ಭದ್ರಾವತಿ ಉಕ್ಕು ಕಾರ್ಖಾನೆ ಖಾಸಗೀಕರಣಕ್ಕೆ ಕೇಂದ್ರ ಚಿಂತನೆ; ಮಾರದಂತೆ ಮನವೊಲಿಕೆಗೆ ಮುಂದಾದ ಬಿಎಸ್​ವೈ

ನೀತಿ ಆಯೋಗದ ಸೂಚನೆ ಮೇರೆಗೆ ಅವುಗಳ ಮೇಲೆ ಹೂಡಿಕೆ ಮಾಡಿರುವ ಬಂಡವಾಳ ಹಿಂತೆಗೆದುಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದರೆ, ವಿಐಎಸ್‌ಎಲ್‌ ಖಾಸಗೀಕರಣ ಮಾಡದಂತೆ ಕೇಂದ್ರ ಸಚಿವರ ಮೇಲೆ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವರು ಒತ್ತಡ ಹಾಕಿರುವುದಾಗಿ ತಿಳಿದು ಬಂದಿದೆ.

news18-kannada
Updated:January 30, 2020, 6:41 PM IST
ಭದ್ರಾವತಿ ಉಕ್ಕು ಕಾರ್ಖಾನೆ ಖಾಸಗೀಕರಣಕ್ಕೆ ಕೇಂದ್ರ ಚಿಂತನೆ; ಮಾರದಂತೆ ಮನವೊಲಿಕೆಗೆ ಮುಂದಾದ ಬಿಎಸ್​ವೈ
ಬಿಎಸ್​​ವೈ, ಧರ್ಮೇಂದ್ರ ಪ್ರಧಾನ್​​​
  • Share this:
ಬೆಂಗಳೂರು(ಜ.30): ಅನಾದಿಕಾಲದಿಂದಲೂ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸಾವಿರಾರು ಜನರಿಗೆ ನೌಕರಿ ನೀಡುತ್ತಾ ಬಂದಿದೆ. ಇಂದಿಗೂ ಹತ್ತಾರು ಸಾವಿರ ಜನರನ್ನು ಸಾಕಿ ಸಲಹುತ್ತಾ ದೇಶದ ಕೈಗಾರಿಕಾ ವಲಯಕ್ಕೆ ಅಪಾರವಾದ ಕೊಡುಗೆ ನೀಡುತ್ತಿದೆ. ಸರ್‌ ಎಂ. ವಿಶ್ವೇಶ್ವರಯ್ಯ ಚಾಕಚಕ್ಷತೆ ಮತ್ತು ಮೈಸೂರು ಮಹಾರಾಜರ ಉದಾರ ದೇಣಿಗೆಯಿಂದ ನಿರ್ಮಾಣವಾದ ಈ ಇತಿಹಾಸವುಳ್ಳ ಕಾರ್ಖಾನೆಯೀಗ ಸಂಪೂರ್ಣ ಮುಚ್ಚುವ ಹಂತಕ್ಕೆ ಬಂದಿದೆ.

ಹೌದು, ಈ ಹಿಂದೆಯೇ ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ (ಭಾರತೀಯ ಉಕ್ಕು ಪ್ರಾಧಿಕಾರ) ನಾಡಿನ ಹೆಮ್ಮೆಯ ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಮಾರಾಟ ಮಾಡಲು ಟೆಂಡರ್‌ ಹೊರಡಿಸಿದೆ ಎಂಬ ಸುದ್ದಿ ಹರಿದಾಡಿತ್ತು. ಸರ್ಕಾರ ತನ್ನ ಬಂಡವಾಳ ಹಿಂತೆಗೆದು ಖಾಸಗೀಕರಣ ಮಾಡಲು ನಿರ್ಧರಿಸಿತ್ತು. ಇದರ ಸುತ್ತ ಸಾಕಷ್ಟು ಚರ್ಚೆಗಳು ನಡೆದವು. ಕಾರ್ಖಾನೆ ಇಂದಿಗೂ ಸುಸ್ಥಿತಿಯಲ್ಲಿದೆ. ಆದರೆ ಇಲ್ಲಿನ ಉದ್ಯೋಗಿಗಳು ನಿಪುಣರು. ಯಾವ ಅದಿರಿಗೂ ಕೊರತೆ ಇಲ್ಲ. ಆದರೀಗ, ರಾಜಕಾರಣಿಗಳ ಹಿತಾಸಕ್ತಿ ಕೊರತೆಯಿಂದಾಗಿ ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲೊರಟಿದೆ ಎಂಬ ಮಾತುಗಳು ಕೇಳಿಬಂದವು.

ಆಗ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರ ಈ ಬಗ್ಗೆ ತುಟಿಯೇ ಬಿಚ್ಚುತ್ತಿಲ್ಲ ಎಂದು ಆರೋಪಿಸಲಾಗುತ್ತಿತ್ತು. ಈ ಮಧ್ಯೆಯೇ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಅದರಂತೆಯೇ ಇಂದು ದೆಹಲಿಯಲ್ಲಿ ವಿಐಎಸ್‌ಎಲ್‌ ಕಾರ್ಖಾನೆ ಸಂಬಂಧ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​​ರನ್ನು ಭೇಟಿಯಾಗಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಈ ಕಾರ್ಖಾನೆ ಉಳಿಸಲು ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಧರ್ಮೇಂದ್ರ ಪ್ರಧಾನ್​​​​ ಸಿಎಂ ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಪರಮೇಶ್ವರ್​​, ಎಚ್​​.ಡಿ ರೇವಣ್ಣ, ಡಿಕೆಶಿ, ಜಾರ್ಜ್, ಎಂ.ಬಿ ಪಾಟೀಲ್ ಭದ್ರತೆ ಕಡಿತಕ್ಕೆ ತುರ್ತು ಆದೇಶ

ಇನ್ನೊಂದೆಡೆ ಕಾರ್ಖಾನೆಯೂ ಪ್ರತಿವರ್ಷ 100 ಕೋಟಿ ರೂ. ನಷ್ಟ ಹೊಂದುತ್ತಿದೆ. ಕೇಂದ್ರದ ಪ್ರಕಾರ ವಿಐಎಸ್‌ಎಲ್‌ ಜತೆಗೆ 42 ಉದ್ದಿಮೆಗಳು ನಷ್ಟದಲ್ಲಿವೆ. ನೀತಿ ಆಯೋಗದ ಸೂಚನೆ ಮೇರೆಗೆ ಅವುಗಳ ಮೇಲೆ ಹೂಡಿಕೆ ಮಾಡಿರುವ ಬಂಡವಾಳ ಹಿಂತೆಗೆದುಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದರೆ, ವಿಐಎಸ್‌ಎಲ್‌ ಖಾಸಗೀಕರಣ ಮಾಡದಂತೆ ಕೇಂದ್ರ ಸಚಿವರ ಮೇಲೆ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವರು ಒತ್ತಡ ಹಾಕಿರುವುದಾಗಿ ತಿಳಿದು ಬಂದಿದೆ.

ಕಳೆದ ಐದು ವರ್ಷದ ಅವಧಿಯಲ್ಲಿ ಎಲ್ಲ ರೀತಿಯ ಪ್ರಯತ್ನಗಳಿಂದಾಗಿ ಬಂಡವಾಳ ಹೂಡಿಕೆ ಮಾಡುವ ಹಂತಕ್ಕೆ ಹೋಗಿದ್ದ ಕೇಂದ್ರ ಮತ್ತೆ ತನ್ನ ಹಿಂದಿನ ತೀರ್ಮಾನಕ್ಕೆ ಹೋಗಿದ್ದೇಕೆ ಎಂಬ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ಎಲ್ಲೋ ಒಂದು ಕಡೆ ನಷ್ಟದಲ್ಲಿರುವ ಎಲ್ಲ ಉದ್ದಿಮೆಗಳೊಂದಿಗೆ ವಿಐಎಸ್‌ಎಲ್‌ ಸಹ ಸೇರಿರುವುದರಿಂದ ಈ ರೀತಿ ಆಗಿದೆ. ಆದರೆ, ಆ ನಿರ್ಧಾರದಿಂದ ಹೊರಬಂದು ಬಂಡವಾಳ ಹೂಡಿಕೆಗೆ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
First published: January 30, 2020, 6:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading