• Home
  • »
  • News
  • »
  • state
  • »
  • ದೆಹಲಿಯಲ್ಲಿ ರಾಜನಾಥ್ ಸಿಂಗ್ ಭೇಟಿಯಾದ ಸಿಎಂ; 2021 ಏರೋ ಇಂಡಿಯಾ ಶೋ ಬೆಂಗಳೂರಿನಲ್ಲೇ ನಡೆಸುವಂತೆ ಮನವಿ

ದೆಹಲಿಯಲ್ಲಿ ರಾಜನಾಥ್ ಸಿಂಗ್ ಭೇಟಿಯಾದ ಸಿಎಂ; 2021 ಏರೋ ಇಂಡಿಯಾ ಶೋ ಬೆಂಗಳೂರಿನಲ್ಲೇ ನಡೆಸುವಂತೆ ಮನವಿ

ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಸಿಎಂ ಬಿಎಸ್​ವೈ. ಡಿಸಿಎಂ ಗೋವಿಂದ ಕಾರಜೋಳ ಇದ್ದಾರೆ.

ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಸಿಎಂ ಬಿಎಸ್​ವೈ. ಡಿಸಿಎಂ ಗೋವಿಂದ ಕಾರಜೋಳ ಇದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡ ಮಗನ ವಿವಾಹ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾದರು. ದೆಹಲಿಯ ಜೆ.ಪಿ. ನಡ್ಡ ನಿವಾಸದಲ್ಲಿ ಮದುವೆ ಸಮಾರಂಭ ನಡೆಯುತ್ತಿದೆ. ವಿವಾಹ ಕಾರ್ಯಕ್ರಮ ಮುಗಿದ ಬಳಿಕ ಸಿಎಂ ಬಿಎಸ್​ವೈ ರಾತ್ರಿಯೇ ಬೆಂಗಳೂರಿಗೆ ತೆರಳಿದರು.

  • Share this:

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮಗನ ಮದುವೆಗಾಗಿ ದೆಹಲಿಗೆ ಆಗಮಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು.

ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ತೆರಳಿದ ಸಿಎಂ ಬಿಎಸ್​ವೈ, 2021ರ ಏರೋ‌ ಇಂಡಿಯಾ ಶೋಅನ್ನು ಬೆಂಗಳೂರಿನಲ್ಲೇ ನಡೆಸುವಂತೆ ರಕ್ಷಣಾ ಸಚಿವರಲ್ಲಿ ಮನವಿ ಮಾಡಿದರು. ಹಾಗೆಯೇ, ವೆಲ್ಲಾರ ಜಂಕ್ಷನ್​ನಲ್ಲಿ ಅವಶ್ಯಕತೆ ಇರುವ ರಕ್ಷಣಾ ಇಲಾಖೆಯ ಭೂಮಿಯನ್ನು ನಮ್ಮ ಮೆಟ್ರೋಗೆ ಹಸ್ತಾಂತರ ಮಾಡಬೇಕು ಅಂತ‌ ಮನವಿ ಮಾಡಿದರು. ಸಿಎಂ ಮನವಿಗೆ ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಎಂ ಯಡಿಯೂರಪ್ಪ ಅವರೊಂದಿಗೆ ಡಿಸಿಎಂ ಗೋವಿಂದ ಕಾರಜೋಳ ಜೊತೆಗಿದ್ದರು.

ಸಂಪ್ರದಾಯದಂತೆ ಏರೋ ಇಂಡಿಯಾ ಶೋ ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ನಡೆಯುತ್ತಿದೆ. ಆದರೆ, ಕಳೆದ ವರ್ಷ ಏರೋ ಇಂಡಿಯಾ ಶೋ ಅನ್ನು ಗೋವಾದಲ್ಲಿ ನಡೆಸಲು ಸಕಲ ತಯಾರಿಯೂ ನಡೆದಿತ್ತು. ಆದರೆ, ಹೆಚ್ಚಾದ ಭಾರೀ ಒತ್ತಡಗಳ ನಂತರ ಬೆಂಗಳೂರಿನಲ್ಲೇ ಏರ್ ಶೋ ನಡೆಸಲಾಯಿತು. ಆದರೆ, ಈ ವೇಳೆ ಪಾರ್ಕಿಂಗ್ ಲಾಟ್​ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ, ನೂರಾರು ವಾಹನಗಳು ಸುಟ್ಟು ಕರಕಲಾಗಿದ್ದವು. ಹೀಗಾಗಿ ಮುಂದಿನ ಏರೋ ಇಂಡಿಯಾ ಶೋ ಅನ್ನು ಬೇರೆಡೆ ನಡೆಸಲು ಚಿಂತನೆ ಸಹ ನಡೆದಿದೆ ಎನ್ನಲಾಗಿದೆ. ಹೀಗಾಗಿ ಇಂದು ಸಿಎಂ ಬಿಎಸ್​ವೈ ಅವರು ರಕ್ಷಣಾ ಸಚಿವರನ್ನು ಭೇಟಿಯಾಗಿ ಬೆಂಗಳೂರಿನಲ್ಲೇ ಏರೋ ಇಂಡಿಯಾ ಶೋ ನಡೆಸುವಂತೆ ಮನವಿ ಮಾಡಿದ್ದಾರೆ.

ಇದನ್ನು ಓದಿ: ಮುಂದಿನ ಏರ್​ ಶೋ ಎಲ್ಲಿ ನಡೆಯಲಿದೆ ಗೊತ್ತೇ..?

ವಿವಾಹ ಕಾರ್ಯಕ್ರಮದಲ್ಲಿ ಸಿಎಂ ಭಾಗಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡ ಮಗನ ವಿವಾಹ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾದರು. ದೆಹಲಿಯ ಜೆ.ಪಿ. ನಡ್ಡ ನಿವಾಸದಲ್ಲಿ ಮದುವೆ ಸಮಾರಂಭ ನಡೆಯುತ್ತಿದೆ. ವಿವಾಹ ಕಾರ್ಯಕ್ರಮ ಮುಗಿದ ಬಳಿಕ ಸಿಎಂ ಬಿಎಸ್​ವೈ ರಾತ್ರಿಯೇ ಬೆಂಗಳೂರಿಗೆ ತೆರಳಿದರು.

First published: