸಂತಗಳನ್ನು ಪೂರೈಸಿರುವ ಅವರು ನಾಳೆ 78ನೇ ಜನ್ಮದಿನಾಚರಣೆಗೆ ಸಿದ್ದವಾಗಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಅವರಿಗೆ ಅಭಿನಂದನಾ ಸಮಾರಂಭವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಅವರಿಗೆ ಶುಭ ಹಾರೈಸಲು ರಾಜ್ಯದೆಲ್ಲೆಡೆಯಿಂದ ಅಭಿಮಾನಿಗಳು ಕೂಡ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಯಾವುದೇ ಹಾರ, ತುರಾಯಿ ಉಡುಗೊರೆ ನೀಡದಂತೆ ಮನವಿ ಮಾಡಿದ್ದಾರೆ. 

ಈ ಕುರಿತು ಟ್ವೀಟ್​ ಮಾಡಿರುವ ಅವರ, ನಿಮ್ಮೆಲ್ಲರ ಸೇವೆ ಮಾಡಲು ಸಿಕ್ಕಿರುವುದೇ ನನಗೆ ಅದೃಷ್ಟ. ನಿಮ್ಮಗಳ ಆಶೀರ್ವಾದವೇ ದೊಡ್ಡ ಉಡುಗೊರೆ. ನಿಮ್ಮ ಪ್ರೀತಿಯಲ್ಲಿಯೇ ಮಿಂದೇಳುವ ನನಗೆ ಅನಗತ್ಯವಾಗಿ  ಫಲಪುಷ್ಪ, ಪೇಟ, ಶಾಲು, ಹಾರ, ತುರಾಯಿ, ಸಿಹಿತಿಂಡಿ ಹಾಗೂ ನೆನಪಿನ ಕಾಣಿಕೆಗಳನ್ನು ತರಬೇಡಿ ಎಂದು ಮನವಿ ಮಾಡಿದ್ದಾರೆ.


ಮೂರನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರು, ಶಕ್ತಿ ಪ್ರದರ್ಶನಕ್ಕೆ ಅರಮನೆ ಮೈದಾನದಲ್ಲಿ ವೇದಿಕೆ ಕೂಡ ಸಜ್ಜಾಗುತ್ತಿದೆ. ಪಕ್ಷದಲ್ಲಿ ಯಡಿಯೂರಪ್ಪ ನಾಯಕತ್ವ ಸಾಬೀತಿನ ಜೊತೆಗೆ ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರಿಸಲು ಅಭಿನಂದನಾ ಸಮಾರಂಭ ಕೂಡ ಏರ್ಪಾಡುಮಾಡಲಾಗಿದೆ.

ಇದನ್ನು ಓದಿ: ಬಜೆಟ್​ ಅಧಿವೇಶನದಂದು ಸಂವಿಧಾನ ಕುರಿತು ಎಲ್ಲಾ ಸದಸ್ಯರಿಂದ ಭಾಷಣ: ಸಿಎಂ ಬಿಎಸ್​ವೈ

ಈ ಸಮಾರಂಭಕ್ಕೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಎಚ್​ ಡಿ ಕುಮಾರಸ್ವಾಮಿ ಅವರಿಗೂ ಕೂಡ ಆಹ್ವಾನ ನೀಡಲಾಗಿದ್ದು, ಮೂರು ಪಕ್ಷದ ನಾಯಕರು ಒಂದೇ ವೇದಿಕೆ ಮೇಲೆ ಸೇರುತ್ತಾರಾ ಎಂಬ ಕುತೂಹಲ ಕೂಡ ಮೂಡಿದೆ.

ಹುಟ್ಟು ಹಬ್ಬದಂತೆ ಗೃಹ ಪ್ರವೇಶ

ಇನ್ನು ತಮ್ಮ ಹುಟ್ಟು ಹಬ್ಬದ ಇದೇ ಸಂದರ್ಭದಲ್ಲಿ ಅವರು ಅಧಿಕೃತವಾಗಿ ಕಾವೇರಿ ನಿವಾಸ ಪ್ರವೇಶ ಮಾಡಲು ಸಿದ್ದರಾಗಿದ್ದಾರೆ. ಇಷ್ಟು ದಿನ ಡಾಲರ್ಸ್​ ಕಾಲೋನಿಯ ಧವಳಗಿರಿಯಲ್ಲಿದ್ದ ಅವರು, ಈಗ ಸರ್ಕಾರಿ ಬಂಗಲೆಗೆ ಕಾಲಿಡಲಿದ್ದಾರೆ. ಗೃಹ ಪ್ರವೇಶಕ್ಕೆ ಈಗಾಗಲೇ ಭರ್ಜರಿ ಸಿದ್ಧತೆ ನಡೆದಿದ್ದು, ಕಾವೇರಿ ನಿವಾಸದ ರಸ್ತೆಗೆ ಹೊಸದಾಗಿ ಡಾಂಬರೀಕರಣ ಮಾಡಲಾಗಿದೆ. ಸುಣ್ಣ ಬಣ್ಣದ ಅಲಂಕಾರ ಮಾಡಲಾಗುತ್ತಿದೆ. ಇನ್ನು ಈ ಸಂದರ್ಭದಲ್ಲಿ  ಸಾರ್ವಜನಿಕರು, ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
First published: February 26, 2020, 6:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories