ಉಪಚುನಾವಣೆಯಲ್ಲಿ ಸೋತರೂ ಎಂಟಿಬಿ ನಾಗರಾಜ್​​ ಮತ್ತು ಎಚ್​ ವಿಶ್ವನಾಥ್​​ ಕೈಬಿಡದ ಸಿಎಂ ಬಿಎಸ್​ವೈ; ಎಂಎಲ್​​ಸಿ ಸ್ಥಾನ ಪಕ್ಕಾ?

ಈ ಬಾರಿಯ ಉಪಚುನಾವಣೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಕ್ಷೇತ್ರಗಳಲ್ಲಿ ಹೊಸಕೋಟೆ ಮತ್ತು ಹುಣಸೂರು ಕೂಡ ಇವೆ. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಿಬ್ಬರೂ ಸೋಲನುಭವಿಸಿದ್ಧಾರೆ.

news18-kannada
Updated:December 11, 2019, 5:37 PM IST
ಉಪಚುನಾವಣೆಯಲ್ಲಿ ಸೋತರೂ ಎಂಟಿಬಿ ನಾಗರಾಜ್​​ ಮತ್ತು ಎಚ್​ ವಿಶ್ವನಾಥ್​​ ಕೈಬಿಡದ ಸಿಎಂ ಬಿಎಸ್​ವೈ; ಎಂಎಲ್​​ಸಿ ಸ್ಥಾನ ಪಕ್ಕಾ?
ಹೆಚ್​ ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್​​​​
  • Share this:
ಬೆಂಗಳೂರು(ಡಿ.11): ಕರ್ನಾಟಕ ವಿಧಾನಸಭಾ ಉಪಚುನಾವಣೆಯಲ್ಲಿ ಹೀನಾಯ ಸೋಲುಂಡ ಮಾಜಿ ಸಚಿವ ಎಂಟಿಬಿ ನಾಗರಾಜ್​​ ಮತ್ತು ಮಾಜಿ ಶಾಸಕ ಎಚ್.​​ ವಿಶ್ವನಾಥ್​​ರನ್ನು​ ಪರಿಷತ್​​ ಸದಸ್ಯರನ್ನಾಗಿಸಲು ಸಿಎಂ ಬಿ.ಎಸ್​​ ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ಸರ್ಕಾರ ಬೀಳಿಸಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೇರಿಸುವಲ್ಲಿ ಎಂಟಿಬಿ ನಾಗರಾಜ್​​ ಮತ್ತು ಎಚ್​​. ವಿಶ್ವನಾಥ್​​​​ ಪ್ರಮುಖ ಪಾತ್ರವಹಿಸಿದ್ದರು. ಹಾಗಾಗಿ ಈ ಇಬ್ಬರೂ ಚುನಾವಣೆಯಲ್ಲಿ ಸೋತರು ಸಚಿವರನ್ನಾಗಿಸಲೇಬೇಕೆಂದು ಮುಂದಾಗಿರುವ ಸಿಎಂ ಬಿ.ಎಸ್​​ ಯಡಿಯೂರಪ್ಪ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಧಾನಸಭಾ ಉಪಚುನಾವಣೆಯಲ್ಲಿ ಸೋತ ಕೂಡಲೇ ಕೈಕೊಡದೆ ಇಬ್ಬರನ್ನೂ ಪರಿಷತ್​​ ಸದಸ್ಯರನ್ನು ಮಾಡಲೊರಟಿದ್ದಾರೆ ಎನ್ನುತ್ತಿವೆ ಉನ್ನತ ಮೂಲಗಳು.

ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ವಿಧಾನ ಪರಿಷತ್​​ನ ಇಬ್ಬರು ಹಾಲಿ ಸದಸ್ಯರಿಂದ ರಾಜೀನಾಮೆ ಕೊಡಿಸಲಿದ್ದಾರಂತೆ. ಮೂಲಗಳ ಪ್ರಕಾರ ರವಿಕುಮಾರ್ ಮತ್ತು ತೇಜಸ್ವಿನಿ ರಮೇಶ್‌ಗೌಡ ರಾಜೀನಾಮೆ ನೀಡಲಿದ್ಧಾರೆ ಎನ್ನಲಾಗುತ್ತಿದೆ. ಬಳಿಕ ಇವರ ಸ್ಥಾನಕ್ಕೆ ಮಾಜಿ ಶಾಸಕರಾದ ಎಂಟಿಬಿ ನಾಗರಾಜ್ ಮತ್ತು ಎಚ್​​. ವಿಶ್ವನಾಥ್​​​ರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರಲಿದ್ದಾರೆ.​​ ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚಿರುವ ಕಾರಣ ಇಬ್ಬರನ್ನೂ ಸುಲಭವಾಗಿ ಗೆಲ್ಲಿಸಿಕೊಂಡು ಮೇಲ್ಮನೆ ಸದಸ್ಯರನ್ನಾಗಿಸಬಹುದು ಎಂಬುದು ಲೆಕ್ಕಚಾರ.

ಈ ಬಾರಿಯ ಉಪಚುನಾವಣೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಕ್ಷೇತ್ರಗಳಲ್ಲಿ ಹೊಸಕೋಟೆ ಮತ್ತು ಹುಣಸೂರು ಕೂಡ ಇವೆ. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಿಬ್ಬರೂ ಸೋಲನುಭವಿಸಿದ್ಧಾರೆ. ಕರ್ನಾಟಕ ರಾಜಕಾರಣಿಗಳ ಪೈಕಿ ಅತೀ ಹೆಚ್ಚು ಘೋಷಿತ ಆದಾಯ ಇರುವ ಅಭ್ಯರ್ಥಿಗಳಲ್ಲಿ ಎಂಟಿಬಿ ನಾಗರಾಜ್ ಕೂಡ ಒಬ್ಬರು. ಇವರು ಹೊಸಕೋಟೆಯಲ್ಲಿ ಸೋಲನುಭವಿಸಿದ್ದಾರೆ. ಇಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದಿದ್ದ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ಧಾರೆ.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಮಸೂದೆ ಭೀತಿ; ಮುನ್ನೆಚ್ಚರಿಕಾ ಕ್ರಮ; ಕರ್ನಾಟಕ ಮಸೀದಿಗಳಲ್ಲಿ ಮುಸ್ಲಿಮರ ದಾಖಲಾತಿ ಪರಿಶೀಲನೆ

ಹುಣಸೂರಿನಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ತ್ರಿಕೋನ ಹಣಾಹಣಿ ನಡೆದಿದೆ. ಆದರೆ, ಇಲ್ಲಿ ಕಾಂಗ್ರೆಸ್ ಪಕ್ಷದ ಹೆಚ್.ಪಿ. ಮಂಜುನಾಥ್ ಗೆದ್ದಿದ್ಧಾರೆ. ಹೆಚ್. ವಿಶ್ವನಾಥ್ ಅವರು ಎರಡನೇ ಸ್ಥಾನಕ್ಕಾಗಿ ಇಲ್ಲಿ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಿನ ಸುಳಿವು ಮೊದಲೇ ಸಿಕ್ಕಿತ್ತಾ ಎಂದು ಅನುಮಾನ ಮೂಡಿಸುವ ಬೆಳವಣಿಗೆ ಇತ್ತೀಚೆಗೆ ಕಂಡು ಬಂದಿದ್ದವು. ಹೊಸಕೋಟೆಯ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ತಾನು ಸೋತರೆ ಅದಕ್ಕೆ ಬಚ್ಚೇಗೌಡರೇ ಕಾರಣ ಎಂಬಂತಹ ಮಾತುಗಳನ್ನಾಡಿದ್ದರು. ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರ ತಂದೆ ಮತ್ತು ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಅವರು ತಮ್ಮ ಪರವಾಗಿ ಕೆಲಸ ಮಾಡಿಲ್ಲ ಎಂದು ಎಂಟಿಬಿ ದೂರಿದ್ದರು.

ಇದನ್ನೂ ಓದಿ: ನೇಣಿಗೆ ಹಾಕುವ ಕೆಲಸದಲ್ಲಿ ದಾಖಲೆ ಬರೆದಿರುವ ನಾಟಾ ಮಲ್ಲಿಕ್ ನೇಣಿನ ಹಗ್ಗದಿಂದಲೂ ಕೈತುಂಬಾ ಹಣ ಸಂಪಾದಿಸಿದ್ದು ಹೇಗೆ ಗೊತ್ತಾ?ಇನ್ನು, ಹುಣಸೂರಿನಲ್ಲೂ ಹೆಚ್. ವಿಶ್ವನಾಥ್ ಅವರಿಗೆ ಸೋಲಿನ ಹಣೆಬರಹ ಕಾಣಿಸಿದ್ದಂತಿತ್ತು. ಇದಕ್ಕೆ ಅವರ ಇತ್ತೀಚಿನ ಹೇಳಿಕೆಗಳೇ ಸಾಕ್ಷಿ. ಕಾಂಗ್ರೆಸ್ ಪಕ್ಷವನ್ನು ಬಿಟ್ಟಾಗಿನಿಂದಲೂ ಸಿದ್ದರಾಮಯ್ಯರನ್ನು ನಿರಂತರವಾಗಿ ಟೀಕಿಸುತ್ತಾ ಬರುತ್ತಿದ್ದ ವಿಶ್ವನಾಥ್ ಇತ್ತೀಚೆಗೆ ಸಿದ್ದರಾಮಯ್ಯರ ಬಗ್ಗೆ ಸಕರಾತ್ಮಕವಾಗಿ ಮಾತನಾಡುತ್ತಿದ್ದರು. ಸಿದ್ದರಾಮಯ್ಯ ರಾಜಕೀಯವಾಗಿ ಏನೇ ಇದ್ದರೂ ವೈಯಕ್ತಿಕವಾಗಿ ಬಹಳ ಶಿಸ್ತಿನ ಮನುಷ್ಯ, ಭ್ರಷ್ಟರಹಿತ ರಾಜಕಾರಣಿ ಎಂದೆಲ್ಲಾ ಹೊಗಳಿದ್ದರು. ಸಿದ್ದರಾಮಯ್ಯರನ್ನು ಟೀಕಿಸಿದರೆ ಕುರುಬರ ವೋಟು ಕೈತಪ್ಪಿಹೋಗಬಹುದೆಂಬ ಭೀತಿ ಅವರನ್ನು ಕಾಡಿದಂತಿತ್ತು.
First published: December 11, 2019, 5:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading