HOME » NEWS » State » CM BS YEDIYURAPPA REACTS ABOUT CD LADY ON RAMESH JARKIHOLI SEX CD CASE SAKLB LG

ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ಏನು ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ; ಕಾನೂನಿನ ಪ್ರಕಾರ ಕ್ರಮ; ಸಿಎಂ ಯಡಿಯೂರಪ್ಪ

ಜಾರಕಿಹೊಳಿ ಸಿಡಿ ಕೇಸ್ ಸಂಬಂಧ ಯುವತಿ ನ್ಯಾಯಾಧೀಶರೆದುರು ಹಾಜರಾಗಿದ್ದಾರೆ. ಯುವತಿ ಸದ್ಯ ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅವರೇನು ಹೇಳಿಕೆ ನೀಡಿದ್ದಾರೆ‌ ನನಗೆ ಗೊತ್ತಿಲ್ಲ.  ಎಲ್ಲವನ್ನು ತಿಳಿದುಕೊಂಡು ಕಾನೂನು ಪ್ರಕಾರ ಕ್ರಮ  ಕೈಗೊಳ್ಳುತ್ತೇನೆ ಎಂದರು.

news18-kannada
Updated:March 30, 2021, 9:58 PM IST
ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ಏನು ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ; ಕಾನೂನಿನ ಪ್ರಕಾರ ಕ್ರಮ; ಸಿಎಂ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ
  • Share this:
ಹುಬ್ಬಳ್ಳಿ(ಮಾ.30):  ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣದ ಕುರಿತು ಯುವತಿ ನ್ಯಾಯಾಧೀಶರ ಮುಂದೆ ಏನು ಹೇಳಿದ್ದಾರೋ ಗೊತ್ತಿಲ್ಲ. ಆದರೆ ಎಲ್ಲವನ್ನೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳೋದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಜಾರಕಿಹೊಳಿ ಸಿಡಿ ಕೇಸ್ ಸಂಬಂಧ ಯುವತಿ ನ್ಯಾಯಾಧೀಶರೆದುರು ಹಾಜರಾಗಿದ್ದಾರೆ. ಯುವತಿ ಸದ್ಯ ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅವರೇನು ಹೇಳಿಕೆ ನೀಡಿದ್ದಾರೆ‌ ನನಗೆ ಗೊತ್ತಿಲ್ಲ.  ಎಲ್ಲವನ್ನು ತಿಳಿದುಕೊಂಡು ಕಾನೂನು ಪ್ರಕಾರ ಕ್ರಮ  ಕೈಗೊಳ್ಳುತ್ತೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಉಪಚುನಾವಣೆ ಬಳಿಕ ಈ ಆ ಬಗ್ಗೆ ನಿರ್ಧರಿಸುತ್ತೇವೆ. ಮೂರು ಕ್ಷೇತ್ರಗಳಲ್ಲಿ ಗೆಲವು ಸಾಧಿಸುತ್ತೇವೆ‌. ಬೆಳಗಾವಿಯಲ್ಲಿ 2.5 ಲಕ್ಷ ಮತಗಳ ಅಂತರದ ಗೆಲವು ಸಾಧಿಸುತ್ತಾರೆ. ನಾನು ಮತ್ತೆ ಏಪ್ರಿಲ್ 7ರಂದು ಬರುತ್ತೇನೆ. ನಾಳೆ ಬೆಳಿಗ್ಗೆ ಬೆಂಗಳೂರಿಗೆ ಹೋಗೋದಿತ್ತು. ಕಾರಣಾಂತರದಿಂದ ಇವಾಗ ಹೊರಟಿದ್ದೆನೆ. ಅದರಲ್ಲೆನು ವಿಶೇಷವಿಲ್ಲ ಎಂದು ತಮ್ಮ ಟಿಪಿ ಬದಲಾವಣೆ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

Explainer: ನೆಟ್​ಫ್ಲಿಕ್ಸ್​​ ಅಧಿಪತ್ಯಕ್ಕೆ ಪಾಸ್​ವರ್ಡ್​ ಶೇರಿಂಗ್​ ಸವಾಲು...!

ವಿಧಾನಸೌಧದಲ್ಲಿ ಕೃಷಿ ಉತ್ಪನ್ನ ಮಾರೋಕೆ ಟಿಕಾಯತ್ ಕರೆ

ಕೃಷಿ ಉತ್ಪನ್ನಗಳನ್ನು ವಿಧಾನಸಭೆಯ ಮುಂದೆ ಮಾರುವಂತೆ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ರಾಕೇಶ್ ಟಿಕಾಯತ್ ರೈತರಿಗೆ ಕರೆ ನೀಡಿದ್ದಾರೆ. ಹುಬ್ಬಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಚೆನ್ನಮ್ಮ ವೃತ್ತಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಎಲ್ಲಿ ಒಳ್ಳೆಯ ದರ ಎಲ್ಲಿ ಸಿಗುತ್ತೋ ಅಲ್ಲಿ ಮಾರುತ್ತೇವೆ. ನಾವು ಎಲ್ಲಿಯೂ ಕಾನೂನನ್ನು ಕೈಗೆತ್ತಿಕೊಂಡಿಲ್ಲ ಎಂದರು.

ನಾನು ಬಂಬಲ ಬೆಲೆಗೆ ಕೃಷಿ ಉತ್ಪನ್ನಗಳನ್ನು ಮಾರಿ ಎಂದು ಹೇಳಿದ್ದೇನೆ. ಕಾನೂನನ್ನು ಮುರೀಲಿಕ್ಕೆ ಹೇಳಿಲ್ಲ. ಎಲ್ಲ ಕೃಷಿ ಉತ್ಪನ್ನಗಳಿಗೆ ಸಾಮಾನ್ಯ ಕನಿಷ್ಠ ದರ ಕೇಳ್ತಿದ್ದೇವೆ. ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಅದನ್ನು ಕೊಟ್ಟರೆ ನಮ್ಮ ಹೋರಾಟವನ್ನೂ ವಾಪಸ್ ಪಡೆಯುತ್ತೇವೆ. ಆದ್ರೆ ಕೇಂದ್ರ ಸರ್ಕಾರ ಅದನ್ನ ಕೊಡೋಕೆ ರೆಡಿ ಇಲ್ಲ. ಬದಲಿಗೆ ರೈತರ ಹೋರಾಟ ಹತ್ತಿಕ್ಕಲು ನೋಡುತ್ತಿದೆ. ಪ್ರಧಾನಿ ಮೋದಿಯೇ ಹೇಳಿದ್ದಾರೆ. ಎಲ್ಲಿ ಉತ್ತಮ ದರ ಸಿಗುತ್ತೋ ಅಲ್ಲಿ ಕೃಷಿ ಉತ್ಪನ್ನಗಳನ್ನು ಮಾರಿ ಎಂದಿದ್ದಾರೆ.

ಹೀಗಾಗಿ ವಿಧಾನಸಭೆಯಲ್ಲಿ ಉತ್ತಮ ದರ ಸಿಕ್ಕರೆ ಅಲ್ಲಿಯೇ ನಾವು ಮಾರಲು ಸಿದ್ಧ. ವಿಧಾನಭೆಯಲ್ಲಿ ಮಾರೋಕೆ ಏನಾದ್ರೂ ತೊಂದರೆ ಇದೆಯಾ ಎಂದು ರಾಕೇಶ್ ಟಿಕಾಯತ್ ಪ್ರಶ್ನಿಸಿದ್ದಾರೆ. ಚುನಾವಣೆ ನಡೀತಿರೋ ಕಡೆ ಮಾತ್ರ ನಮ್ಮ ಗಮನವಿಲ್ಲ. ದೇಶದ ಎಲ್ಲಾ ಕಡೆಯೂ ನಮ್ಮ ಹೋರಾಟ ಕೇಂದ್ರೀಕರಿಸಿದ್ದೇವೆ. ರೈತರಿಗೆ ನ್ಯಾಯ ಸಿಗಬೇಕೆಂದು ಹೋರಾಟ ಮಾಡುತ್ತಿದ್ದೇವೆ. ಪಶ್ಚಿಮ ಬಂಗಾಳ ಸೇರಿ ಚನಾವಣೆ ನಡೀತಿರೋ ರಾಜ್ಯಗಳಲ್ಲಿ ಹೋರಾಟ ಮಾಡ್ತಿದ್ದೇವೆ. ಮತ್ತಿತರ ರಾಜ್ಯಗಳಲ್ಲಿಯೂ ನಮ್ಮ  ಗಮನ ಕೇಂದ್ರೀಕರಿಸಿದ್ದೇವೆ ಎಂದು ರಾಕೇಶ್ ಟಿಕಾಯತ್ ತಿಳಿಸಿದರು.
Youtube Video

ಇದೇ ವೇಳೆ ಮಾತನಾಡಿದ ಯುದ್ಧವೀರ್ ಸಿಂಗ್, ಕರ್ನಾಟಕದಲ್ಲಿಯೂ ರೈತರ ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ಬರ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
Published by: Latha CG
First published: March 30, 2021, 9:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories