ಕರ್ನಾಟಕ ಉಪಚುನಾವಣೆ; ‘ಕಾಂಗ್ರೆಸ್​​​-ಜೆಡಿಎಸ್​​ಗೆ ತಲಾ ಒಂದು ಸ್ಥಾನ, ಬಿಜೆಪಿ 13 ಕ್ಷೇತ್ರ ಗೆಲ್ಲಲಿದೆ‘ ಎಂದ ಸಿಎಂ ಬಿಎಸ್​​ವೈ

ಫಲಿತಾಂಶದ ಬಳಿಕವೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಲಿದೆ. ಕಾಂಗ್ರೆಸ್​​ ವಿರೋಧ ಪಕ್ಷ ಸ್ಥಾನದಲ್ಲೇ ಮುಂದುವರೆಯಲಿದೆ. ಇನ್ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.


Updated:December 8, 2019, 4:33 PM IST
ಕರ್ನಾಟಕ ಉಪಚುನಾವಣೆ; ‘ಕಾಂಗ್ರೆಸ್​​​-ಜೆಡಿಎಸ್​​ಗೆ ತಲಾ ಒಂದು ಸ್ಥಾನ, ಬಿಜೆಪಿ 13 ಕ್ಷೇತ್ರ ಗೆಲ್ಲಲಿದೆ‘ ಎಂದ ಸಿಎಂ ಬಿಎಸ್​​ವೈ
ಸಿಎಂ ಬಿ.ಎಸ್.ಯಡಿಯೂರಪ್ಪ
  • Share this:
ಬೆಂಗಳೂರು(ಡಿ.08): ಕರ್ನಾಟಕ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವೂ 13 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಹಾಗೆಯೇ ಕಾಂಗ್ರೆಸ್ ಮತ್ತು​ ಜೆಡಿಎಸ್​​ಗೆ ತಲಾ ಒಂದು ಸ್ಥಾನ ಸಿಗಲಿದೆ ಎಂದು ಸಿಎಂ ಭವಿಷ್ಯ ನುಡಿದರು.

ಇಂದು ಶಿವಮೊಗ್ಗದ ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಬಿ.ಎಸ್​ ಯಡಿಯೂರಪ್ಪ, ನಮ್ಮ ಸರ್ಕಾರ ಇನ್ನೂ ಮೂರು ವರ್ಷ ಸುಭದ್ರವಾಗಿರಲಿದೆ. ನನ್ನೊಂದಿಗೆ ರಾಜ್ಯ ಬಿಜೆಪಿ ನಾಯಕರು 15 ಕ್ಷೇತ್ರಗಳಲ್ಲೂ ಎರಡೆರಡು ಬಾರಿ ಪ್ರಚಾರ ಮಾಡಿದ್ದೇವೆ. ಹಾಗಾಗಿ 13 ಕ್ಷೇತ್ರಗಳಲ್ಲಿ ಮಾತ್ರ ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ ಎಂದು ಹೇಳಿದರು.

ಅನರ್ಹ ಶಾಸಕರಿಗೆ ಬಹುಪಾಲು ಮಂತ್ರಿ ಸ್ಥಾನ ನೀಡಲಿದ್ದೇವೆ. ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್​​ ನಿರ್ಧಾರ ತೆಗೆದುಕೊಳ್ಳಲಿದೆ. ಉಳಿದ ಮೂರು ವರ್ಷಗಳ ಕಾಲ ಸ್ಥಿರ ಸರ್ಕಾರ ನೀಡುವುದಷ್ಟೇ ನನ್ನ ಜವಾಬ್ದಾರಿ. ಆದ್ದರಿಂದ ನಮ್ಮ ಸರ್ಕಾರ​​ ಉತ್ತಮ ಆಡಳಿತ ನಡೆಸಲು ಕಾಂಗ್ರೆಸ್​-ಜೆಡಿಎಸ್​​​​​ ಸಹಕಾರ ನೀಡಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದರು.

ಡಿಸೆಂಬರ್​​ 9ನೇ ತಾರೀಕಿನ ಬಳಿಕ ಸಿಹಿ ಹಂಚುತ್ತೇವೆ ಎಂದಿದ್ದ ಕಾಂಗ್ರೆಸ್​ ನಾಯಕರ ಹೇಳಿಕೆ ಬಗ್ಗೆಯೂ ಸಿಎಂ ಬಿ.ಎಸ್​​ ಯಡಿಯೂರಪ್ಪ ಪ್ರತಿಕ್ರಿಯಿಸಿದರು. ಫಲಿತಾಂಶದ ಬಳಿಕವೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಲಿದೆ. ಕಾಂಗ್ರೆಸ್​​ ವಿರೋಧ ಪಕ್ಷ ಸ್ಥಾನದಲ್ಲೇ ಮುಂದುವರೆಯಲಿದೆ. ಇನ್ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲಎಂಬ ಈಶ್ವರಪ್ಪ ಹೇಳಿಕೆಗೆ ಟಾಂಗ್ ನೀಡಿದ ಎಸ್.ಟಿ. ಸೋಮಶೇಖರ್

ಈಗಾಗಲೇ ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ. ಇದರ ಫಲಿತಾಂಶ ನಾಳೆ ಸೋಮವಾರ ಹೊರ ಬೀಳಲಿದೆ. ಆಡಳಿತರೂಢ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಮೂರೂ ಪಕ್ಷಗಳ ಪಾಲಿಗೆ ಇದು ಅತ್ಯಂತ ಮಹತ್ವದ ಚುನಾವಣೆಯಾಗಿದೆ. ಹೀಗಾಗಿ ಫಲಿತಾಂಶ ನಮಗೆ ಸಾಧಕವಾಗಿ ಬರಲಿ ಎಂಬ ಕಾರಣಕ್ಕೆ ಮೂರೂ ಪಕ್ಷದ ನಾಯಕರು ದೇವರ ಮೊರೆ ಹೋಗುತ್ತಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಕೊನೆಯ ಕಸರತ್ತಿಗೆ ಮುಂದಾದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಈ ಬೆನ್ನಲೇ ಜೆಡಿಎಸ್​​ನ ಮಾಜಿ ಪ್ರಧಾನಿ ದೇವೇಗೌಡರು ದೇವಾಲಯಕ್ಕೆ ಹೋಗಿದ್ದಾರೆ.
First published: December 8, 2019, 4:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading