ಕಾಂಗ್ರೆಸ್​​ ಶಾಸಕ ತನ್ವೀರ್​​ ಸೇಠ್​​ಗೆ ಚಾಕು ಇರಿತ: ಶೀಘ್ರ ಗುಣಮುಖರಾಗಲಿ ಎಂದ ಸಿಎಂ ಯಡಿಯೂರಪ್ಪ

ಈ ಕೊಲೆ ಯತ್ನ ಮಾಡಲು ವೈಯಕ್ತಿಕ ದ್ವೇಷ ಕಾರಣ ಎಂದು ಫರಾನ್​ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಮೊದಲು ಸಾಕಷ್ಟು ಬಾರಿ ತನ್ವೀರ್​ ಜೊತೆ ಫರಾನ್​ ಕಾಣಿಸಿಕೊಂಡಿದ್ದ.

news18-kannada
Updated:November 18, 2019, 7:09 PM IST
ಕಾಂಗ್ರೆಸ್​​ ಶಾಸಕ ತನ್ವೀರ್​​ ಸೇಠ್​​ಗೆ ಚಾಕು ಇರಿತ: ಶೀಘ್ರ ಗುಣಮುಖರಾಗಲಿ ಎಂದ ಸಿಎಂ ಯಡಿಯೂರಪ್ಪ
ಸಿಎಂ ಬಿ.ಎಸ್​​ ಯಡಿಯೂರಪ್ಪ, ತನ್ವೀರ್​​ ಸೇಠ್​​
  • Share this:
ಬೆಂಗಳೂರು(ನ.18): ಕಾಂಗ್ರೆಸ್​ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆಯಾದ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. "ತನ್ವೀರ್​​ ಸೇಠ್​​ ಮೇಲೆ ಹಲ್ಲೆ ಖಂಡನೀಯ. ಈ ಸುದ್ದಿ ನನಗೆ ಅತೀವ ನೋವುಂಟು ಮಾಡಿದೆ. ಮೈಸೂರು ಜಿಲ್ಲಾಧಿಕಾರಿ ಮತ್ತು ಪೊಲೀಸರ ಜತೆ ಸಂಪರ್ಕದಲಿದ್ದೇನೆ. ಶಾಸಕರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದು ಸಿಎಂ ನ್ಯೂಸ್​​-18 ಕನ್ನಡಕ್ಕೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕೂಡಲೇ ಮೈಸೂರಿಗೆ ತೆರಳಿ ತನ್ವೀರ್ ಸೇಠ್ ಆರೋಗ್ಯ ವಿಚಾರಿ ಎಂದು ಸೂಚಿಸಿದ್ದೇನೆ. ಇವರ ಚಿಕಿತ್ಸೆಯ ಸಂಪೂರ್ಣ ವೆಚ್ಚ ನಮ್ಮ ಸರ್ಕಾರವೇ ಭರಿಸಲಿದೆ. ತನ್ವೀರ್ ಸೇಠ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ಪ್ರಾರ್ಥಿಸಿದರು.

ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿರುವ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್​ ಆರೋಗ್ಯ ಸ್ಥಿತಿ ಗಂಭಿರವಾಗಿದೆ. ಇನ್ನೂ 48 ಗಂಟೆ ಏನನ್ನೂ ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಸೇಠ್​​ ಹಿಂಬಾಲಕರಲ್ಲಿ ಆತಂಕ ಮೂಡಿಸಿದೆ. ಇಂದು ಬೆಳಗ್ಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆ ತನ್ವೀರ್​ ಸೇಠ್​ ಆರೋಗ್ಯದ ಕುರಿತು ಬುಲೆಟಿನ್​ ಬಿಡುಗಡೆ ಮಾಡಿತ್ತು. “ತನ್ವೀರ್ ಕುತ್ತಿಗೆ ಭಾಗದಲ್ಲಿ ಗಾಯವಾಗಿದ್ದು, ಮೆದುಳು ಹಾಗೂ ಹೃದಯಕ್ಕೆ ಸಂಬಂಧಿಸಿದ ರಕ್ತನಾಳಗಳಿಗೆ ಹಾನಿ ಉಂಟಾಗಿದೆ. ಹಾಗಾಗಿ ಅವರ ಅರೋಗ್ಯ ಸ್ಥಿತಿ ಗಂಭೀರವಾಗಿದೆ. ಇನ್ನು, 48 ಗಂಟೆ ಕಾಲ ಏನನ್ನೂ ಹೇಳಲಾಗುವುದಿಲ್ಲ,” ಎಂದು ವೈದ್ಯರು ತಿಳಿಸಿದ್ದರು.

ಇದನ್ನೂ ಓದಿ: ಪಿ. ಚಿದಂಬರಂ ಜಾಮೀನು ತೀರ್ಪಿನ ವೇಳೆ ದೆಹಲಿ ಹೈಕೋರ್ಟ್​ ಯಡವಟ್ಟು: ಆಕಸ್ಮಿಕ ತಪ್ಪು ಸರಿಪಡಿಸಿ ಎಂದು ಇಡಿ ಮನವಿ

ನಡೆದದ್ದು ಏನು?: ಭಾನುವಾರ ರಾತ್ರಿ ಸುಮಾರು 11.30 ಗಂಟೆ ಸಂದರ್ಭದಲ್ಲಿ ಮೈಸೂರಿನಲ್ಲಿ ಘಟನೆ ನಡೆದಿದೆ. ತನ್ವೀರ್​ ಆಪ್ತರ ಮದುವೆಯಲ್ಲಿ ಭಾಗಿಯಾಗಿದ್ದರು. ಬನ್ನಿ ಮಂಟಪದಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮದಲ್ಲಿ ತನ್ವೀರ್ ಸೇಠ್ ಕೂಡ ಇದ್ದರು. ಈ ವೇಳೆ ಫರಾನ್ ( 24 ) ಎಂಬ ಯುವಕ ತನ್ವೀರ್​ ಕತ್ತಿಗೆ ಚಾಕು ಹಾಕಿದ್ದಾನೆ. ಗಾಯಗೊಂಡ ತನ್ವೀರ್ ಸೇಠ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಫರಾನ್​​ನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಈ ಕೊಲೆ ಯತ್ನ ಮಾಡಲು ವೈಯಕ್ತಿಕ ದ್ವೇಷ ಕಾರಣ ಎಂದು ಫರಾನ್​ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಮೊದಲು ಸಾಕಷ್ಟು ಬಾರಿ ತನ್ವೀರ್​ ಜೊತೆ ಫರಾನ್​ ಕಾಣಿಸಿಕೊಂಡಿದ್ದ.
---------------
First published:November 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ