17 ಜನರನ್ನು ಮಂತ್ರಿ ಮಾಡೋದು ಹೇಗೆ ಅನ್ನೋ ಚಿಂತೆ ನನಗೆ, ಈ ವೇಳೆ ಶ್ರೀಗಳು ಆಗ್ರಹಿಸಿದರೆ ಹೇಗೆ?; ಸಿಎಂ ಬಿಎಸ್​ವೈ

ಗಂಗಾಮತ ಸಮಾಜವನ್ನು ಎಸ್​​ಟಿಗೆ ಸೇರಿಸಬೇಕು ಎಂಬ ಬಹು ದಿನದ ಬೇಡಿಕೆ ಇದೆ. ಈ ಬಗ್ಗೆ ಕೇಂದ್ರದಲ್ಲಿ ಚರ್ಚೆ ಆಗುತ್ತಿದೆ. ನಿಮ್ಮನ್ನು ಎಸ್ಟಿ ಸಮಾಜಕ್ಕೆ ಸೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ರಿಶ್ಚಿಯನ್ ಸಮುದಾಯದ ಕಾರ್ಯಕ್ರಮ ಮುಗಿಸಿಕೊಂಡು ಬಂದಿದ್ದೇನೆ. ಎಲ್ಲಾ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕೆಂಬ ಹಂಬಲ ಇದೆ. 

Latha CG | news18-kannada
Updated:January 15, 2020, 5:27 PM IST
17 ಜನರನ್ನು ಮಂತ್ರಿ ಮಾಡೋದು ಹೇಗೆ ಅನ್ನೋ ಚಿಂತೆ ನನಗೆ, ಈ ವೇಳೆ ಶ್ರೀಗಳು ಆಗ್ರಹಿಸಿದರೆ ಹೇಗೆ?; ಸಿಎಂ ಬಿಎಸ್​ವೈ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಹಾವೇರಿ(ಜ.15): ಪಂಚಮಸಾಲಿ ಸಮುದಾಯದ ಶಾಸಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಕೊಡಬೇಕೆಂದು ಶ್ವಾಸಗುರು ವಚನಾನಂದ ಸ್ವಾಮೀಜಿ ನಿನ್ನೆ ಸಿಎಂ ಬಿಎಸ್​ ಯಡಿಯೂರಪ್ಪನವರಿಗೆ ಆಗ್ರಹ ಮಾಡಿದ್ದರು. ಈ ವಿಷಯದಲ್ಲಿ ಸಿಎಂ ಸ್ವಾಮೀಜಿಗಳ ವಿರುದ್ಧ ಸಿಡಿಮಿಡಿಗೊಂಡಿದ್ದರು. ಇಂದು ಹಾವೇರಿಯ ನರಸೀಪುರದಲ್ಲಿ ನಿನ್ನೆ ನಡೆದ ಘಟನೆ ಬಗ್ಗೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

"17 ಜನ ರಾಜೀನಾಮೆ ಕೊಟ್ಟಿದ್ದರಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ. ಅವರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ನಾನು ಯೋಚನೆ ಮಾಡುತ್ತಿದ್ದೇನೆ. ಅವರೆಲ್ಲರನ್ನೂ ಮಂತ್ರಿ ಮಾಡೋದು ಹೇಗೆ ಎಂದು ನನಗೆ ಚಿಂತೆ. ಈ ಸಂದರ್ಭದಲ್ಲಿ ಸ್ವಾಮೀಜಿಗಳು ಸಲಹೆ ಕೊಡಬೇಕು. ಅದನ್ನು ಬಿಟ್ಟು ಸ್ವಾಮೀಜಿಗಳು ಆಗ್ರಹಿಸಿದರೆ ಹೇಗೆ? ಮಂತ್ರಿ ಮಾಡಲು ಒತ್ತಾಯಿಸಿದರೆ ಹೇಗೆ? ಈ ವಿಚಾರವಾಗಿ ನಿನ್ನೆ ಗೊಂದಲವಾಗಿದ್ದು ನಿಜ," ಎಂದು ಸಿಎಂ ಮಾತು ಬಿಚ್ಚಿಟ್ಟರು.

ನರಸೀಪುರದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವದಲ್ಲಿ ಮಾತನಾಡಿದ ಬಿಎಸ್​ವೈ, "ನಿಡುಮಾಮುಡಿ ಹಾಗೂ ದಿಂಗಾಲೇಶ್ವರ ಸ್ವಾಮೀಜಿ  ಬಹಳ ನೊಂದು ಒಳ್ಳೆಯ ಮಾತು ಮಾತನಾಡಿದ್ದಾರೆ. ಈ ಸಂದರ್ಭ ಎಲ್ಲವನ್ನು ಎದುರಿಸುವುದು ಅನಿವಾರ್ಯವಾಗಿದೆ. ರಾಜ್ಯದ ವಾಸ್ತವಿಕ ತಿಳಿಯದೆ ಈ ರೀತಿ ಮಾತನಾಡಿದ್ದರಿಂದ ಗೊಂದಲ ಆಗಿದ್ದು ನಿಜ. 17 ಜನರಿಂದ ನಾನು ನಾನು ಮುಖ್ಯಮಂತ್ರಿಯಾಗಿದ್ದೇನೆ.  ಒಂದೊಂದು ಸಮಾಜ ಈ ರೀತಿ ಬೇಡಿಕೆ ಇಟ್ಟರೆ ಕಷ್ಟ ಆಗುತ್ತೆ ಅಂತಾ ನಿನ್ನೆಯೇ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ವಚನಾನಂದ ಶ್ರೀಗಳ ಬೆನ್ನಿಗೆ ನಿಂತ ಪ್ರಸನ್ನಾನಂದ ಸ್ವಾಮೀಜಿ; ಪಂಚಮಸಾಲಿ‌ ಸಮುದಾಯ ಜಾಗೃತವಾಗಲು ಕರೆ

ಗಂಗಾಮತ ಸಮುದಾಯಕ್ಕೆ 10 ಕೋಟಿ ರೂ.ಮೀಸಲು

ಇದೇ ವೇಳೆ,  ಸಿಎಂ ಬಿಎಸ್​ವೈ ಗಂಗಾಮತ ಸಮುದಾಯಕ್ಕೆ ಬಜೆಟ್​​ನಲ್ಲಿ 10 ಕೋಟಿ ರೂ. ಮೀಸಲಿಡುವುದಾಗಿ ತಿಳಿಸಿದರು. "ಈ ಸಮಾರಂಭದಲ್ಲಿ ಎರಡು ಬೇಡಿಕೆಗಳನ್ನು ನನ್ನ ಮುಂದೆ ಇಟ್ಟೀದೀರಿ. ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ಮಾಡಿ, ಸಮಿತಿ ರಚನೆ ಮಾಡಲಾಗಿದೆ. ಅವರ ಮೂಲಕ ಸಮಾಜಕ್ಕೆ ಆಗಬೇಕಾದ ಕೆಲಸ ಮಾಡಿ ಕೊಡುತ್ತೇನೆ. ಅತಿವೃಷ್ಠಿಯಿಂದ ಪ್ರವಾಹದಿಂದ ರಾಜ್ಯದಲ್ಲಿ ಸಾಕಷ್ಟು ಹಾನಿಯಾಗಿದೆ‌.  ಜನರ ಕಣ್ಣೊರೆಸಲು ಮೂರು ತಿಂಗಳು ಕಳೆಯಿತು. ಬರುವ ಬಜೆಟ್​​​ನಲ್ಲಿ ನಿಮ್ಮ ಸಮುದಾಯದ ಅಭಿವೃದ್ಧಿಗೆ ಹತ್ತು ಕೋಟಿ ತೆಗೆದಿಡುತ್ತೇನೆ‌," ಎಂದು ಹೇಳಿದರು.

ಗಂಗಾಮತ ಸಮಾಜವನ್ನು ಎಸ್​​ಟಿಗೆ ಸೇರಿಸಬೇಕು ಎಂಬ ಬಹು ದಿನದ ಬೇಡಿಕೆ ಇದೆ. ಈ ಬಗ್ಗೆ ಕೇಂದ್ರದಲ್ಲಿ ಚರ್ಚೆ ಆಗುತ್ತಿದೆ. ನಿಮ್ಮನ್ನು ಎಸ್ಟಿ ಸಮಾಜಕ್ಕೆ ಸೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ರಿಶ್ಚಿಯನ್ ಸಮುದಾಯದ ಕಾರ್ಯಕ್ರಮ ಮುಗಿಸಿಕೊಂಡು ಬಂದಿದ್ದೇನೆ. ಎಲ್ಲಾ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕೆಂಬ ಹಂಬಲ ಇದೆ. ನಾಡಿನ ಅಭಿವೃದ್ಧಿಗೆ ನಿಮ್ಮ ಸಹಕಾರ ಇರಲಿ. ಇದ್ದರೆ ಇನ್ನಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ‌ ಎಂದರು.‘ನಿರಾಣಿಗೆ ಮಂತ್ರಿ ಸ್ಥಾನ ನೀಡಿ ಉಳಿದ ಪಂಚಮಸಾಲಿ ಮುಖಂಡರು ಕತ್ತೆ ಕಾಯಲು ಹೋಗಬೇಕಾ?‘: ಯತ್ನಾಳ್​​

 
First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ