ಬಿಜೆಪಿ ಭದ್ರಕೋಟೆಯಾದ ಬೆಳಗಾವಿಯಲ್ಲಿ ಬಜೆಟ್​ ಅಧಿವೇಶನ ನಡೆಸಲು ಸಿಎಂ ಸಿದ್ಧತೆ

ಳಿಗಾಲದ ಅಧಿವೇಶನವನ್ನು ರದ್ದು ಮಾಡಿರುವ ಹಿನ್ನೆಲೆ ಹಾಗೂ ಗೋಕಾಕ್​ನಲ್ಲಿ ರಮೇಶ್​ ಜಾರಕಿಹೊಳಿ, ಅಥಣಿಯಲ್ಲಿ ಮಹೇಶ್​ ಕುಮಟಹಳ್ಳಿ ಭರ್ಜರಿ ಜಯ ದಾಖಲಿಸಿದ ಹಿನ್ನೆಲೆ ಈ ಬಾರಿ ಬಜೆಟ್​ ಅಧಿವೇಶನವನ್ನು ಬೆಳಗಾವಿಯಲ್ಲಿ ಮಾಡೋಣ ಎಂಬ ಸಲಹೆಯನ್ನು ಸಿಎಂ ಬಿಎಸ್​ ಯಡಿಯೂರಪ್ಪ ಅವರಿಗೆ ನೀಡಲಾಗಿದೆ. 

news18-kannada
Updated:December 13, 2019, 12:20 PM IST
ಬಿಜೆಪಿ ಭದ್ರಕೋಟೆಯಾದ ಬೆಳಗಾವಿಯಲ್ಲಿ ಬಜೆಟ್​ ಅಧಿವೇಶನ ನಡೆಸಲು ಸಿಎಂ ಸಿದ್ಧತೆ
ಸಿಎಂ ಬಿ.ಎಸ್​. ಯಡಿಯೂರಪ್ಪ
  • Share this:
ಬೆಂಗಳೂರು(ಡಿ. 13): ಪ್ರವಾಹ ಹಿನ್ನೆಲೆ ಚಳಿಗಾಲ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ವಿಫಲವಾಗಿದ್ದ ಬಿಜೆಪಿ ಸರ್ಕಾರ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆ ಈ ಬಾರಿ ಬಜೆಟ್​ ಅಧಿವೇಶನವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ಮಾಡಲು ನಿರ್ಧರಿಸಿದೆ. 

ಗೋಕಾಕ್​ನಲ್ಲಿ ರಮೇಶ್​ ಜಾರಕಿಹೊಳಿ, ಅಥಣಿಯಲ್ಲಿ ಮಹೇಶ್​ ಕುಮಟಹಳ್ಳಿ ಭರ್ಜರಿ ಜಯ ದಾಖಲಿಸಿದ ಹಿನ್ನೆಲೆ ಈ ಬಾರಿ ಬಜೆಟ್​ ಅಧಿವೇಶನವನ್ನು ಬೆಳಗಾವಿಯಲ್ಲಿ ಮಾಡೋಣ ಎಂಬ ಸಲಹೆಯನ್ನು ಸಿಎಂ ಬಿಎಸ್​ ಯಡಿಯೂರಪ್ಪ ಅವರಿಗೆ ನೀಡಲಾಗಿದೆ.

ಅನರ್ಹರಾದರೂ ಕ್ಷೇತ್ರದ ಜನರು ನಮ್ಮ ಕೈ ಹಿಡಿದು ಗೆಲ್ಲಿಸಿದ್ದಾರೆ. ಈ ಹಿನ್ನೆಲೆ ಉತ್ತರ ಕರ್ನಾಟಕದ ಜನರಿಗೆ ಪ್ರಾಮುಖ್ಯತೆ ನೀಡಬೇಕು. ಅಲ್ಲದೇ ನೆರೆಯಿಂದ ಸಾಕಷ್ಟು ಬಳಲಿರುವ ಜನರಿಗೆ ಇಲ್ಲಿ ಅಧಿವೇಶನ ಮಾಡುವುದರಿಂದ ಸರ್ಕಾರ ನಮ್ಮ ಬಗ್ಗೆ ಕಾಳಜಿ ಹೊಂದಿದೆ ಎಂಬ ಭಾವನೆ ಬರಲಿದೆ. ಅಲ್ಲದೇ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಇನ್ನು ಹೆಚ್ಚಲಿದೆ. ಈ ಕಾರಣದಿಂದ ಈ ಬಾರಿ ಬಜೆಟ್​ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವಂತೆ ಬಿಜೆಪಿ ನೂತನ ಶಾಸಕ ರಮೇಶ್​ ಜಾರಕಿಹೊಳಿ ಸಲಹೆ ನೀಡಿದ್ದರು.

ಈ ಸಲಹೆಯನ್ನು ಸಿಎಂ ಸ್ವೀಕರಿಸಿದ್ದು, ಈ ಕುರಿತು ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಕೂಡ ಚರ್ಚೆ ನಡೆಸಿದ್ದಾರೆ. ನಮ್ಮ ಸರ್ಕಾರ ರಚಿಸುವಲ್ಲಿ ರಮೇಶ್​ ಜಾರಕಿಹೊಳಿ ಪಾತ್ರ ಅಪಾರ. ಈ ಹಿನ್ನೆಲೆ ಅವರ ಮನವಿಗೆ ಕಿವಿಗೊಡಬೇಕು. ಅಲ್ಲದೆ ಚಳಿಗಾಲದ ಅಧಿವೇಶನವನ್ನು ರದ್ದು ಮಾಡಿರುವ ಹಿನ್ನೆಲೆ ಈ ಬಾರಿ ಅಲ್ಲಿ ಬಜೆಟ್​ ಅಧಿವೇಶನ ಮಾಡುವುದು ಸೂಕ್ತ. ಬೇಕಾದರೆ ಜಂಟಿ ಅಧಿವೇಶನವನ್ನು ಬೆಂಗಳೂರಿನಲ್ಲಿಯೇ ನಡೆಸೋಣ ಎಂದು ಸಿಎಂ ಕೂಡ ಸಚಿವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ಈರುಳ್ಳಿ ಬೆಳೆದು ಕೋಟಿ ಒಡೆಯನಾದ ರೈತ; ಸತತ 10 ವರ್ಷವೂ ಉಳ್ಳಾಗಡ್ಡಿಯಲ್ಲಿ ಲಾಭ ಕಂಡ ಮಾದರಿ ಕೃಷಿಕ

ಡಿಸಿಎಂ ಲಕ್ಷಣ ಸವದಿ ಸೇರಿದಂತೆ ಸರ್ಕಾರದಲ್ಲಿ ಪ್ರಮುಖ ನಾಯಕರು ಬೆಳಗಾವಿಯವರೇ ಆಗಿರುವುದರಿಂದ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಈ ಕಾರಣದಿಂದ ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಬಜೆಟ್​ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ಸಿಎಂ ಕೂಡ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
Published by: Seema R
First published: December 13, 2019, 12:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading