ಸವಾಲು​ಗಳು ನನಗೆ ಹೊಸದಲ್ಲ, ಇದರಿಂದ ಕೆಲಸ ಮಾಡಲು ಇನ್ನಷ್ಟು ಹುಮ್ಮಸ್ಸು ಸಿಗುತ್ತದೆ; ಬಿಎಸ್​ ಯಡಿಯೂರಪ್ಪ

ತಮ್ಮ ತಮ್ಮ ಸಮುದಾಯಗಳಿಗೆ ನ್ಯಾಯ ಕೇಳುತ್ತಿದ್ದಾರೆ. ಕೇಳುವುದು ಅವರ ಹಕ್ಕು. ಅವುಗಳನ್ನು ಎಲ್ಲಾ ಪರಿಶೀಲಿಸುತ್ತೇನೆ

ಬಿಎಸ್​ ಯಡಿಯೂರಪ್ಪ

ಬಿಎಸ್​ ಯಡಿಯೂರಪ್ಪ

  • Share this:
ಮೈಸೂರು (ಫೆ. 13):  ಮೀಸಲಾತಿ ಹೆಚ್ಚಳ ಹಾಗೂ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಕುರುಬರು, ಲಿಂಗಾಯಿತ ಪಂಚಮಸಾಲಿ, ವಾಲ್ಮೀಕಿ ಸೇರಿದಂತೆ ವಿವಿಧ ಸಮುದಾಯಗಳು ಆಗ್ರಹಿಸುತ್ತಿವೆ . ಅಲ್ಲದೇ ಸಮಾವೇಶಗಳನ್ನು ನಡೆಸುವ ಮೂಲಕ ಬೃಹತ್​ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಸಮುದಾಯಗಳ ಮೀಸಲಾತಿ ಆಗ್ರಹ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೆಚ್ಚಿಸುವ ತಂತ್ರವಾಗಿ  ರೂಪುಗೊಂಡಿದೆ. ಈ ಎಲ್ಲಾ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಈ ಎಲ್ಲವನ್ನು ನಾನು ನಿಭಾಯಿಸುತ್ತೇನೆ. ಎಲ್ಲರಿಗೂ ನ್ಯಾಯ ಒದಗಿಸಲು ಯತ್ನಿಸುತ್ತೇನೆ. ನನಗೆ ಇಂತಹ ಸವಾಲುಗಳು ಹೊಸದಲ್ಲ. ಸವಾಲುಗಳು ಬಂದಾಗ ನನಗೆ ಖುಷಿಯಾಗುತ್ತದೆ. ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುತ್ತೇನೆ ಎಂದರು. 

ನಗರದಲ್ಲಿ ಮಾತನಾಡಿದ ಅವರು, ತಮ್ಮ ತಮ್ಮ ಸಮುದಾಯಗಳಿಗೆ ನ್ಯಾಯ ಕೇಳುತ್ತಿದ್ದಾರೆ. ಕೇಳುವುದು ಅವರ ಹಕ್ಕು. ಅವುಗಳನ್ನು ಎಲ್ಲಾ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.

ಇದನ್ನು ಓದಿ: ಸಂಗೀತ ಕಾರ್ಯಕ್ರಮದಲ್ಲಿ ಹೆಜ್ಜೆಹಾಕಿದ ಡಿಕೆ ಶಿವಕುಮಾರ್​ ಮಗಳು ಐಶ್ವರ್ಯಾ

ಬಜೆಟ್ ಸಿದ್ಧತಾ ಸಭೆಗಳು ನಡೆಯುತ್ತಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿದೆ. ಇನ್ನು ಎರಡು ದಿನಗಳಲ್ಲಿ ಪೂರ್ವಭಾವಿ ಸಭೆಗಳು ಮುಕ್ತಾಯ ಆಗಲಿವೆ. ಹಣಕಾಸಿನ ಸ್ಥಿತಿ ನಡುವೆ ಮಂತ್ರಿ ಹಾಗೂ ಅಧಿಕಾರಿಗಳ ಜತೆ ಚರ್ಚಿಸಿ ಬಜೆಟ್ ಮಂಡಿಸುವೆ. ಟೀಕೆ ಮಾಡುವವರಿಗೆ ಬಜೆಟ್ ಉತ್ತರ ಸಿಗಲಿದೆ ಎಂದು ಇದೇ ವೇಳೆ ತಿಳಿಸಿದರು.

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ ಎಂಬ ವಿಪಕ್ಷ ನಾಯಕರ ಟೀಕೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಯಾವುದೇ ಕೆಲಸಗಳು ನಿಂತಿಲ್ಲ. ವಿರೋಧ ಪಕ್ಷಗಳ ಟೀಕೆಗೆ ಉತ್ತರ ಕೊಡಲ್ಲ. ಇದೇ ವೇಳೆ ಬಜೆಟ್​ನಲ್ಲಿ ಮೈಸೂರು ವಿಮಾನ ನಿಲ್ದಾಣದ  ಅಗಲೀಕರಣಕ್ಕೆ ಆದ್ಯತೆ ನೀಡುವ ಉದ್ದೇಶವಿದೆ ಎಂದರು.

ಕಾಶಪ್ಪನವರಿಗೆ ತಿರುಗೇಟು ನೀಡಿದ ವಿಜಯೇಂದ್ರ

ಲಿಂಗಾಯಿತ ಸ್ವಾಮೀಜಿಗಳನ್ನ ಒಂದು ಕಡೆ ಸೇರಿಸುತ್ತಿರುವುದು ಸಿಎಂ ಪುತ್ರ ವಿಜಯೇಂದ್ರ ಎಂಬ ವಿಜಯಾನಂದ ಕಾಶಪ್ಪನವರ್ ಆರೋಪಕ್ಕೆ ತಿರುಗೇಟು ನೀಡಿದ   ಕಾಶಪ್ಪನವರ್ ಅಂದ್ರೆ ಯಾರು ?ಮಾಜಿ ಶಾಸಕನಾ ಅಥವಾ ಬಾರಲ್ಲಿ ಕುಳಿತು ಗಲಾಟೆ ಮಾಡಿಕೊಂಡನಲ್ಲ ಅವರಾ ಅಂತ ಪ್ರಶ್ನೆ ಮಾಡಿದರು. ಮುಂದುವರೆದು ಮಾತನಾಡಿದ ಅವರು,  ಎಲ್ಲ ಸಮುದಾಯಗಳಿಗೂ ಮೀಸಲಾತಿ ಕೇಳುವ ಹಕ್ಕಿದೆ ಎಲ್ಲರೂ ಕೇಳಲಿ. ಅದೇ ರೀತಿ ಸವಾಲುಗಳನ್ನೂ ನಿಭಾಯಿಸುವ ಶಕ್ತಿಯೂ ಯಡಿಯೂರಪ್ಪ ಅವರಿಗೆ ಇದೆ. ಯಾರೋ ಹಾದಿ ಬೀದಿಯಲ್ಲಿ ನಿಂತು ಏನೇನೋ ಹೇಳಿಕೆ ನೀಡಬಾರದು. ಯಾರ ಯೋಗ್ಯತೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ.

ನಾನು ಪಕ್ಷದ, ಉಪಾಧ್ಯಕ್ಷನಾಗಿ ನನ್ನ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾವ ಹೋರಾಟವನ್ನೂ ದಿಕ್ಕುತಪ್ಪಿಸುವ ಕೆಲಸ ಮಾಡಿಲ್ಲ ಅದು ನನಗೆ ಸಂಬಂಧಪಟ್ಟ ವಿಚಾರವೂ ಅಲ್ಲ. ಯಡಿಯೂರಪ್ಪ ಅವರು ಯಾವ ಸಮುದಾಯವನ್ನೂ ಹೊಡೆಯುವುದಿಲ್ಲ ಎಲ್ಲರಿಗೂ ನ್ಯಾಯ ದೊರಕಿಸುವ ಶಕ್ತಿ, ರಾಜಕೀಯ ಅನುಭವ ಅವರಿಗೆ ಇದೆ ಎಂದು ತಿಳಿಸಿದರು

ಇದೇ ವೇಳೆ ಮೀಸಲಾತಿ ಹೋರಾಟಗಳು ರಾಜಕೀಯ ಲಾಭಕ್ಕೆ ಬಳಕೆಯಾಗುತ್ತಿವೆ ಎಂದು ಅವರು ಗಂಭೀರ ಆರೋಪ ಮಾಡಿದರು. ಸ್ವಾಮೀಜಿಗಳು ಮೀಸಲಾತಿ ಹೋರಾಟ ಮಾಡುವುದಕ್ಕೆ ನಮ್ಮ ತಕರಾರು ಇಲ್ಲ, ತಮ್ಮ ಸಮುದಾಯಗಳ ಪರವಾಗಿ ಹೋರಾಟ ಮಾಡುವುದು ಸರಿಯಾಗಿಯೇ ಇದೆ.  ಆದರೆ, ಕೆಲವರು ಮೀಸಲಾತಿ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ, ತಮ್ಮ ಅಸ್ತಿತ್ವಕ್ಕೆ ಮಾಯವಾಗಿರುವ ಕೆಲವರು ಈ ಹೋರಾಟಗಳಿಂದ ತಮ್ಮ  ಪುನರ್ ಸಂಪಾದಿಸಲು ನೋಡುತ್ತಿದ್ದಾರೆ ಇದು ಬೇಸರದ ಸಂಗತಿಯಾಗಿದೆ ಎಂದರು.
Published by:Seema R
First published: