ಇದ್ದಕ್ಕಿದ್ದಂತೆ ಸಹಾಯ ಮಾಡುತ್ತೇನೆ ಎಂದು ಬಂದರೆ ಸಹಕಾರ ನೀಡಲು ಸಾಧ್ಯವಿಲ್ಲ; ಜೆಡಿಎಸ್​ ಬೆಂಬಲ ತಿರಸ್ಕರಿಸಿದ ಬಿಎಸ್​ವೈ

ಎಂಟಿಬಿ ಗೆದ್ದು ಶಾಸಕರಾದ 24 ಗಂಟೆಗಳಲ್ಲಿ ಅವರನ್ನು ಮಂತ್ರಿ ಮಾಡುತ್ತೇವೆ. ನಾನು ನಂಬಿಕೆ, ವಿಶ್ವಾಸ ದ್ರೋಹ ಮಾಡುವುದಿಲ್ಲ. ಎಂಟಿಬಿ ರಾಜೀನಾಮೆಯಿಂದ ನಾನು ಸಿಎಂ ಆಗಿದ್ದೇನೆ. ಎಂಟಿಬಿ ಗೆಲುವನ್ನು ಯಾರೂ ತಡೆಯಲಾಗಲ್ಲ

Seema.R | news18-kannada
Updated:November 18, 2019, 2:24 PM IST
ಇದ್ದಕ್ಕಿದ್ದಂತೆ ಸಹಾಯ ಮಾಡುತ್ತೇನೆ ಎಂದು ಬಂದರೆ ಸಹಕಾರ ನೀಡಲು ಸಾಧ್ಯವಿಲ್ಲ; ಜೆಡಿಎಸ್​ ಬೆಂಬಲ ತಿರಸ್ಕರಿಸಿದ ಬಿಎಸ್​ವೈ
ಸಿಎಂ ಬಿಎಸ್​ ಯಡಿಯೂರಪ್ಪ ಮತ್ತು ಎಚ್​ಡಿ ಕುಮಾರಸ್ವಾಮಿ
  • Share this:
ಹೊಸಕೋಟೆ (ನ.18): ಈಗ ಯಾರು ಯಾರೋ ಸಹಾಯ ಕೊಡುತ್ತೇನೆ ಎಂದು ಬರುತ್ತಿದ್ದಾರೆ. ಇದಕ್ಕಿದ್ದಂತೆ ನಮ್ಮನ್ನು ಬೆಂಬಲಿಸುತ್ತೇನೆ ಎಂದು ಬರುತ್ತಿದ್ದಾರೆ. ಆದರೆ, ಅವರ ಸಹಕಾರ ನಮಗೆ ಅಗತ್ಯವಿಲ್ಲ  ಎಂದು ಜೆಡಿಎಸ್ ಬೆಂಬಲವನ್ನು ಮುಖ್ಯಮಂತ್ರಿ ಯಡಿಯೂರಪ್ಪ  ತಿರಸ್ಕರಿಸಿದ್ದಾರೆ. 

ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಮಪತ್ರ ಸಲ್ಲಿಕೆ ಬಳಿಕ ಬೃಹತ್​ ಸಮಾವೇಶದಲ್ಲಿ ಮಾತನಾಡಿದ ಅವರು, ನೀವು ಅಧಿಕಾರಿದಲ್ಲಿ ಇದ್ದಾಗ ಏನು ಮಾಡಿದ್ದೀರಾ. ಕ್ಷೇತ್ರಕ್ಕೆ ಏನು ಅಭಿವೃದ್ಧಿ ಕೆಲಸ ಆಗಿದೆ ಎಂದು ನಿಮಗೆ  ಸಹಕಾರ ನೀಡಬೇಕು ಎಂದು ಜೆಡಿಎಸ್​ ಬೆಂಬಲದ ಬಗ್ಗೆ ಟೀಕಿಸಿದರು.

ಎಂಟಿಬಿ ಗೆದ್ದು ಶಾಸಕರಾದ 24 ಗಂಟೆಗಳಲ್ಲಿ ಅವರನ್ನು ಮಂತ್ರಿ ಮಾಡುತ್ತೇವೆ. ನಾನು ನಂಬಿಕೆ, ವಿಶ್ವಾಸ ದ್ರೋಹ ಮಾಡುವುದಿಲ್ಲ. ಎಂಟಿಬಿ ರಾಜೀನಾಮೆಯಿಂದ ನಾನು ಸಿಎಂ ಆಗಿದ್ದೇನೆ. ಎಂಟಿಬಿ ಗೆಲುವನ್ನು ಯಾರೂ ತಡೆಯಲಾಗಲ್ಲ. 25 ಸಾವಿರಕ್ಕೂ ಹೆಚ್ಚು ಅಂತರದಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಹೊಸಕೋಟೆ ನಗರಕ್ಕೆ ಕಾವೇರಿ ನೀರು, ಮೆಟ್ರೋ ನೀಡುತ್ತೇವೆ ಯಡಿಯೂರಪ್ಪ ಹೇಳಿದ್ರೆ ಅದು ಆಗಿಯೇ ತೀರುತ್ತದೆ ಎಂದು ಇದೇ ವೇಳೆ ಭರವಸೆ ನೀಡಿದರು.

ಇದನ್ನು ಓದಿ: ವಿಶ್ವನಾಥ್ ತ್ಯಾಗದಿಂದ ಸಿಎಂ ಆದ ಸಿದ್ದರಾಮಯ್ಯ, ಅವರನ್ನೇ ತುಳಿಯಲು ಯತ್ನಿಸಿದರು; ಶ್ರೀರಾಮುಲು ವಾಗ್ದಾಳಿ

ಹೆಸರೆಳದೇ ಶರತ್​ ಬಚ್ಚೇಗೌಡ ವಿರುದ್ಧ ಹರಿಹಾಯ್ದ ಅವರು, ಹೊಸಕೋಟೆಯಲ್ಲಿ ರಾಜಕೀಯ ದೊಂಬರಾಟ ಶುರುವಾಗಿದೆ. ನಾನು ಯಾವೊಬ್ಬನ ಹೆಸರು ಹೇಳುವುದಿಲ್ಲ.  ಪಕ್ಷಕ್ಕೆ ದ್ರೋಹ ಬಗೆದವರನ್ನ ಈಗಾಗಲೇ ಉಚ್ಚಾಟನೆ ಮಾಡಿದ್ದೇನೆ. ಪಕ್ಷ  ವಿರೋಧಿಗಳನ್ನ ಮತ್ತೊಮ್ಮೆ ಪಕ್ಷಕ್ಕೆ ಸೇರಿಸಿಕೊಳ್ಳುವ ಮಾತಿಲ್ಲ, ಪಕ್ಷ ವಿರೋಧಿಗಳನ್ನು ಸಹಿಸುವುದಿಲ್ಲ ಎಂದು ಹರಿಹಾಯ್ದರು.
First published:November 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...