HOME » NEWS » State » CM BS YEDIYURAPPA OUTRAGE AGAINST HEALTH MINISTER K SUDHAKAR AND CHAMARAJANAGAR DC LG

ಸಚಿವ ಸುಧಾಕರ್​, ಚಾಮರಾಜನಗರ ಡಿಸಿ ವಿರುದ್ಧ ಸಿಎಂ ಕೆಂಡಾಮಂಡಲ; ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯ ಸಹಿಸಲ್ಲ ಎಂದ ಬಿಎಸ್​ವೈ

ಆಕ್ಸಿಜನ್ ಕೊರತೆ ಹೇಗೆ ಉಂಟಾಯಿತು? ಅಷ್ಟು ದೊಡ್ಡ ಪ್ರಮಾಣದಲ್ಲಿ ಸಾವು ಸಂಭವಿಸಿದೆ. ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯ ಸಹಿಸಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ. ರಾಜ್ಯದ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಈ ರೀತಿ ಆಗದಂತೆ ಎಚ್ಚರವಹಿಸಿ ಎಂದು ಸಿಎಂ ಸುಧಾಕರ್​ ಖಡಕ್ ಸೂಚನೆ ನೀಡಿದರು.

news18-kannada
Updated:May 3, 2021, 12:23 PM IST
ಸಚಿವ ಸುಧಾಕರ್​, ಚಾಮರಾಜನಗರ ಡಿಸಿ ವಿರುದ್ಧ ಸಿಎಂ ಕೆಂಡಾಮಂಡಲ; ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯ ಸಹಿಸಲ್ಲ ಎಂದ ಬಿಎಸ್​ವೈ
ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ
  • Share this:
ಬೆಂಗಳೂರು(ಮೇ 03):  ಚಾಮರಾಜನಗರ ಕೋವಿಡ್​ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರ ಮತ್ತು ಸಚಿವರ ವಿರುದ್ಧ ಮೃತರ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಘಟನೆಯ ಬಗ್ಗೆ ಮಾಹಿತಿ ಬಂದ ಕೂಡಲೇ ಸಿಎಂ ಬಿಎಸ್​ ಯಡಿಯೂರಪ್ಪ ಆರೋಗ್ಯ ಸಚಿವ ಕೆ.ಸುಧಾಕರ್​ ಅವರಿಗೆ ತುರ್ತು ಬುಲಾವ್ ನೀಡಿದ್ದರು. ಅದರಂತೆ ಸಚಿವ ಸುಧಾಕರ್ ಕೂಡಲೇ ಸಿಎಂ ಭೇಟಿಗೆ ತೆರಳಿದ್ದರು.

ಚಾಮರಾಜನಗರ ಕೋವಿಡ್ ಮೃತರ ಬಗ್ಗೆ ಸಿಎಂ ಬಿಎಸ್​ವೈ ಸುಧಾಕರ್​ ಅವರಿಂದ ಮಾಹಿತಿ ಪಡೆದರು. ಆಕ್ಸಿಜನ್ ಕೊರತೆ ಹೇಗೆ ಉಂಟಾಯಿತು? ಅಷ್ಟು ದೊಡ್ಡ ಪ್ರಮಾಣದಲ್ಲಿ ಸಾವು ಸಂಭವಿಸಿದೆ. ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯ ಸಹಿಸಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ. ರಾಜ್ಯದ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಈ ರೀತಿ ಆಗದಂತೆ ಎಚ್ಚರವಹಿಸಿ ಎಂದು ಸಿಎಂ ಸುಧಾಕರ್​ ಖಡಕ್ ಸೂಚನೆ ನೀಡಿದರು.

24 ಜನರು ಆಕ್ಸಿಜನ್​ ಕೊರತೆಯಿಂದ ಸಾವನ್ನಪ್ಪಿಲ್ಲ; ವೈದ್ಯರಿಂದ ಡೆತ್ ರಿಪೋರ್ಟ್​ ಕೇಳಿದ್ದೇನೆ; ಸಚಿವ ಸುರೇಶ್ ಕುಮಾರ್​

ಸಿಎಂ ಭೇಟಿ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ‌.ಕೆ.ಸುಧಾಕರ್,  ಚಾಮರಾಜನಗರದ ಘಟನೆ ನೋವಿನ ಸಂಗತಿ. ಅತ್ಯಂತ ದುರದೃಷ್ಟಕರ ಘಟನೆ. ನಾನು ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗೆ ತೆರಳುತ್ತೇನೆ. ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುತ್ತೇನೆ. ಸರಿಯಾದ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತೇನೆ.  ಹೊಂದಾಣಿಕೆ ನ್ಯೂನ್ಯತೆ ಏನಿದೆ ನೋಡಬೇಕಿದೆ.  ಆ ಬಗ್ಗೆ ಸ್ಪಷ್ಟ ಮಾಹಿತಿ ಪಡೆದು ಮಾತಾನಾಡುತ್ತೇನೆ.  ಸುಮ್ಮನೇ ಮೊದಲೇ ಮಾತನಾಡಿ ಗೊಂದಲ ಸೃಷ್ಟಿ ಮಾಡಬಾರದು ಎಂದು ಹೇಳಿದರು.
Youtube Video

ಆರೋಗ್ಯ ಸಚಿವ ಡಾ.ಸುಧಾಕರ್​, ಚಾಮರಾಜನಗರ ಜಿಲ್ಲಾಡಳಿತದ ಮೇಲೆ ಸಿಎಂ ಬಿಎಸ್ ಯಡಿಯೂರಪ್ಪ ಕೆಂಡಾಮಂಡಲರಾಗಿದ್ದಾರೆ. ಆಂತರಿಕ ತನಿಖೆಗೆ ಸೂಚನೆ ನೀಡಿರುವ ಸಿಎಂ, ಘಟನೆ ಕುರಿತಾಗಿ ವರದಿಯನ್ನೂ ಕೇಳಿದ್ದಾರೆ. ಜೊತೆಗೆ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಯಡಿಯೂರಪ್ಪ ಕಿಡಿಕಾರಿದರು. ಚಾಮರಾಜನಗರ ಡಿಸಿ ಡಾ.ಎಂ.ಆರ್​.ರವಿಗೆ ಬಿಎಸ್​ವೈ ತರಾಟೆ ತೆಗೆದುಕೊಂಡಿದ್ದಾರೆ. ಇಷ್ಟೇ ಅಲ್ಲದೇ,  ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರನ್ನೂ ತರಾಟೆಗೆ ತೆಗೆದುಕೊಂಡು, ಇನ್ನೊಂದು ಗಂಟೆಯೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
Published by: Latha CG
First published: May 3, 2021, 12:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories